ಬೆಂಗಳೂರಲ್ಲಿ ಸಾಮಾಜಿಕ ಅಂತರ ಜಾಗೃತಿಗೆ ಸಾಫ್ಟ್​ವೇರ್; ದೇಶದಲ್ಲೇ ಮೊದಲ ಪ್ರಯೋಗ

ಇದು ಸೋಷಿಯಲ್ ಡಿಸ್ಟೆನ್ಸ್ ಅವನ್ನು ಮಾನಿಟರಿಂಗ್ ಮಾಡಲಿದ್ದು, ಸ್ಪೀಕರ್ ಮೂಲಕ ಜಾಗೃತಿ ಮೂಡಿಸುತ್ತದೆ. ಬಳಿಕ ಸಂಜೆ ಏಳು ಗಂಟೆಯಾದರೆ ಕರ್ಪ್ಯೂ ಬಗ್ಗೆಯೂ ಅರಿವು ಮೂಡಿಸಿ, ಎಚ್ಚರಿಕೆಯನ್ನ ನೀಡಲಿದೆ.

news18-kannada
Updated:May 21, 2020, 11:16 AM IST
ಬೆಂಗಳೂರಲ್ಲಿ ಸಾಮಾಜಿಕ ಅಂತರ ಜಾಗೃತಿಗೆ ಸಾಫ್ಟ್​ವೇರ್; ದೇಶದಲ್ಲೇ ಮೊದಲ ಪ್ರಯೋಗ
ದೀವಿಯಾ ಸಂಸ್ಥೆ ಅಭಿವೃದ್ಧಿಪಡಿಸಿದ ಸಾಪ್ಟ್​ವೇರ್
  • Share this:
ಬೆಂಗಳೂರು(ಮೇ 21): ಕೊರೊನಾ ಭೀತಿಯ ನಡುವೆ ರಾಜ್ಯ ಸರ್ಕಾರ ಲಾಕ್ ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿ ಆದೇಶ ನೀಡಿದೆ.ಈ ನಡುವೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯಗೊಳಿಸಿ ಎಚ್ಚರಿಸಿದೆ. ಇಷ್ಟಾದರೂ ಸರ್ಕಾರದ ಆದೇಶವನ್ನು ಪಾಲನೆ ಮಾಡದೆ ಜನ ನಿರ್ಲಕ್ಷ್ಯ ವಹಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ತಮ್ಮ ತಾಳ್ಮೆಗೂ ಮೀರಿ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ. ಆದರೆ ಜನ ಅದಕ್ಕೂ ಡೋಂಟ್ ಕೇರ್ ಅಂತಿದ್ದಾರೆ. ಹೀಗಾಗಿ ಜನರಲ್ಲಿ ವಿನೂತನ ರೀತಿಯಲ್ಲಿ ಅರಿವು ಮೂಡಿಸುವ ಸಲುವಾಗಿ ತಂತ್ರಜ್ಞಾನದ ಬಳಕೆಗೆ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರಾಯೋಗಿಕ ಸಾಫ್ಟ್​ವೇರ್ ಅಳವಡಿಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಇಂಥ ತಂತ್ರಜ್ಞಾನದ ಬಳಕೆಯಾಗಿದೆ. ದೀವಿಯಾ ಸಾಫ್ಟ್​ವೇರ್ ಕಡೆಯಿಂದ ಅಪೂರ್ವ್ ಎಂಬ ವ್ಯಕ್ತಿ ಈ ತಂತ್ರಜ್ಞಾನ ಅಳವಡಿಸಿದ್ದಾರೆ. ಸಿಸಿ ಕ್ಯಾಮೆರಾಗೆ ಸಾಪ್ಟ್ ವೇರ್ ಅಳವಡಿಸಿ ಅದಕ್ಕೆ ಸ್ಪೀಕರ್ ಕನೆಕ್ಟ್ ಮಾಡಿ ಜನರೇಟ್ ಮಾಡಲಾಗಿದೆ. ಇದು ಸೋಷಿಯಲ್ ಡಿಸ್ಟೆನ್ಸ್ ಅವನ್ನು ಮಾನಿಟರಿಂಗ್ ಮಾಡಲಿದ್ದು, ಸ್ಪೀಕರ್ ಮೂಲಕ ಜಾಗೃತಿ ಮೂಡಿಸುತ್ತದೆ. ಬಳಿಕ ಸಂಜೆ ಏಳು ಗಂಟೆಯಾದರೆ ಕರ್ಪ್ಯೂ ಬಗ್ಗೆಯೂ ಅರಿವು ಮೂಡಿಸಿ, ಎಚ್ಚರಿಕೆಯನ್ನೂ ನೀಡಲಿದೆ.

ಇದನ್ನೂ ಓದಿ: Rajiv Gandhi Death Anniversary – ರಾಜೀವ್ ಗಾಂಧಿ ಹತ್ಯೆ ದೃಶ್ಯ ಕಂಡ ಪತ್ರಕರ್ತರೊಬ್ಬರ ಅನುಭವ

First published: May 21, 2020, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading