ಅನ್‌ಲಾಕ್‌-4.0; ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ, ಏನುಂಟು..ಏನಿಲ್ಲ?

ಕಳೆದ ಮೂರು ತಿಂಗಳಿನಿಂದ ಅನ್‌ಲಾಕ್‌ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಸಹ ಶಾಲಾ-ಕಾಲೇಜುಗಳು ಚಿತ್ರಮಂದಿರ ಸೇರಿದಂತೆ ಅನೇಕ ಸೇವೆಗಳಗೆ ನಿಷೇಧ ಹೇರಲಾಗಿತ್ತು. ಇದೀಗ ಸೆಪ್ಟೆಂಬರ್ 01 ರಿಂದ ಅನ್‌ಲಾಕ್-04 ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಹಲವಾರು ಸೇವೆ ಮತ್ತು ಕಾರ್ಯಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆದರೆ, ಕೆಲವು ಸೇವೆಗಳಿಗೆ ವಿಧಿಸಲಾಗಿದ್ದ ನಿಷೇಧವನ್ನು ಮಾತ್ರ ಈಗಲೂ ಮುಂದುವರೆಸಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
ನವ ದೆಹಲಿ (ಆಗಸ್ಟ್‌ 29); ಮಾರಕ ಕೊರೋನಾ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶದ ಮೇಲೆ ಮಾರ್ಚ್.25 ರಂದು ಲಾಕ್‌ಡೌನ್ ಹೇರಿತ್ತು. ಆದರೂ, ಈ ಸೋಂಕನ್ನು ನಿಯಂತ್ರಿಸುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕಳೆದ ಮೂರು ತಿಂಗಳಿನಿಂದ ಹಂತ ಹಂತವಾಗಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಿಸಿದೆ. ಇದೀಗ ನಾಲ್ಕನೇ ಹಂತದ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ಇಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕಳೆದ ಮೂರು ತಿಂಗಳಿನಿಂದ ಅನ್‌ಲಾಕ್‌ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಸಹ ಶಾಲಾ-ಕಾಲೇಜುಗಳು ಚಿತ್ರಮಂದಿರ ಸೇರಿದಂತೆ ಅನೇಕ ಸೇವೆಗಳಗೆ ನಿಷೇಧ ಹೇರಲಾಗಿತ್ತು. ಇದೀಗ ಸೆಪ್ಟೆಂಬರ್ 01 ರಿಂದ ಅನ್‌ಲಾಕ್-04 ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಹಲವಾರು ಸೇವೆ ಮತ್ತು ಕಾರ್ಯಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆದರೆ, ಕೆಲವು ಸೇವೆಗಳಿಗೆ ವಿಧಿಸಲಾಗಿದ್ದ ನಿಷೇಧವನ್ನು ಮಾತ್ರ ಈಗಲೂ ಮುಂದುವರೆಸಲಾಗಿದೆ.

ಅನ್‌ಲಾಕ್ - 04 ಮಾರ್ಗಸೂಚಿ ಏನುಂಟು ಏನಿಲ್ಲ?

 • ಶಾಲೆ ಕಾಲೇಜುಗಳನ್ನು ತೆರೆಯಲು ಮಾರ್ಗಸೂಚಿಯಲ್ಲಿ ಅವಕಾಶ.

 • ಶೇಕಡಾ 50% ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳನ್ನು ಬಳಸಿಕೊಂಡು ತರಗತಿಗಳನ್ನು ನಡೆಸಬಹುದು.

 • 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗೆ ಭೇಟಿ ನೀಡಬಹುದು.

 • ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗೆ ಭೇಟಿ ನೀಡಬಹುದು.

 • ಕಂಟೈನ್ಮೆಂಟ್ ಝೋನ್ ಹೊರೆತಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

 • ಕೌಶಲ್ಯ ಅಥಾವ ಉದ್ಯೋಗ ತರಬೇತಿಗಳಿಗೆ ಅನುಮತಿ.

 • 1 ರಿಂದ 9ರ ವರೆಗಿನ ಶಾಲೆಗಳಿಗೆ ಸೆಪ್ಟೆಂಬರ್ 30 ವರೆಗೂ ನಿರ್ಬಂಧ.

 • ಆನ್‌ಲೈನ್ ತರಗತಿಗಳನ್ನು ಮುಂದುವರಿಸಬಹುದು.

 • ಸಂಶೋಧನೆ ( ಪಿಎಚ್ ಡಿ ) ತಾಂತ್ರಿಕ ಮತ್ತು ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಗಳು ನಡೆಸಲು ಒಪ್ಪಿಗೆ.

 • ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ.

 • ಸೆಪ್ಟೆಂಬರ್ 07 ರಿಂದ ಮೆಟ್ರೋ ಸಂಚಾರ ಆರಂಭ.

 • ಅಂತರರಾಜ್ಯ ಮತ್ತು ರಾಜ್ಯದೊಳಿಗೆ ಸಂಚಾರಿಸಲು ಮುಕ್ತ ಅವಕಾಶ.

 • ಇನ್ನು ಮುಂದೆ ಯಾವುದೇ ಇ ಪಾಸ್ ಗಳ ಅವಶ್ಯಕತೆ ಇಲ್ಲ


ಏನೇನು ಇರುವುದಿಲ್ಲ?

 • ಸಿನಿಮಾ ಹಾಲ್, ಈಜುಕೊಳಗಳಿಗೆ ಅವಕಾಶ ಇಲ್ಲ.

 • ಮನೋರಂಜನಾ ಪಾರ್ಕ್ ಗಳಿಗೆ ಅವಕಾಶ ಇಲ್ಲ.

 • ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ,

 • ಕೇವಲ ಒಂದೇ ಭಾರತ್ ಮಿಷನ್ ಅಡಿಯಲ್ಲಿ ಮಾತ್ರ ಅವಕಾಶ

 • ಸೆಪ್ಟೆಂಬರ್ 30 ವರೆಗೂ ಕಂಟೈನ್ಮೆಂಟ್ ಝೋನ್ ಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಮೂಲಭೂತ ಅವಶ್ಯಕತೆಗಳಿಗೆ ಮಾತ್ರ ಅವಕಾಶ.

 • ಕಂಟೈನ್ಮೆಂಟ್ ಝೋನ್ ಹೊರೆತಾದ ಪ್ರದೇಶದಲ್ಲಿ ರಾಜ್ಯಸರ್ಕಾರ ಲಾಕ್‌ಡೌನ್ ಮಾಡುವಂತಿಲ್ಲ.

 • ಒಂದು ವೇಳೆ ಮಾಡಬೇಕಾದರೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮಾಡಬೇಕು.

Published by:MAshok Kumar
First published: