ಭಾರತಕ್ಕೆ ಬರುವ ವಿದೇಶಿಗರ ವೀಸಾ ನಿರ್ಬಂಧ ಸಡಿಲಿಸಲು ಮುಂದಾದ ಕೇಂದ್ರ ಸರ್ಕಾರ

ಗೃಹ ಇಲಾಖೆ ಹೊರಡಿಸಿರುವ ಲಾಕ್​ಡೌನ್​​ ನಿಯಮಗಳಿಗೆ ಅನುಸಾರವಾಗಿಯೇ ವಿದೇಶಿಗರ ವೀಸಾ ನಿರ್ಬಂಧ ಸಡಿಲಿಸಲು ಮುಂದಾಗಿರುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.

news18-kannada
Updated:June 3, 2020, 8:59 PM IST
ಭಾರತಕ್ಕೆ ಬರುವ ವಿದೇಶಿಗರ ವೀಸಾ ನಿರ್ಬಂಧ ಸಡಿಲಿಸಲು ಮುಂದಾದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜೂ.03): ವಿದೇಶದಿಂದ ಬಂದವರಿಂದ ದೇಶದಲ್ಲಿ ಕೊರೊನಾ ಹುಟ್ಟಿಕೊಂಡಿತು, ವ್ಯಾಪಕವಾಗಿ ಹರಡಿತು ಎಂಬ ಚರ್ಚೆಯಲ್ಲಿರುವಾಗಲೇ ವೀಸಾ ನಿಯಮಗಳಲ್ಲಿ ಸಡಿಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬುಧವಾರ ವೀಸಾ ನಿಯಮಗಳಲ್ಲಿ ಸಡಿಲಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಕೆಲವು ವಲಯಗಳಿಗೆ ಮಾತ್ರ ವೀಸಾ ನಿರ್ಬಂಧ ಸಡಿಲಿಕೆ ಎಂದು ಹೇಳಿದೆ.

ವ್ಯವಹಾರದ ವೀಸಾ ಮೂಲಕ ಉದ್ಯಮಿಗಳು ಭಾರತಕ್ಕೆ ಆಗಮಿಸಬಹುದು. B-3 ವೀಸಾ ಮೂಲಕ ಕ್ರೀಡಾಪಟುಗಳು ಭಾರತಕ್ಕೆ ಬರಬಹುದು. ಆರೋಗ್ಯ ಕ್ಷೇತ್ರದ ಉದ್ಯೋಗಿಗಳು, ಸಂಶೋಧನಕಾರರು, ಆರೋಗ್ಯ ಇಲಾಖೆಯ ಲಾಬ್ ಟೆಕ್ನಿಷಿಯನ್, ಇಂಜಿನಿಯರ್ ಗಳು ಮತ್ತು ಇತರೆ ತಾಂತ್ರಿಕ ಕೆಲಸಗಾರರು ಆಗಮಿಸಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ; ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್‌ ನೊಟೀಸ್‌

ಭಾರತದಲ್ಲಿನ ಆರೋಗ್ಯ ಸಂಸ್ಥೆ ಅಥವಾ ವಿಶ್ವವಿದ್ಯಾಲಯ ಪತ್ರ ಪಡೆದು ಆಗಮಿಸುವುದು ಕಡ್ಡಾಯ‌ ಎಂದಿರುವ ವಿದೇಶಾಂಗ ಇಲಾಖೆ, ಭಾರತದಲ್ಲಿರುವ ವಿದೇಶ ಕಂಪನಿಗಳು , ಐಟಿ ಸಾಫ್ಟ್‌ವೇರ್ ಉದ್ಯೋಗಿಗಳು, ಬ್ಯಾಂಕಿಂಗ್, ಬ್ಯಾಂಕಿಂಗೇತರ ಸಿಬ್ಬಂದಿಗಳಿಗೆ ವಿದೇಶಿ ಉತ್ಪನ್ನಗಳ ಮಾರಾಟಗಾರರಿಗೆ ಮತ್ತು ಸರ್ವಿಸ್ ನೀಡುವ ಎಂಜಿನಿಯರಿಂಗ್ ಟೆಕ್ನಿಷಿಯನ್ ಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಗೃಹ ಇಲಾಖೆ ಹೊರಡಿಸಿರುವ ಲಾಕ್​ಡೌನ್​​ ನಿಯಮಗಳಿಗೆ ಅನುಸಾರವಾಗಿಯೇ  ವಿದೇಶಿಗರ ವೀಸಾ ನಿರ್ಬಂಧ ಸಡಿಲಿಸಲು ಮುಂದಾಗಿರುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.
First published: June 3, 2020, 8:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading