ನವದೆಹಲಿ(ಮೇ.02): ಕೊರೋನಾ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಇಡೀ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಯ್ತು. ಇದರ ಪರಿಣಾಮ ಬಹುತೇಕ ಎಲ್ಲ ಅಂಗಡಿಗಳು ಬಂದ್ ಆದವು. ಅದೇ ಮಾದರಿಯಲ್ಲಿ ಮದ್ಯ ಮಾರಾಟವೂ ಬಂದ್ ಆದ ಕಾರಣ ಎಣ್ಣೆ ಸಿಗದೇ ಕರ್ನಾಟಕ ಸೇರಿದಂತೆ ದೇಶದ ನಾನಾ ಕಡೆ ವ್ಯಸನಿಗಳು ಸಾವನ್ನಪ್ಪಿದ್ದರು. ಸರಿಯಾಗಿ ಇಷ್ಟೇ ಜನ ಸತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಇಲ್ಲವಾದರೂ, ನೂರಾರು ಮಂದಿಯಂತೂ ಬಲಿಯಾಗಿರುವುದು ವರದಿಯಾಗಿದೆ.
ಇತ್ತ ವ್ಯಸನಿಗಳು ಎಣ್ಣೆ ಸಿಗದೇ ಸಾಯುತ್ತಿದ್ದರೇ ಅತ್ತ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದವು. ಮದ್ಯ ಮಾರಾಟ ನಿಲ್ಲಿಸಿರುವುದರಿಂದ ರಾಜ್ಯಗಳ ಆದಾಯ ಕಡಿಮೆ ಆಗಿದೆ. ಆದ್ದರಿಂದ ಕೇಂದ್ರ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಹಲವು ರಾಜ್ಯಗಳು ಆಗ್ರಹಿಸಿದ್ದವು.
ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರವೂ ನಿನ್ನೆ ಗ್ರೀನ್ ಜೋನ್ನಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಿತ್ತು. ಆದರೀಗ, ಮತ್ತೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಗೃಹ ಇಲಾಖೆ ಆರೇಂಜ್ ಜೋನ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇನ್ನು, ರೆಡ್ ಜೋನ್ಗಳಲ್ಲಿ ಮಾತ್ರ ಕೆಲವು ಷರತ್ತುಗಳೊಂದಿಗೆ ಮದ್ಯ ಮಾರಾಟ ಮಾಡಬಹುದು ಎಂದು ಹೇಳಿದೆ.
ಇದನ್ನೂ ಓದಿ: Liquor Shops - ಗ್ರೀನ್ ಜೋನ್ನಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ
ಇನ್ನು, ರೆಡ್ ಜೋನ್ನಲ್ಲಿ ಅಗತ್ಯ ಇ-ಕಾಮರ್ಸ್ ಚಟುವಟಿಕೆ ಮಾಡಬಹುದು. ಗ್ರೀನ್ ಮತ್ತು ಆರೇಂಜ್ ಜೋನ್ನಲ್ಲೂ ಅಗತ್ಯ ಮತ್ತು ಅಗತ್ಯವಿಲ್ಲ ಇ-ಕಾಮರ್ಸ್ ಚಟುವಟಿಕೆ ಮಾಡಬಹುದು. ಸೆಲ್ಯೂನ್ ಅಂಗಡಿಗಳೂ ತೆರೆಯಬಹುದು, ಆದರೆ ಸಾರ್ವಜನಿಕರ ಸಂಚಾರಕ್ಕೆ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ