ಅಮೆರಿಕದಲ್ಲಿ ನಿಲ್ಲದ ಕೊರೋನಾ ಆರ್ಭಟ; ಒಂದೇ ದಿನ 1997 ಜನ ಬಲಿ, 40,000 ದಾಟಿದ ಸೋಂಕಿತರ ಸಂಖ್ಯೆ

ಜಗತ್ತಿನಾದ್ಯಂತ ಕೊರೋನಾ ವೈರಸ್​ಗೆ 1,65,106 ಜನರು ಸಾವನ್ನಪ್ಪಿದ್ದಾರೆ. 24,02,072 ಜನರಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಾಷಿಂಗ್ಟನ್ (ಏ. 16): ವಿಶ್ವವನ್ನೇ ಆವರಿಸಿರುವ ಕೊರೋನಾ ವೈರಸ್‌ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಚೀನಾದಿಂದ ಶುರುವಾದ ಕೊರೋನಾ ಅಟ್ಟಹಾಸ ಈಗ ಅಮೆರಿಕದಲ್ಲಿ ಬರೋಬ್ಬರಿ 40,555 ಜನರನ್ನು ಬಲಿ ಪಡೆದಿದೆ. ನಿನ್ನೆ ಒಂದೇ ದಿನಕ್ಕೆ 1,997 ಜನ ಬಲಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆಯೂ  7,63,835ಕ್ಕೆ ಏರಿಕೆಯಾಗಿದೆ.

ಜಗತ್ತಿನಾದ್ಯಂತ ಕೊರೋನಾ ವೈರಸ್​ಗೆ 1,65,106 ಜನರು ಸಾವನ್ನಪ್ಪಿದ್ದಾರೆ. 24,02,072 ಜನರಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇನ್ನೂ ಭಾರತದಲ್ಲೂ ಸಹ 519 ಜನ ಕೊರೋನಾ ವೈರಸ್‌ಗೆ ಬಲಿಯಾಗಿದ್ದು, ಸುಮಾರು 16,116 ಜನ ಮಾರಣಾಂತಿಕ ಸೋಂಕಿಗೆ ಒಳಗಾಗಿದ್ದಾರೆ.

ಅಮೆರಿಕದಲ್ಲಿ ಭಾನುವಾರ ಒಂದೇ ದಿನ 1,997 ಕ್ಕೂ ಹೆಚ್ಚು ಜನರು ಕೊರೋನಾ ವೈರಸ್​ನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಜಗತ್ತಿನಲ್ಲೇ ಅತೀ ಹೆಚ್ಚು ಕೊರೋನಾ ಪ್ರಕರಣಗಳನ್ನು ಹೊಂದಿದ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಒಳಗಾಗಿದೆ. ಇನ್ನೂ ಇಟಲಿ ಮತ್ತು ಫ್ರಾನ್ಸ್‌ನಲ್ಲೂ ಸಹ ಕೊರೋನಾ ಮರಣ ಮೃದಂಗ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

 

ಇದನ್ನೂ ಓದಿ ; ‘ಕೊರೋನಾ ವೈರಸ್​​ ಬರುವ ಮುನ್ನ ಯಾರ ಧರ್ಮ, ಜಾತಿ ನೋಡುವುದಿಲ್ಲ’ - ಸಹೋದರತ್ವ ಕಾಪಾಡಿಕೊಳ್ಳೋಣ ಎಂದ ಮೋದಿ
First published: