ಲಾಕ್​ಡೌನ್​ ಕುರಿತು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ; ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಸಾರ್ವಜನಿಕ ಸಾರಿಗೆಗಳಾದ ರೈಲು, ಬಸ್, ಮೆಟ್ರೋ, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಲಾಗಿದೆ. ಆಟೋ ರಿಕ್ಷಾ, ಸೈಕಲ್ ರಿಕ್ಷಾ, ಕ್ಯಾಬ್ ಮತ್ತು ಟ್ಯಾಕ್ಸಿಗಳಿಗೂ ನಿಷೇಧ ಹೇರಲಾಗಿದೆ.

news18-kannada
Updated:April 20, 2020, 8:17 AM IST
ಲಾಕ್​ಡೌನ್​ ಕುರಿತು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ; ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಏ. 20): ಕೇಂದ್ರ ಸರ್ಕಾರದಿಂದ ಮೇ 3ರವರೆಗೆ ದೇಶಾದ್ಯಂತ ಲಾಕ್​ಡೌನ್​ ವಿಸ್ತರಿಸಲಾಗಿದೆ. ಅಗತ್ಯ ಪರಿಸ್ಥಿತಿ ಉಂಟಾದರೆ ಈ ಲಾಕ್​ಡೌನ್ ಅನ್ನು ಕೆಲವು ರಾಜ್ಯಗಳಲ್ಲಿ ಸಡಿಲಗೊಳಿಸಲಾಗುವುದು ಎನ್ನಲಾಗಿತ್ತು. ಈ ಬಗ್ಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ ಈ ಸೂಚನೆಗಳನ್ನು ಅನುಸರಿಸುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ಈ ಹೊಸ ಮಾರ್ಗಸೂಚಿಯ ಪ್ರಕಾರ ದೇಶದಲ್ಲಿ ಏನೆಲ್ಲ ಇರಲಿದೆ, ಏನು ಲಭ್ಯವಿರುವುದಿಲ್ಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ....

ಲಾಕ್​ಡೌನ್ ಸಡಿಲಿಸುವ ಹಿನ್ನೆಲೆ ಕೇಂದ್ರ ಗೃಹ ಇಲಾಖೆಯಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಆ ಮಾರ್ಗಸೂಚಿ‌ಯನ್ನು ಅನುಸರಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ಈ ಹಿಂದೆ ಇದ್ದಂತೆ ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಸೇವೆಗಳು ಮತ್ತು ವಸ್ತುಗಳ ಮೇಲೆ ಯಾವುದೇ ನಿರ್ಬಂಧವೂ ಇಲ್ಲ. ಕೃಷಿ ವಲಯಕ್ಕೂ ಲಾಕ್​ಡೌನ್​ನಿಂದ ಹೆಚ್ಚಿನ ಹೊಡೆತವಾಗದು.

ಯಾವ ಸೌಲಭ್ಯಗಳು ಇರಲಿವೆ?:
ವೈದ್ಯಕೀಯ ವಲಯ: ಎಲ್ಲ ವೈದ್ಯಕೀಯ ಸೇವೆಗಳಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆಗಳು, ನರ್ಸಿಂಗ್ ಹೋಂ, ಚಿಕಿತ್ಸಾಲಯಗಳನ್ನು ತೆರೆಯಬಹುದು. ಟೆಲಿಮೆಡಿಸಿನ್ ಸೌಲಭ್ಯಗಳು, ಔಷಧಗಳು, ವೈದ್ಯಕೀಯ ಸಾಧನಗಳು, ಅವುಗಳ ಪ್ಯಾಕೇಜಿಂಗ್ ವಸ್ತುಗಳು, ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಉತ್ಪಾದನಾ ಘಟಕಗಳ ಕೆಲಸ ಅಥವಾ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಎಲ್ಲಾ ಆರೋಗ್ಯ ಕಾರ್ಯಕರ್ತೆಯರು ವೈದ್ಯರು, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಪಶುವೈದ್ಯಕೀಯ, ಲ್ಯಾಬ್ ತಂತ್ರಜ್ಞರು, ಶುಶ್ರೂಷಕಿಯರಿಗೆ ವಿನಾಯಿತಿ ನೀಡಲಾಗಿದೆ.

ಕೃಷಿ ವಲಯ: ಎಲ್ಲಾ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಎಪಿಎಂಸಿ ಮಾರುಕಟ್ಟೆ ನಡೆಸಲು ಅನುಮತಿ ನೀಡಲಾಗಿದೆ. ಕೃಷಿ ಯಂತ್ರೋಪಕರಣಗಳು, ಮೀನುಗಾರಿಕೆ, ತೋಟಗಳು ಮತ್ತು ಪಶುಸಂಗೋಪನೆಗಳ ಅಂಗಡಿಗಳಿಗೆ ಅನುಮತಿ ಇರಲಿದೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾಗೆ ಒಂದೂವರೆ ತಿಂಗಳ ಮಗು ಬಲಿ

ಇತರೆ ಸೌಲಭ್ಯಗಳು: ಬ್ಯಾಂಕ್ ಶಾಖೆಗಳು, ಎಟಿಎಂಗಳು ಮತ್ತು ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಮಾ ಕಂಪನಿಗಳಿಗೆ ಅವಕಾಶವಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗದ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ತೈಲ ಮತ್ತು ಅನಿಲ ಸರಬರಾಜು, ಅಂಚೆ ಸೇವೆಗಳು ಅಥವಾ ಸರಕುಗಳ ವಿತರಣೆಗೆ ಅವಕಾಶ ನೀಡಲಾಗಿದೆ. ರೈಲ್ವೆ, ವಿಮಾನ ನಿಲ್ದಾಣಗಳು, ಭೂ ಬಂದರುಗಳು, ಬಂದರುಗಳ ಕಾರ್ಯಾಚರಣೆಗಾಗಿ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಪೆಟ್ರೋಲಿಯಂ, ಎಲ್‌ಪಿಜಿ, ಆಹಾರ ಉತ್ಪನ್ನಗಳು, ವೈದ್ಯಕೀಯ ಸರಬರಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಚಾಲಕರು ಮತ್ತು ಇತರ ಸರಕುಗಳು ಅಥವಾ ವಾಹಕ ವಾಹನಗಳನ್ನು ಚಲಾಯಿಸಲು ಅವಕಾಶ ನೀಡಲಾಗುವುದು. ಸರಕುಗಳ ವಿತರಣೆಯ ನಂತರ ಅಥವಾ ಸರಕುಗಳನ್ನು ತೆಗೆದುಕೊಳ್ಳಲು ಖಾಲಿ ಟ್ರಕ್ ವಾಹನಕ್ಕೂ ಸಮ್ಮತಿ ನೀಡಲಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ನಿರ್ಮಾಣ ಮತ್ತು ಉತ್ಪಾದನಾ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ. ವಿಶೇಷ ಆರ್ಥಿಕ ವಲಯಗಳು ಅಥವಾ ರಫ್ತು ಆಧಾರಿತ ಘಟಕಗಳಲ್ಲಿ ಉತ್ಪಾದನೆಗೆ ಅವಕಾಶ ಕಲ್ಪಿಸಲಾಗಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳು, ಸೆಣಬಿನ ಉದ್ಯಮ, ಗ್ರಾಮೀಣ ಪ್ರದೇಶಗಳಲ್ಲಿ ಇಟ್ಟಿಗೆ ಗೂಡುಗಳನ್ನು ಅನುಮತಿ ನೀಡಲಾಗಿದೆ. ಗಣಿಗಾರಿಕೆ ಚಟುವಟಿಕೆ, ತೈಲ ಮತ್ತು ಅನಿಲ ಪರಿಶೋಧನೆ ಅಥವಾ ಸಂಸ್ಕರಣಾ ಚಟುವಟಿಕೆ, ರಸ್ತೆಗಳ ನಿರ್ಮಾಣ, ನೀರಾವರಿ ಯೋಜನೆಗೆ ಅನುಮತಿ ನೀಡಲಾಗಿದೆ. ಮಾಧ್ಯಮಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳು, ಆರೋಗ್ಯ ತುರ್ತು ಪರಿಸ್ಥಿತಿಯ ವಾಹನಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಕೊರೋನಾ ಲಾಕ್​​ಡೌನ್​​: ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ, ಮಹತ್ವದ ಚರ್ಚೆ

ಮೀನುಗಾರಿಕೆ ಮತ್ತು ಹೈನುಗಾರಿಕೆ: ಮೀನುಗಾರಿಕೆ, ಆಹಾರ ಮತ್ತು ನಿರ್ವಹಣೆ, ಕೊಯ್ಲು, ಸಂಸ್ಕರಣೆ, ಪ್ಯಾಕೇಜಿಂಗ್, ಕೋಲ್ಡ್ ಚೈನ್, ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹಾಲು ಸಂಸ್ಕರಣಾ ಘಟಕಗಳ ಕೆಲಸ, ವಿತರಣೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋಳಿ ಸಾಕಾಣಿಕೆ ಕೇಂದ್ರಗಳು ಮತ್ತು ಮೊಟ್ಟೆಕೇಂದ್ರಗಳು ಮತ್ತು ಜಾನುವಾರು ಸಾಕಣೆ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಮೆಕ್ಕೆಜೋಳ ಮತ್ತು ಸೋಯಾ ಮುಂತಾದ ಕಚ್ಚಾವಸ್ತುಗಳ ಪೂರೈಕೆಗೆ ಅವಕಾಶ ಒದಗಿಸಲಾಗಿದೆ. ಕಚೇರಿ ಮತ್ತು ವಸತಿ ಸಂಕೀರ್ಣಗಳ ಸೆಕ್ಯುರಿಟಿ ಕೆಲಸದವರಿಗೆ ವಿನಾಯಿತಿ ನೀಡಲಾಗಿದೆ. ಚಹಾ, ಕಾಫಿ ಮತ್ತು ರಬ್ಬರ್ ತೋಟಗಳಲ್ಲಿ ಗರಿಷ್ಠ ಶೇ. 50ರಷ್ಟು ಕಾರ್ಮಿಕರಿಗೆ ಅವಕಾಶ ನೀಡಲಾಗಿದೆ.

ಯಾವುದಕ್ಕೆ ಅನುಮತಿ ಇಲ್ಲ?:
ಸಾರ್ವಜನಿಕ ಸಾರಿಗೆಗಳಾದ ರೈಲು, ಬಸ್, ಮೆಟ್ರೋ, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಲಾಗಿದೆ. ಆಟೋ ರಿಕ್ಷಾ, ಸೈಕಲ್ ರಿಕ್ಷಾ, ಕ್ಯಾಬ್ ಮತ್ತು ಟ್ಯಾಕ್ಸಿಗಳಿಗೂ ನಿಷೇಧ ಹೇರಲಾಗಿದೆ. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತವಾಗಿವೆ. ಎಲ್ಲಾ ಧಾರ್ಮಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡಲು ಇ-ಕಾಮರ್ಸ್ ಕಂಪನಿಗಳಿಗೆ ಅನುಮತಿ ಇಲ್ಲ.
First published: April 20, 2020, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading