Unlock 2.0 Guidelines: ನಾಳೆಗೆ ಅನ್ ಲಾಕ್ -1 ಮುಕ್ತಾಯ; ಜುಲೈ‌ 1ರಿಂದ ಅನ್ ಲಾಕ್ -2 ಜಾರಿ, ಏನಿರಲಿದೆ? ಏನಿರಲ್ಲ? 

ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಬಹುತೇಕ ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ಈ ಹಿಂದೆ ಆಗಸ್ಟ್ ಮಧ್ಯದಿಂದ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದರು.

news18-kannada
Updated:June 29, 2020, 1:22 PM IST
Unlock 2.0 Guidelines: ನಾಳೆಗೆ ಅನ್ ಲಾಕ್ -1 ಮುಕ್ತಾಯ; ಜುಲೈ‌ 1ರಿಂದ ಅನ್ ಲಾಕ್ -2 ಜಾರಿ, ಏನಿರಲಿದೆ? ಏನಿರಲ್ಲ? 
ಸಾಂದರ್ಭಿಕ ಚಿತ್ರ.
  • Share this:
ನವದೆಹಲಿ(ಜೂ.29): ಕೊರೋನಾ ನಿಯಂತ್ರಿಸಲು ಜಾರಿಗೆ ತಂದಿದ್ದ ಲಾಕ್​ಡೌನ್​ ನಿಯಮಗಳನ್ನು ಸಡಿಲಿಸಿ ಜೂನ್ 1ರಿಂದ ಅನ್ ಲಾಕ್ -1 ಮಾಡಲಾಗಿತ್ತು. ನಾಳೆಗೆ ಅನ್ ಲಾಕ್-1 ಮುಕ್ತಾಯವಾಗಲಿದ್ದು ಜುಲೈ 1ರಿಂದ ಅನ್ ಲಾಕ್- 2 ಶುರುವಾಗಲಿದೆ. ಅನ್ ಲಾಕ್ 2ನಲ್ಲಿ ಏನೇನು ನಿರ್ಬಂಧಗಳಿರುತ್ತವೆ? ಏನೆಲ್ಲಾ ವಿನಾಯಿತಿಗಳಿರುತ್ತವೆ ಎಂಬ ವಿವರ ಇಲ್ಲಿದೆ.

ದೇಶಾದ್ಯಂತ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಅನ್ ಲಾಕ್-2ನಲ್ಲಿ ಹೆಚ್ಚಿನ ವಿನಾಯಿತಿಗಳು ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಅನ್ ಲಾಕ್-2 ವೇಳೆ ಮುಖ್ಯವಾಗಿ ಶಾಲಾ ಕಾಲೇಜುಗಳನ್ನು ತೆರೆಯುವ ಬಗ್ಗೆ, ವಿಮಾನ ಹಾರಾಟಗಳ ಬಗ್ಗೆ ಮತ್ತು ಮೆಟ್ರೋ ಸಂಚಾರ ಆರಂಭಿಸುವ ಬಗ್ಗೆ ಹೊಸ ಮಾರ್ಗಸೂಚಿ ಹೊರಬೀಳಲಿದೆ.

ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಬಹುತೇಕ ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ಈ ಹಿಂದೆ ಆಗಸ್ಟ್ ಮಧ್ಯದಿಂದ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದರು.

Coronavirus updates Chamarajanagar: ಚಾಮರಾಜನಗರದಲ್ಲಿ ಇಂದಿನಿಂದ ಸಂಜೆ 4ರಿಂದ ಬೆಳಿಗ್ಗೆ 6ರವರೆಗೆ ಸೆಕ್ಷನ್​ 144 ಜಾರಿ

ಈ ನಡುವೆ‌ ಕೊರೋನಾ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ, ಐಸಿಎಸ್ಇ, ಐಎಸ್ ಸಿ ಮತ್ತು ಹಲವಾರು ಇತರೆ ರಾಜ್ಯ ಮಂಡಳಿಗಳು 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ  ತಕ್ಷಣಕ್ಕೆ ತರಗತಿಗಳನ್ನು ಪುನರಾರಂಭಿಸಲು ಮನಸ್ಸಿಲ್ಲದಿರುವುದು ಗೊತ್ತಾಗುತ್ತದೆ. ಆದುದರಿಂದ ಅನ್ ಲಾಕ್ -2 ವೇಳೆ ಶಾಲಾ-ಕಾಲೇಜು ತೆರೆಯಲು ಅನುಮತಿ ಸಿಗುವ ಸಾಧ್ಯತೆಗಳಿಲ್ಲ.

ಅಂತರಾಷ್ಟ್ರೀಯ ವಿಮಾನಯಾನ ಆರಂಭಿಸುವ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯುತ್ತಿದೆ. ವಂದೇ ಭಾರತ್ ಮಿಷನ್‌ನಲ್ಲಿ ಏರ್ ಇಂಡಿಯಾ ಏಕಸ್ವಾಮ್ಯದ ಬಗ್ಗೆ ಇತರೆ ವಿಮಾನಯಾನ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಜುಲೈ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನಗಳು ಪುನರಾರಂಭಗೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಗೆ ವಿಮಾನ ಹಾರಾಟ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.

ಈ ನಡುವೆ ಕೊರೋನಾ ಪರಿಸ್ಥಿತಿ ಹಿಡಿತಕ್ಕೆ ಬಂದರೆ ಮತ್ತು  ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದರೆ ಜುಲೈನಲ್ಲಿ ದೇಶಿಯ ವಿಮಾನ‌ ಹಾರಾಟವನ್ನು ಹೆಚ್ಚಿಸಬಹುದು  ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯದಂತೆ ರಾಜ್ಯಗಳ ಸಲಹೆ ಆಧರಿಸಿ ವಿಮಾನ ಹಾರಾಟ ಆರಂಭಿಸುವ ಸಾಧ್ಯತೆ ಇದೆ.

ಇದಲ್ಲದೆ, ಮೆಟ್ರೋ ರೈಲು ಸೇವೆಗಳನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ  ಸದ್ಯಕ್ಕೆ ಮೆಟ್ರೋ ಸಂಚಾರ ಆರಂಭಿಸುವ ಸಾಧ್ಯತೆಗಳಿಲ್ಲ. ಇವುಗಳೊಟ್ಟಿಗೆ ಅನ್ ಲಾಕ್ -2 ವೇಳೆ ಕಂಟೋನ್ಮೆಂಟ್ ಜೋನ್ ಗಳಲ್ಲಿ ರಾತ್ರಿ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading