ನವದೆಹಲಿ (ಜೂ. 20): ಕೊರೋನಾ ಪಾಸಿಟಿವ್ ಇರುವ ರೋಗಿಗಳು ಕ್ವಾರಂಟೈನ್ನಲ್ಲಿರಬೇಕಾಗಿರುವುದು ಕಡ್ಡಾಯ. ಇದೀಗ ಭಾರತದಲ್ಲಿ ಕೊರೋನಾ ಕೇಸ್ಗಳು ಹೆಚ್ಚಾಗುತ್ತಲೇ ಇರುವುದರಿಂದ ಕ್ವಾರಂಟೈನ್ನಲ್ಲಿರುವವರಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ ಇರುವವರಿಗೆ ಪರಿಷ್ಕೃತ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಮೇ 10ರ ಬಳಿಕ ಕೇಂದ್ರ ಆರೋಗ್ಯ ಇಲಾಖೆ ಮೊದಲ ಬಾರಿಗೆ ಮಾರ್ಗಸೂಚಿ ಪರಿಷ್ಕೃತಗೊಳಿಸಿದೆ. ಸೌಮ್ಯ ಮತ್ತು ಪೂರ್ವ-ರೋಗಲಕ್ಷಣದ ಇರುವವರಿಗೆ ಹೊಸ ನಿಯಮಗಳನ್ನು ನೀಡಲಾಗಿದೆ. ಅವರಿಗೆ ಹೋಂ ಐಸೋಲೇಷನ್ಗೆ ಮನೆಯಲ್ಲಿ ಅಗತ್ಯ ಸೌಲಭ್ಯಗಳಿರಬೇಕು. ಕುಟುಂಬದ ಸಂಪರ್ಕಗಳನ್ನು ನಿರ್ಬಂಧಿಸಬೇಕು. ಪ್ರತ್ಯೇಕ ಶೌಚಾಲಯ ಇರಬೇಕು. ವಯಸ್ಕ ಆರೈಕೆದಾರರಿರಬೇಕು. ವಯಸ್ಸಾದವರು ಸೋಂಕಿತರ ಆರೈಕೆ ಮಾಡುವಂತಿಲ್ಲ. ದಿನದ 24 ಗಂಟೆಯೂ ಆರೈಕೆದಾರರು ಲಭ್ಯವಿರಬೇಕು. ಆರೈಕೆದಾರರು ಮತ್ತು ಆಸ್ಪತ್ರೆ ನಡುವೆ ಒಪ್ಪಂದ ಆಗಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಬಾಯಿರುಚಿಗೂ ಸೈ, ಇಮ್ಯುನಿಟಿ ಹೆಚ್ಚಿಸೋಕೂ ಜೈ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಬಗೆಬಗೆ ತಿನಿಸುಗಳು
ರೋಗಿಯ ಆರೋಗ್ಯ ಮೇಲ್ವಿಚಾರಣೆ ಬಗ್ಗೆ ಆರೈಕೆದಾರರು ಒಪ್ಪಿಕೊಳ್ಳಬೇಕು. ಕಣ್ಗಾವಲು ತಂಡ ನಿಯಮಿತವಾಗಿ ಜಿಲ್ಲಾ ಕಣ್ಗಾವಲು ಅಧಿಕಾರಿಗೆ ಮಾಹಿತಿ ತಿಳಿಸಬೇಕು. ವೈದ್ಯಕೀಯ ಮತ್ತು ವಸತಿ ಸೌಕರ್ಯಗಳ ಮೌಲ್ಯಮಾಪನದ ಆಧಾರದ ಮೇಲೆ ವೈದ್ಯರು ಹೋಂ ಇಸೋಲೇಷನ್ ನಿರ್ಧರಿಸಬೇಕು. ಹೆಚ್ಚುವರಿಯಾಗಿ, ರೋಗಿಯು ಸ್ವಯಂ-ಪ್ರತ್ಯೇಕತೆಯ ಕುರಿತಾದ ಜವಾಬ್ದಾರಿಯನ್ನು ಭರ್ತಿ ಮಾಡಬೇಕು. ಮನೆಯ ಸಂಪರ್ಕತಡೆಯನ್ನು ಅನುಸರಿಸುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮನೆ ಪ್ರತ್ಯೇಕತೆಯ ಬಗ್ಗೆ ನಿಯಮಿತವಾಗಿ ವೈದ್ಯರ ತಂಡ ಮೇಲ್ವಿಚಾರಣೆ ಮಾಡಬೇಕು. ಅವರ ಡಿಸ್ಚಾರ್ಜ್ ಬಗ್ಗೆಯೂ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆರೈಕೆ ನೀಡುವವರು ಮತ್ತು ನಿಕಟ ಸಂಪರ್ಕಿಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ತೆಗೆದುಕೊಳ್ಳಬೇಕು. ಮೊಬೈಲ್ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿರಬೇಕು. ಅದು ಎಲ್ಲಾ ಸಮಯದಲ್ಲೂ ಸಕ್ರಿಯವಾಗಿರಬೇಕು (ಬ್ಲೂಟೂತ್ ಮತ್ತು ವೈ-ಫೈ ಮೂಲಕ). 10 ದಿನಗಳವರೆಗೆ ಜ್ವರವಿಲ್ಲದಿದ್ದರೆ ನಂತರ ಪರೀಕ್ಷೆಯ ಅಗತ್ಯವಿಲ್ಲ. ನಂತರ ಹೋಂ ಕ್ವಾರಂಟೈನ್ ಅವಧಿ ಮುಗಿಯಲಿದೆ ಎಂದು ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ