ಅಮೆರಿಕಾದಲ್ಲಿ ಕೊರೋನಾ ಮರಣ ಮೃದಂಗ; ಮತ್ತೆ 1561 ಮಂದಿ ಬಲಿ, ಮೃತರ ಸಂಖ್ಯೆ 93,406ಕ್ಕೆ ಏರಿಕೆ

ಅಮೆರಿಕಾದ ನ್ಯೂಯಾರ್ಕ್​​ ನಗರವೊಂದರಲ್ಲಿಯೇ ಮೂರ ಲಕ್ಷಕ್ಕೂ ಹೆಚ್ಚಿನ ಮಂದಿಗೆ ಕೋವಿಡ್​​-19 ಪತ್ತೆಯಾಗಿದೆ. ಈ ಪೈಕಿ ಕೊರೋನಾ ಸೋಂಕಿನಿಂದ ಹೊರಬರಲಾಗದೆ ಸುಮಾರು 28 ಸಾವಿರ ಮಂದಿ ಅಸುನೀಗಿದ್ದಾರೆ.

news18-kannada
Updated:May 21, 2020, 8:31 AM IST
ಅಮೆರಿಕಾದಲ್ಲಿ ಕೊರೋನಾ ಮರಣ ಮೃದಂಗ; ಮತ್ತೆ 1561 ಮಂದಿ ಬಲಿ, ಮೃತರ ಸಂಖ್ಯೆ 93,406ಕ್ಕೆ ಏರಿಕೆ
ಪ್ರಾತಿನಿಧಿಕ ಚಿತ್ರ
  • Share this:
ವಾಷಿಂಗ್ಟನ್(ಮೇ.21): ಮಾರಕ ಕೊರೋನಾ ವೈರಸ್​​ ಸೋಂಕಿಗೆ ಅಮೆರಿಕಾ ತತ್ತರಿಸಿದೆ. ಕಳೆದ 24 ಗಂಟೆಗಳಲ್ಲಿ ಮತ್ತೆ 1,561 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರ ಪರಿಣಾಮ ಅಮೆರಿಕಾದಲ್ಲಿ ಮೃತರ ಸಂಖ್ಯೆ 93,406ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ವರದಿಯಿಂದ ತಿಳಿದು ಬಂದಿದೆ.

ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ಪ್ರಕಾರ ಇದುವರೆಗೂ ಸುಮಾರು 1,550,959 ಮಂದಿಗೆ ಕೊರೋನಾ ಬಂದಿದೆ. ಈ ಪೈಕಿ 3 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ12 ಲಕ್ಷ ಮಂದಿಗೆ ಆಸ್ಪತ್ರೆಯಲ್ಲಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.

ಅಮೆರಿಕಾದ ನ್ಯೂಯಾರ್ಕ್​​ ನಗರವೊಂದರಲ್ಲಿಯೇ ಮೂರ ಲಕ್ಷಕ್ಕೂ ಹೆಚ್ಚಿನ ಮಂದಿಗೆ ಕೋವಿಡ್​​-19 ಪತ್ತೆಯಾಗಿದೆ. ಈ ಪೈಕಿ ಕೊರೋನಾ ಸೋಂಕಿನಿಂದ ಹೊರಬರಲಾಗದೆ ಸುಮಾರು 28 ಸಾವಿರ ಮಂದಿ ಅಸುನೀಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ ಮೂರು ವಿಶೇಷ ಶ್ರಮಿಕ ರೈಲು - 4,500 ವಲಸಿಗರು ತವರಿಗೆ ವಾಪಸ್ಸು

ಇನ್ನು, ಜಗತ್ತಿನಾದ್ಯಂತ ಕೊರೋನಾ ವೈರಸ್ 3 ಲಕ್ಷದ 29 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. 50 ಲಕ್ಷದ 85 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 20 ಲಕ್ಷದ 21 ಸಾವಿರಕ್ಕೂ ಹೆಚ್ಚು ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಅಮೆರಿಕಾ ಮೃತಪಟ್ಟವರ ಪಟ್ಟಿಯಲ್ಲಿ ಮೊದಲನೇ ಸ್ಠಾನದಲ್ಲಿದೆ.
First published: May 21, 2020, 8:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading