ನವದೆಹಲಿ(ಏ.05): ಒಮ್ಮೆಲೇ ಇಡೀ ದೇಶಾದ್ಯಂತ ವಿದ್ಯುತ್ ದೀಪಗಳನ್ನು ಆರಿಸಿದರೆ ಪವರ್ ಗ್ರಿಡ್ಗಳಲ್ಲಿ ಅಸ್ಥಿರತೆ ಉಂಟಾಗಲಿದ ಎಂಬುದು ಸುಳ್ಳು ಎಂದು ಇಂಧನ ಸಚಿವಾಲಯ ಸ್ಪಷ್ಟಪಡಿಸಿದೆ. ಅಪಾರ ಸಂಖ್ಯೆಯಲ್ಲಿ ಏಕಕಾಲದಲ್ಲಿ ದಿಢೀರ್ ವಿದ್ಯುತ್ ದೀಪಗಳನ್ನು ಆರಿಸಿದರೆ ಸಮಸ್ಯೆಯಾಗಲಿದೆ. ಪವರ್ ಗ್ರಿಡ್ಗಳ ವೋಲ್ಟೇಜ್ನಲ್ಲಿ ಏರಿಳಿತ ಆಗಲಿದೆ ಎಂದು ಹಲವರು ಟೀಕೆ ಮಾಡುತ್ತಿದ್ದರು. ಈ ಬೆನ್ನಲ್ಲೀಗ ಇದನ್ನು ತಳ್ಳಿ ಹಾಕಿರುವ ಕೇಂದ್ರ ಇಂಧನ ಸಚಿವಾಲಯ ಏನು ಆಗುವುದಿಲ್ಲ, ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಯಂತೆ ಇಂದು ಭಾನುವಾರ ಏಪ್ರಿಲ್ 5ನೇ ತಾರೀಕು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ಜನ ತಮ್ಮ ಮನೆಯ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಮೇಣದ ಬತ್ತಿ ಮತ್ತು ಹಣತೆ ಉರಿಸಲಿದ್ದಾರೆ. ಆದರೆ, ಪ್ರಧಾನಿ ಹೇಳಿದಂತೆ ಒಮ್ಮೆಲೇ ದೇಶಾದ್ಯಂತ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ಗಳು ಹಾಳಾಗುವ ಸಾಧ್ಯತೆಗಳಿವೆ. ತಾಂತ್ರಿಕ ಸಮಸ್ಯೆಯಾಗಿ ತುಸು ಯಡವಟ್ಟಾದರೂ ಇಡೀ ದೇಶದ 10-16 ಗಂಟೆಗಳ ಕಾಲ ಕತ್ತಲಲ್ಲೇ ಕಳೆಯಬೇಕಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಹೀಗೆ ಸ್ಪಷ್ಟನೆ ನೀಡಿದೆ.
ಅತ್ತ ಒಂದೇ ಬಾರಿಗೆ ದೀಪಗಳನ್ನು ಆಫ್ ಮಾಡುವುದರಿಂದ ವಿದ್ಯುತ್ನಲ್ಲೇನಾದರೂ ವ್ಯತ್ಯಾಸ ಉಂಟಾಗಬಹುದು. ಏಕೆಂದರೇ, ಒಮ್ಮಲೇ ಇಡೀ ದೇಶ ಕರೆಂಟ್ ತೆಗೆದರೆ ವಿದ್ಯುತ್ ಪೂರೈಸುವ ಪವರ್ ಗ್ರಿಡ್ನ ಟ್ರಿಪ್ ಆಗುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಈಗ ದೇಶದ ವಿದ್ಯುತ್ ಸರಬರಾಜು ಸಂಸ್ಥೆಗಳ ಹೆದರಿಕೆ ಶುರುವಾಗಿದೆ. ಹಾಗಾಗಿ ಮುಂಜಾಗೃತ ಕ್ರಮವಾಗಿ ವಿದ್ಯುತ್ ಪೂರೈಕೆ ಮಾಡುವ ಪವರ್ ಗ್ರಿಡ್ಗಳ ರಕ್ಷಣೆಗೆ ಮುಂದಾಗಿವೆ.
ಇದನ್ನೂ ಓದಿ: ‘ದೇಶಾದ್ಯಂತ ಒಮ್ಮೆಲೇ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ ಹಾಳಾದೀತು; ಫ್ಯಾನ್ ಆನ್ನಲ್ಲೇ ಇರಲಿ’
ಇತ್ತ, ಕೇಂದ್ರ ವಿದ್ಯುತ್ ಸಚಿವಾಲಯದ ವಕ್ತಾರರೊಬ್ಬರು, ಇಡೀ ದೇಶ ಒಂದೇ ಸಲ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ಗಳ ಕಾರ್ಯವೂ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗದಂತೆ ಕೇಂದ್ರ ಸರ್ಕಾರ ಮತ್ತು ವಿದ್ಯುತ್ ಸರಬರಾಜು ಸಂಸ್ಥೆಗಳು ಎಚ್ಚರಿಕೆವಹಿಸಿವೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ಬಿಕ್ಕಟ್ಟನ್ನು "ತಪ್ಪಾಗಿ ನಿರ್ವಹಿಸುವುದು" ಮತ್ತು ಜನರನ್ನು ಹೀಗೆ ಹುಚ್ಚು ಟಾಸ್ಕ್ ನೀಡಿ ದಾರಿ ತಪ್ಪಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ ಎಂದು ಕೇಂದ್ರ ಪ್ರತಿಪಕ್ಷಗಳು ಟೀಕಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ