ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಕೊರೋನಾ ಕಾರ್ಯಾಚರಣೆಗೆ ಸಚಿವರ ಸಂಬಳ ಕಡಿತ

ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಹಣ ಹೊಂದಿಸಲು ಕೇಂದ್ರ ಸರ್ಕಾರ ಅನೇಕ ಮಾರ್ಗಗಳನ್ನು ಹುಡುಕಿದೆ. ವರ್ಷಕ್ಕೆ ಒಬ್ಬ ಸಂಸದರಿಗೆ 5 ಕೊಟಿ ರೂ. ಸಂಸದ ನಿಧಿ ಇರುತ್ತದೆ. ಎರಡೂ ವರ್ಷದ 10 ಕೋಟಿ ಹಣವನ್ನು ಕೇಂದ್ರ ಸರ್ಕಾರವೇ ಬಳಸಿಕೊಳ್ಳಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನರೇಂದ್ರ ಮೋದಿ ಮತ್ತು ಕ್ಯಾಬಿನೆಟ್​ ಸಚಿವರು.

ನರೇಂದ್ರ ಮೋದಿ ಮತ್ತು ಕ್ಯಾಬಿನೆಟ್​ ಸಚಿವರು.

  • Share this:
ನವ ದೆಹಲಿ (ಏಪ್ರಿಲ್ 06); ಸಂಸದರ 2 ವರ್ಷದ ನಿಧಿಯಿಂದ 10ಕೋಟಿ ಮತ್ತು ಸಚಿವರ ಸಂಬಳದಿಂದ ಶೇ.30 ರಷ್ಟನ್ನು ಕಡಿತಗೊಳಿಸಿ ಆ ಹಣವನ್ನು ಮಾರಣಾಂತಿಕ ಕೊರೋನಾ ವಿರುದ್ಧದ ಕಾರ್ಯಾಚರಣೆಗೆ ಬಳಸಿಕೊಳ್ಳುವ ಕುರಿತು ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ಹಾಗೂ ಇದರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಇಂದು ನವ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದರು. ಈ ಸಭೆಯಲ್ಲಿ ಹತ್ತಾರು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಹಣ ಹೊಂದಿಸಲು ಕೇಂದ್ರ ಸರ್ಕಾರ ಅನೇಕ ಮಾರ್ಗಗಳನ್ನು ಹುಡುಕಿದೆ. ವರ್ಷಕ್ಕೆ ಒಬ್ಬ ಸಂಸದರಿಗೆ 5 ಕೊಟಿ ರೂ. ಸಂಸದ ನಿಧಿ ಇರುತ್ತದೆ. ಎರಡೂ ವರ್ಷದ 10 ಕೋಟಿ ಹಣವನ್ನು ಕೇಂದ್ರ ಸರ್ಕಾರವೇ ಬಳಸಿಕೊಳ್ಳಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ 2020-21 ಮತ್ತು 2021-22ಸಾಲಿನ ಸಂಸದರ ನಿಧಿ ಸಂಪೂರ್ಣವಾಗಿ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ.

ಕೊರೋನಾ ಸಂಕಷ್ಟಕ್ಕೆ ಹಣ ಹೊಂದಿಸಲು ಸಂಸದ ನಿಧಿಯ ಜೊತೆಗೆ ಸಚಿವರ ಸಂಬಳದಲ್ಲೂ ಭಾರೀ ಕಡಿತ ಮಾಡಲು ಸರ್ಕಾರ ಮುಂದಾಗಿದೆ. ಸಚಿವರ ಸಂಬಳದ ಶೇ.30 ರಷ್ಟನ್ನು ಕಡಿತ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಮಾಜಿ ಸಂಸದರ ನಿವೃತ್ತಿ ವೇತನದಲ್ಲೂ ಶೇ. 30ರಷ್ಟು ಹಾಗೂ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸಂಬಳದಲ್ಲೂ ಶೇ. 30 ರಷ್ಟನ್ನು ಕಡಿತ ಮಾಡಿ ಆ ಎಲ್ಲಾ ಹಣವನ್ನು COVID-19 ಸಂಕಷ್ಟಕ್ಕೆ ಬಳಸಿಕೊಳ್ಳಲು ನಿರ್ಧಾರಿಸಲಾಗಿದೆ.

ಇದನ್ನೂ ಓದಿ : ಟಿಕೆಟ್ ಬುಕಿಂಗ್ ಆರಂಭಿಸಿದ ಗೋ ಏರ್; ಏಪ್ರಿಲ್.15ರ ನಂತರ ಹಾರಾಟ ನಡೆಸಲಿವೆ ವಿಮಾನಗಳು
First published: