ಅನ್​ಲಾಕ್​ 2 ಮಾರ್ಗಸೂಚಿ; ಜುಲೈ 31ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ

ಸಿನಿಮಾ ಮಂದಿರ, ಜಿಮ್​, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್​ಗಳು, ಬಾರ್, ಆಡಿಟೋರಿಯಂ, ಅಸೆಂಬ್ಲಿ ಹಾಲ್, ಮತ್ತು ಅದೇ ರೀತಿಯ ಹಾಲ್​ಗಳಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇತರ ದೊಡ್ಡ ಸಮಾರಂಭಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಆರಂಭಕ್ಕೆ ಪ್ರತ್ಯೇಕ ದಿನಾಂಕ ನಿಗದಿಗೊಳಿಸಲಾಗುತ್ತದೆ. 

news18-kannada
Updated:June 29, 2020, 10:47 PM IST
ಅನ್​ಲಾಕ್​ 2 ಮಾರ್ಗಸೂಚಿ; ಜುಲೈ 31ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ
ಸಾಂದರ್ಭಿಕ ಚಿತ್ರ.
 • Share this:
ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಇಂದು ಅನ್​ಲಾಕ್​ 2 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕಂಟೈನ್​ಮೆಂಟ್​ ವಲಯಗಳಲ್ಲಿ ಚಟುವಟಿಕೆ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.

ಹೊಸ ಮಾರ್ಗಸೂಚಿಗಳು ಜುಲೈ 1ರಿಂದ ಕಾರ್ಯಗತವಾಗಲಿದ್ದು, ಹಂತಹಂತವಾಗಿ ಚಟುವಟಿಕೆಗಳು ಕಾರ್ಯಾರಂಭವಾಗುವ ಪ್ರಕ್ರಿಯೆ ವಿಸ್ತರಣೆಯಾಗಿದೆ ಎಂದು ಇಂದು ಬಿಡುಗಡೆಯಾಗಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆಯಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಅಭಿಪ್ರಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅನ್​ಲಾಕ್​ 2 ಮಾರ್ಗಸೂಚಿಗಳು


 • ದೇಶೀಯ ವಿಮಾನಗಳ  ಹಾರಾಟ ಮತ್ತು ರೈಲುಗಳ ಓಡಾಟಕ್ಕೆ ಸ್ಥಳೀಯ ರಾಜ್ಯ ಸರ್ಕಾರಗಳ ಅನುಮತಿ ಮೇರೆಗೆ ಅವಕಾಶ ನೀಡಲಾಗಿದೆ. ಈ ಕಾರ್ಯಾಚರಣೆ ಮುಂದಿನ ಆದೇಶದವರೆಗೂ ಮುಂದುವರೆಯಲಿದೆ.

 • ರಾತ್ರಿ ಕರ್ಫ್ಯೂ ಸಮಯವನ್ನು ಮತ್ತಷ್ಟು ಸಡಿಲಿಸಲಾಗುತ್ತಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದಲ್ಲದೆ, ಅನೇಕ ಕೈಗಾರಿಕಾ ಘಟಕಗಳ ಕಾರ್ಯಾಚರಣೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸರಕುಗಳ ಸಾಗಾಣಿಕೆಗೆ ಮತ್ತಷ್ಟು ವಿನಾಯಿತಿ ನೀಡಲಾಗಿದೆ.

 • ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸುದೀರ್ಘ ಸಮಾಲೋಚನೆಯ ನಂತರ, ಜುಲೈ 31 ರವರೆಗೆ ಶಾಲೆ, ಕಾಲೇಜುಗಳು ಮತ್ತು ತರಬೇತಿ ಸಂಸ್ಥೆಗಳು ಮುಚ್ಚಲು ನಿರ್ದೇಶಿಸಲಾಗಿದೆ.  
 • ಆಯಾ ಪ್ರದೇಶಗಳ ಪರಿಸ್ಥಿತಿಗೆ ಅನುಗುಣವಾಗಿ ಶಾಪ್​ಗಳನ್ನು ತೆರೆಯಬಹುದು. ಹಾಗೆ ತೆರೆದ ಅಂಗಡಿಗಳಲ್ಲೂ ಒಂದೇ ಕಾಲದಲ್ಲಿ ಐದು ಜನರಿಗಿಂತ ಹೆಚ್ಚು ಜನರು ಇರುವಂತಿಲ್ಲ. ಆದಾಗ್ಯೂ ಹೆಚ್ಚು ಜನರ ಇದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

 • ರಾಜ್ಯ ಮತ್ತು ಕೇಂದ್ರ ಸರ್ಕಾರದ ತರಬೇತಿ ಕೇಂದ್ರಗಳ ಕಾರ್ಯ ಚಟುವಟಿಕೆ ಆರಂಭಕ್ಕೆ ಜುಲೈ 15ರಿಂದ ಅವಕಾಶ ನೀಡಲಾಗುವುದು. ಈ ಸಂಬಂಧ ಭಾರತ ಸರ್ಕಾರದ ವೈಯಕ್ತಿಕ ಮತ್ತು ತರಬೇತಿ ಸಂಸ್ಥೆ ಮಾಹಿತಿ ನೀಡಲಿದೆ.

 • ವಂದೇ ಭಾರತ್ ಮಿಷನ್ ಯೋಜನೆ ಅಡಿ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸೀಮಿತ ರೀತಿಯಲ್ಲಿ ಅನುಮತಿ ನೀಡಲಾಗಿದೆ. ಮತ್ತಷ್ಟು ಅವಕಾಶ ನೀಡುವಿಕೆ ಹಂತಹಂತವಾಗಿ ನಡೆಯಲಿದೆ.

 • ಕಂಟೈನ್​ಮೆಂಟ್​ ವಲಯಗಳನ್ನು ಹೊರತುಪಡಿಸಿ ಈ ಕೆಳಗಿನ ಎಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. 

 • ಮೆಟ್ರೋ ರೈಲು

 • ಸಿನಿಮಾ ಮಂದಿರ, ಜಿಮ್​, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್​ಗಳು, ಬಾರ್, ಆಡಿಟೋರಿಯಂ, ಅಸೆಂಬ್ಲಿ ಹಾಲ್, ಮತ್ತು ಅದೇ ರೀತಿಯ ಹಾಲ್​ಗಳಿಗೆ ಅವಕಾಶ ನೀಡಲಾಗಿದೆ.

 • ಸಾಮಾಜಿಕ / ರಾಜಕೀಯ / ಕ್ರೀಡೆ / ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ / ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇತರ ದೊಡ್ಡ ಸಮಾರಂಭಗಳು

 • ಪರಿಸ್ಥಿತಿಗೆ ಅನುಗುಣವಾಗಿ ಇವುಗಳ ಆರಂಭಕ್ಕೆ ಪ್ರತ್ಯೇಕ ದಿನಾಂಕ ನಿಗದಿಗೊಳಿಸಲಾಗುತ್ತದೆ. 

First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading