ಬಿಹಾರದಲ್ಲಿ ಹೊಸ Corona ರೂಪಾಂತರಿ ವೈರಸ್ ಪತ್ತೆ..! ಮತ್ತೆ ಹೆಚ್ಚಿದ ಆತಂಕ...

ಸಣ್ಣ ಪ್ರಾಯದ ಯುವಕರಲ್ಲಿ ಏರಿಕೆಯಾಗುತ್ತಿರುವ ಸೋಂಕು ಹಾಗೂ ಹೊಸ ಬಗೆಯ ರೋಗ ಲಕ್ಷಣಗಳಿಂದ ರೂಪಾಂತರಿ ವೈರಸ್ ತಳಿಗಳಿರುವುದನ್ನು ಸೂಚಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ವೈರಸ್ (Coronavirus) ಅತ್ಯಂತ ವೇಗವಾಗಿ ರೂಪಾಂತರಗೊಳ್ಳುತ್ತಿದ್ದು, ಇದು ಸರ್ಕಾರಗಳು, ಆರೋಗ್ಯ ತಜ್ಞರ ಪಾಲಿಗೆ ತಲೆನೋವು ಸೃಷ್ಟಿಸಿದೆ. ಈವರೆಗೆ ಡೆಲ್ಟಾ ರೂಪಾಂತರಿ ವೈರಸ್, ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಹಾಗೂ ಒಮೈಕ್ರಾನ್ ರೂಪಾಂತರಿ(Omicron mutant) ವೈರಸ್ ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಪೈ ರೂಪಾಂತರಿ ವೈರಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಈ ಎಚ್ಚರಿಕೆಯ ಬೆನ್ನಲ್ಲೇ ಬಿಹಾರದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಜೆನೋಮ್ ಸೀಕ್ವೆನ್ಸಿಂಗ್ (Genome Sequencing) ನಡೆಸಿದ ಸಂದರ್ಭದಲ್ಲಿ ಅನಾಮಧೇಯ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಇದು ವೈದ್ಯಕೀಯ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಂಸ್ಥೆಯ ನಿರ್ದೇಶಕರ ಪ್ರಕಾರ, ಪರೀಕ್ಷಿಸಲಾದ 32 ಮಾದರಿಗಳ ಪೈಕಿ 27 ಮಾದರಿಗಳಲ್ಲಿ ತೀವ್ರವಾಗಿ ರೂಪಾಂತರಗೊಂಡಿರುವ ಒಮೈಕ್ರಾನ್ ವೈರಸ್ ಸೋಂಕು ದೃಢಪಟ್ಟಿದೆ. 4 ಮಾದರಿಗಳು ಡೆಲ್ಟಾ ರೂಪಾಂತರಿ ವೈರಸ್ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದ್ದರೆ, ಒಂದು ಮಾದರಿ ಅನಾಮಧೇಯ ರೂಪಾಂತರಿ (Mutant Virus) ವೈರಸ್ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ರೂಪಾಂತರಿ ಅಥವಾ ವಿದೇಶಿ ತಳಿ
ಬಿಹಾರದಲ್ಲಿ ಭಾನುವಾರ 5,022 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಿಂದ ಸಕ್ರಿಯ ಸೋಂಕುಗಳ ಪ್ರಮಾಣ 16,898ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗುವ ಮೂಲಕ ಈವರೆಗೆ ಸೋಂಕಿನಿಂದ ಮೃತಪಟ್ಟಿರುವವರ ಪ್ರಮಾಣ 12,101ಕ್ಕೆ ಏರಿಕೆಯಾಗಿದೆ.

ಹೊಸ ತಳಿಗಳು ಅಥವಾ ರೂಪಾಂತರಿ ಕೋವಿಡ್-19 ವೈರಸ್‌ನಿಂದ ದಿಢೀರನೆ ಕೊರೊನಾ ಸೋಂಕು ಪ್ರಕರಣಗಳು ಹಾಗೂ ಸೋಂಕಿನಿಂದಾಗುವ ಮರಣ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಬಿಹಾರದ ತಜ್ಞರು ಹಾಗೂ ಪ್ರಾಧಿಕಾರಗಳು ರಾಜ್ಯದಲ್ಲಿ ಸಂಗ್ರಹಿಸಲಾಗಿರುವ ಮಾದರಿಗಳ ಪರೀಕ್ಷಾ ಫಲಿತಾಂಶಗಳನ್ನು ಎದುರು ನೋಡುತ್ತಿದ್ದಾರೆ. ಈ ಫಲಿತಾಂಶದ ಮೂಲಕ ರೂಪಾಂತರಿ ಅಥವಾ ವಿದೇಶಿ ತಳಿಗಳನ್ನು ಕಂಡು ಹಿಡಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: Omicron ಆತಂಕದ ನಡುವೆ ಹೊಸ ಕೋವಿಡ್ ಸ್ಟ್ರೈನ್ ಪತ್ತೆ

ಮಾದರಿಗಳ ವರದಿ ಸಂಗ್ರಹ
ಈ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರತ್ಯಾಯ ಅಮೃತ್, ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಮಾದರಿಗಳ ವರದಿಯನ್ನು ಸಂಗ್ರಹಿಸಲಾಗಿದ್ದು, ಅವನ್ನು ಭುವನೇಶ್ವರದಲ್ಲಿರುವ ಸರ್ಕಾರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪರೀಕ್ಷಾ ವರದಿ ಶೀಘ್ರವೇ ಬರಲಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ನೆರೆಹೊರೆಯ ರಾಜ್ಯಗಳು ಕೆಲವು ಹೊಸ ತಳಿಗಳು ಪತ್ತೆಯಾಗಿರುವುದನ್ನು ದೃಢಪಡಿಸಿದ ನಂತರ ಅತಿಯಾದ ಸೋಂಕು ಹಾಗೂ ದಿಢೀರನೆ ಸಣ್ಣ ಪ್ರಾಯದ ಯುವಕರ ಮರಣ ಪ್ರಮಾಣ ಏರಿಕೆಯಾಗಿರುವುದರಿಂದ ನಾವು ಇದರ ಹಿಂದಿನ ಕಾರಣಗಳನ್ನು ತಿಳಿಯಲು ಎದುರು ನೋಡುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಜೀನೋಮ್ ಸೀಕ್ವೆನ್ಸಿಂಗ್
ಎಲ್ಲ ರಾಜ್ಯಗಳೂ ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಅತ್ಯುನ್ನತ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರಯೋಗಾಲಯಗಳನ್ನು ಹೊಂದಿರಲು ಸಾಧ್ಯವಿಲ್ಲ. ವಿಶೇಷವಾಗಿ ಹಲವಾರು ರೂಪಾಂತರಿ ಹಾಗೂ ತಳಿಗಳನ್ನು ಹೊಂದಿರುವ ಗಂಭೀರ ಕೋವಿಡ್ ಸೋಂಕುಗಳಿಗೆ. ಇಡೀ ದೇಶಾದ್ಯಂತ ಕೆಲವೇ ಕೆಲವು ಪ್ರಯೋಗಾಲಯಗಳು ಇಂತಹ ಪರೀಕ್ಷೆಗಳ ಉಪಕರಣಗಳಿಂದ ಸಜ್ಜುಗೊಂಡಿವೆ” ಎಂದೂ ಅವರು ಹೇಳಿದ್ದಾರೆ.

ಹೊಸ ರೋಗ ಲಕ್ಷಣ
ಸಣ್ಣ ಪ್ರಾಯದ ಯುವಕರಲ್ಲಿ ಏರಿಕೆಯಾಗುತ್ತಿರುವ ಸೋಂಕು ಹಾಗೂ ಹೊಸ ಬಗೆಯ ರೋಗ ಲಕ್ಷಣಗಳಿಂದ ರೂಪಾಂತರಿ ವೈರಸ್ ತಳಿಗಳಿರುವುದನ್ನು ಸೂಚಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಹೃದಯ ತಜ್ಞ ಹಾಗೂ ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೋವಿಡ್-19 ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಸಂಜೀವ್ ಕುಮಾರ್, “ಹೊಸ ರೋಗ ಲಕ್ಷಣಗಳಾದ ಭೇದಿ, ಕಣ್ಣು ಮಂಜಾಗುವುದು, ತೀವ್ರ ಸ್ವರೂಪದ ಜ್ವರ, ಹಾಗೂ ತೀವ್ರ ವೇಗದಲ್ಲಿ ಇಳಿಕೆಯಾಗುವ ಆಮ್ಲಜನಕ ಪ್ರಮಾಣವು ವೈರಸ್ ಗಳು ರೂಪಾಂತರಗೊಂಡಿರುವುದನ್ನು ಸೂಚಿಸುತ್ತಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Omicron ನಂತರವೂ ಕೋವಿಡ್ ಇರಲಿದೆ, ಎಚ್ಚರಿಕೆ : ಡಾ. ರಾಜೀವ್ ಜಯದೇವನ್

ವೈದ್ಯಕೀಯ ಲಕ್ಷಣಗಳು ಸ್ಪಷ್ಟವಾಗಿ ರೂಪಾಂತರಿ ವೈರಸ್ ಹರಡುತ್ತಿರುವುದನ್ನು ಸೂಚಿಸುತ್ತಿದ್ದರೂ, ಇದನ್ನು ಸಾಬೀತು ಮಾಡಲು ಯಾವುದೇ ಪ್ರಯೋಗಾಲಯದ ದೃಢೀಕರಣ ದೊರೆಯುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಡಾ. ಅಜಯ್ ಕುಮಾರ್ ಹೇಳಿದ್ದಾರೆ.
Published by:vanithasanjevani vanithasanjevani
First published: