• ಹೋಂ
  • »
  • ನ್ಯೂಸ್
  • »
  • Corona
  • »
  • DV Sadananda Gowda: ಕರ್ನಾಟಕದಲ್ಲಿ ಅಗತ್ಯಬಿದ್ದರೆ ವೀಕೆಂಡ್ ಲಾಕ್​ಡೌನ್ ಮುಂದುವರಿಕೆ; ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

DV Sadananda Gowda: ಕರ್ನಾಟಕದಲ್ಲಿ ಅಗತ್ಯಬಿದ್ದರೆ ವೀಕೆಂಡ್ ಲಾಕ್​ಡೌನ್ ಮುಂದುವರಿಕೆ; ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

ಡಿ.ವಿ. ಸದಾನಂದ ಗೌಡ.

ಡಿ.ವಿ. ಸದಾನಂದ ಗೌಡ.

Karnataka Coronavirus: ವೀಕೆಂಡ್ ಕರ್ಫ್ಯೂ ರೀತಿ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಸಂಪುಟದ ಸಚಿವರ ಜೊತೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಿರ್ಧಾರ ಮಾಡ್ತಾರೆ. ಒಂದುವೇಳೆ ಅಗತ್ಯವಿದ್ದರೆ ವೀಕೆಂಡ್ ಕರ್ಫ್ಯೂ ಮುಂದುವರೆಸ್ತಾರೆ. ಅದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಏ. 25): ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿರುವುದರಿಂದ ಅದರ ನಿಯಂತ್ರಣಕ್ಕೆ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಕೂಡ ಜಾರಿಗೊಳಿಸಲಾಗಿದೆ. ಆದರೂ ನಿನ್ನೆ ಒಂದೇ ದಿನ ಸುಮಾರು 30 ಸಾವಿರ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಇಂದು ವಿಧಾನಸೌಧದಲ್ಲಿ ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ.


ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಎಂಎಲ್​ಸಿ ನಾರಾಯಣಸ್ವಾಮಿ ಅವರೊಂದಿಗೆ ಸಭೆ ನಡೆಸಿದ ಡಿ.ವಿ. ಸದಾನಂದ ಗೌಡ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೊರೋನಾ ಮೂರನೇ ಅಲೆಗೆ ಹೋಗಬಾರದು ಎಂದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಅದು ಎಲ್ಲರ ಜವಾಬ್ದಾರಿ. ಹಾಗೇ ಎಲ್ಲರಿಗೂ ಲಸಿಕೆ ಹಾಕೋದು ನಮ್ಮ ಜವಾಬ್ದಾರಿ ಎಂದಿರುವ ಸಚಿವ ಡಿ.ವಿ. ಸದಾನಂದ ಗೌಡ, ವೀಕೆಂಡ್ ಕರ್ಪ್ಯೂ ರೀತಿ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಸಂಪುಟದ ಸಚಿವರ ಜೊತೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಿರ್ಧಾರ ಮಾಡ್ತಾರೆ. ಒಂದುವೇಳೆ ಅಗತ್ಯವಿದ್ದರೆ ವೀಕೆಂಡ್ ಕರ್ಫ್ಯೂ ಮುಂದುವರೆಸ್ತಾರೆ. ಅದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.


ಕೋರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ನೆರವು, ಆ್ಯಕ್ಸಿಜನ್, ರೆಮಿಡಿಸಿವಿರ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ ಬರುತ್ತಿರುವ ರೆಮಿಡಿಸಿವಿರ್, ಆ್ಯಕ್ಸಿಜನ್ ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ. ಕರ್ನಾಟಕ ರಾಜ್ಯ ಕೊರೋನಾ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡುತ್ತಿದೆ. ಆದರೆ, ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ, ನಾವು ತುಂಬ ಜಾಗ್ರತೆಯಿಂದ ಇರಬೇಕು. ಕೊರೋನಾ ಇನ್ನೂ ಹೆಚ್ಚಾಗುವಂತ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಅಕ್ಸಿಜನ್ ಮತ್ತು ರೆಮಿಡಿಸ್ವಿರ್ ಸ್ವಲ್ಪ ಪ್ರಮಾಣದಲ್ಲಿ ಕೊರೆತೆ ಇತ್ತು. ಆ ಕೊರತೆ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರು ಕೇಂದ್ರ ಸರ್ಕಾರದ ಮೇಲೆ‌ ಒತ್ತಡ ಹಾಕಿದ್ದರು. ಅದೇ ದಿವಸ 1.22 ಲಕ್ಷ ರೆಮಿಡಿಸ್ವಿರ್ ರಾಜ್ಯಕ್ಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ‌. 30ನೇ ತಾರೀಕಿನವರೆಗೂ 3 ಲಕ್ಷ ಲಸಿಕೆ ಬೇಕು ಎಂದು ಕೇಳಿದ್ದರು. ಅದನ್ನ ಸಹ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ 800 ಮೆಟ್ರಿಕ್ ಟನ್ ಆಕ್ಸಿಜನ್ ನೀಡಲು ಮುಂದಾಗಿದೆ. ಇನ್ನು 15 ದಿವಸದೊಳಗೆ ರಾಜ್ಯಕ್ಕೆ ಎಲ್ಲವೂ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.


ಕರ್ನಾಟಕದ ಸರ್ಕಾರದಿಂದ ಹೆಚ್ಚಿನ ಕೊರೋನಾ ಲಸಿಕೆಗೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಸಹ ಕೇಂದ್ರ ಸರ್ಕಾರ ನೀಡಲಿದೆ. ನಾವು ಯಶಸ್ವಿಯಾಗಿ ಕೊರೋನಾ ನಿಯಂತ್ರಣ ಮಾಡುತ್ತೇವೆ‌‌. ಹೆಚ್ಚು ಸಾವು ಸಂಭವಿಸಿರೋದು ನಮಗೂ ಮನಸ್ಸಿಗೆ ನೋವು ತಂದಿದೆ. ಜನರು ಸಹ ಜಾಗ್ರತರಾಗಬೇಕು. ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಯಶಸ್ವಿಯಾಗಿದೆ. ಇದರ ಫಲಿತಾಂಶ 10 ರಿಂದ 14 ದಿವಸದ ನಂತರ ಗೊತ್ತಾಗಲಿದೆ. ವೀಕೆಂಡ್ ಕರ್ಫ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ. ಮುಂದಿನ 10 ದಿನ ಕಠಿಣ ಇರಬಹುದು. ತದನಂತರ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

top videos
    First published: