HOME » NEWS » Coronavirus-latest-news » UNEMPLOYED DUE TO PANDEMIC SPORTS COACHES FRYING SAMOSA SELLING TEA IN UTTAR PRADESH KVD

ಕೊರೊನಾದಿಂದ ಉದ್ಯೋಗ ಕಳೆದುಕೊಂಡು ಸಮೋಸಾ, ಟೀ ಮಾರುತ್ತಿರುವ ಕ್ರೀಡಾ ತರಬೇತುದಾರರು!

ಹಲವು ಪ್ರತಿಭಾವಂತ ತರಬೇತುದಾರರು ಜೀವನ ನಡೆಸಲು ಅನ್ಯ ಮಾರ್ಗವಿಲ್ಲದೇ ಸಿಕ್ಕ ಕೆಲಸ ಮಾಡುತ್ತಿದ್ದಾರೆ. ಅವರ ಕರುಣಾಜನಕ ಕಥೆಗಳು ಇಲ್ಲಿವೆ.

news18-kannada
Updated:May 26, 2021, 8:19 PM IST
ಕೊರೊನಾದಿಂದ ಉದ್ಯೋಗ ಕಳೆದುಕೊಂಡು ಸಮೋಸಾ, ಟೀ ಮಾರುತ್ತಿರುವ ಕ್ರೀಡಾ ತರಬೇತುದಾರರು!
photo courtesy: india today
  • Share this:
ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಭಾರತದಲ್ಲಿ ಹಾವಳಿ ಎಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ವರ್ಷದ ಎರಡನೇ ಅಲೆಯೂ ಇಡೀ ದೇಶವನ್ನು ಸಂಕಷ್ಟಕ್ಕೆ ದೂಡಿದೆ. ಲಾಕ್ಡೌನ್ನಿಂದ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದೇ ರೀತಿ ಉತ್ತರ ಪ್ರದೇಶದ ಅನೇಕ ಅನುಭವಿ ಮತ್ತು ಪ್ರತಿಭಾವಂತ ತರಬೇತುದಾರರನ್ನು ತಮ್ಮ ಉದ್ದೇಶಗಳನ್ನು ಪೂರೈಸಲು ತೊಡಕನ್ನು ಉಂಟು ಮಾಡಿದೆ. ಸಾಂಕ್ರಾಮಿಕ ಭಾರತದಲ್ಲಿ ಹಾವಳಿ ಮಾಡುವ ಮೊದಲು, ತರಬೇತುದಾರರು ವಿದ್ಯಾರ್ಥಿಗಳಿಗೆ ಒಪ್ಪಂದದ ಆಧಾರದ ಮೇಲೆ ತರಬೇತಿ ನೀಡುತ್ತಿದ್ದರು. ಈಗ ಕ್ರೀಡಾ ಚಟುವಟಿಗಳಿಗೆ ಕೊರೋನಾ ಅಡ್ಡಗಾಲು ಹಾಕಿದ್ದು ತರಬೇತುದಾರರು ಬೀದಿಗೆ ಬಿದ್ದಿದ್ದಾರೆ. ಹಲವು ಪ್ರತಿಭಾವಂತ ತರಬೇತುದಾರರು ಜೀವನ ನಡೆಸಲು ಅನ್ಯ ಮಾರ್ಗವಿಲ್ಲದೇ ಸಿಕ್ಕ ಕೆಲಸ ಮಾಡುತ್ತಿದ್ದಾರೆ. ಅವರ ಕರುಣಾಜನಕ ಕಥೆಗಳು ಇಲ್ಲಿವೆ.

ಪ್ರಕರಣ 1 :

ಪರಿಣಿತ ಫೆನ್ಸರ್ ಆಗಿರುವ ಲಕ್ನೋದ ನೀಲ್ಮಾಥಾದ ಸಂಜೀವ್ ಕುಮಾರ್ ಗುಪ್ತಾ ಅವರು ತಮ್ಮ ಜೀವನವನ್ನು ನಿರ್ವಹಿಸಲು ಕಾರ್ಪೆಂಟರಿಂಗ್ ಮಾಡವ ಮೂಲಕ ಪ್ರತಿದಿನ 300 ರೂ. ದುಡಿಯುತ್ತಿದ್ದಾರೆ. ಅವರು ಐದು ಬಾರಿ ಪದಕ ವಿಜೇತರಾಗಿದ್ದು, ಎನ್‌ಐಎಸ್ ಪಟಿಯಾಲದಿಂದ ಫೆನ್ಸಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಅವರು ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಹಲವಾರು ವರ್ಷಗಳ ಕಾಲ ತರಬೇತುದಾರರಾಗಿ ಕೆಲಸ ಮಾಡಿದ್ದರು.
ಅವರ 12 ವರ್ಷದ ಮಗಳು ಖ್ಯಾತಿ ಗುಪ್ತಾ ಫೆನ್ಸಿಂಗ್‌ನಲ್ಲಿ ರಾಷ್ಟ್ರೀಯ ಚಿನ್ನದ ಪದಕ ವಿಜೇತರು. ಆದರೆ, ದೊಡ್ಡ ಟೂರ್ನಿಗಳಿಗಾಗಿ ಖ್ಯಾತಿ ಅವರನ್ನು ಪೋಲೆಂಡ್‌ಗೆ ಕಳುಹಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಸಂಜೀವ್ ಕುಮಾರ್ ಗುಪ್ತಾ ಅವರು ಧನಸಹಾಯಕ್ಕಾಗಿ ಯುಪಿ ಮಾಜಿ ಗವರ್ನರ್ ರಾಮ್ ನಾಯಕ್ ಅವರ ಸಹಾಯವನ್ನೂ ಕೋರಿದ್ದರು. ಜತೆಗೆ ಯುಪಿ ಸಿಎಂಗೆ ಪತ್ರ ಕೂಡ ಬರೆದಿದ್ದರು. ಆದರೆ ಯಾವುದೇ ಸಹಾಯ ಮಾಡದ ಕಾರಣ ಖ್ಯಾತಿ ಮನೆಯಲ್ಲಿ ಉಳಿದುಕೊಳ್ಳಬೇಕಾಯಿತು.

ಗಾಯದ ಮೇಲೆ ಉಪ್ಪು ಸವರಿದಂತೆ, ಸಂಜೀವ್ ಕುಮಾರ್ ಗುಪ್ತಾ ಅವರ ಸಮಸ್ಯೆ ಇಷ್ಟಕ್ಕೆ ನಿಂತಿಲ್ಲ. ಖ್ಯಾತಿ ಗುಪ್ತಾ ತಮ್ಮ ಕುಟುಂಬದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಪ್ರತಿಭಾನ್ವಿತ ಮಗು, ಶಾಲೆಯ ಶುಲ್ಕವನ್ನು ಪಾವತಿಸದ ಕಾರಣ ಆಕೆ ತನ್ನ 5ನೇ ತರಗತಿಯ ಫಲಿತಾಂಶವನ್ನು ಇನ್ನೂ ಪಡೆಯಲು ಸಾಧ್ಯವಾಗಿಲ್ಲ.
ಸಂಜೀವ್ ಅವರ 14 ವರ್ಷದ ಮಗ ದಿವ್ಯಾನ್ಶ್ ಅವರು ಫೆನ್ಸಿಂಗ್ ಬಗ್ಗೆ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ ಆದರೆ ಅವರ ಕುಟುಂಬದ ಪ್ರಸ್ತುತ ಸ್ಥಿತಿಯಿಂದಾಗಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಯುಪಿಯನ್ನು ಪ್ರತಿನಿಧಿಸಿರುವುದರಿಂದ ಕಠಿಣ ಕಾಲದಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡಲು ತನಗೆ ಶಾಶ್ವತ ಉದ್ಯೋಗ ನೀಡುವಂತೆ ಸಂಜೀವ್ ಸರ್ಕಾರವನ್ನು ಕೋರಿದ್ದಾರೆ.

ಪ್ರಕರಣ 2 :ಬಿಲ್ಲುಗಾರಿಕೆ ತರಬೇತುದಾರ ಮಹೇಂದ್ರ ಪ್ರತಾಪ್ ಸಿಂಗ್ (44) ತನ್ನ ಕುಟುಂಬಕ್ಕೆ ದಿನನಿತ್ಯ ಮೂರು ಹೊತ್ತಿನ ಆಹಾರ ಸಂಪಾದಿಸಲು ಬರಾಬಂಕಿಯಲ್ಲಿರುವ ತನ್ನ ಮನೆಯ ಹೊರಗೆ ಸಮೋಸಾವನ್ನು ಮಾರಾಟ ಮಾಡುವ ಹಂತಕ್ಕೆ ಬಂದು ತಲುಪಿದ್ದಾರೆ. ಅವರು ರಾಷ್ಟ್ರೀಯ ಜೀವನ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ ಯುವ ಬಿಲ್ಲುಗಾರರನ್ನು ತರಬೇತಿ ಮಾಡುವ ಸಲುವಾಗಿ ತಮ್ಮ ಸಂಪೂರ್ಣ ಜೀವನವನ್ನು ಸವೆಸಿದವರು ಎಂದು ಮಹೇಂದ್ರ ಪ್ರತಾಪ್ ಸಿಂಗ್ ಆಜ್ ತಕ್ ಗೆ ತಿಳಿಸಿದರು.

ಸಿಂಗ್ ಸಮೋಸಾವನ್ನು ಫ್ರೈ ಮಾಡುವುದು, ಫ್ರಿಟ್ಟರ್ಸ್‌ ಮತ್ತು ಕುರುಕಲು ತಿಂಡಿಗಳನ್ನು ಮಾರುತ್ತಾರೆ. ಕ್ರೀಡೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವ ತಪ್ಪು ನಿರ್ಧಾರವನ್ನು ತೆಗೆದುಕೊಂಡೆನೇ ಎಂದು ಕೆಲವೊಮ್ಮೆ ಯೋಚಿಸುತ್ತೇನೆ ಎಂದು ಅವರು ಹೇಳಿದರು. ಅವರು ಕೋಲ್ಕತ್ತಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಎನ್‌ಐಎಸ್) ನಿಂದ ಬಿಲ್ಲುಗಾರಿಕೆ ಡಿಪ್ಲೊಮಾ ಪಡೆದರು ಮತ್ತು ಉತ್ತರ ಪ್ರದೇಶ ಕ್ರೀಡಾ ನಿರ್ದೇಶನಾಲಯ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಬಿಲ್ಲುಗಾರಿಕೆ ತರಬೇತುದಾರರಾಗಿ 18 ವರ್ಷಗಳ ಅನುಭವ ಹೊಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ 8 ವರ್ಷಗಳ ಕಾಲ ಯುಪಿಯನ್ನು ಪ್ರತಿನಿಧಿಸಿದರು.

ಇದನ್ನೂ ಓದಿ: ಕೊರೋನಾದಿಂದ ಮೃತಪಟ್ಟವರ ಬ್ಯಾಂಕ್ ಖಾತೆ ಪರಿಶೀಲಿಸಿ.. ಈ ಅಂಶ ಇದ್ದರೆ ಕುಟುಂಬಕ್ಕೆ 2 ಲಕ್ಷ ರೂ. ಸಿಗಲಿದೆ

ಹಣದ ಕೊರತೆಯಿಂದಾಗಿ, ಅವರ ಇಬ್ಬರು ಮಕ್ಕಳಾದ ದೇವಾನ್ಶ್ (8) ಮತ್ತು ವೇದಾನ್ಶ್ (5) ತಮ್ಮ ಶಾಲಾ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಈ ಮಕ್ಕಳು ಮನೆಯಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಾರೆ.

ಪ್ರಕರಣ 3 :
ಮೊಹಮ್ಮದ್ ನಸೀಮ್ ಖುರೇಷಿ (56) ಒಬ್ಬ ಹೆಸರಾಂತ ಬಾಕ್ಸರ್. ರಾಷ್ಟ್ರೀಯ ಮಟ್ಟದಲ್ಲಿ ಯುಪಿಯನ್ನು ಪ್ರತಿನಿಧಿಸುತ್ತಿದ್ದರು ಮತ್ತು ಕೋವಿಡ್ -19 ಲಾಕ್‌ಡೌನ್ ಅವರಿಗೆ ತೀವ್ರವಾಗಿ ತೊಂದರೆ ಕೊಟ್ಟಿತು. ಕೋವಿಡ್ಗೂ ಮೊದಲು ಅವರು ಮಕ್ಕಳಿಗೆ ತರಬೇತಿಯನ್ನು ನೀಡುತ್ತಿದ್ದರು. ಆದರೆ ಇದೀಗ ಅವರು ಚಹಾವನ್ನು ಮಾರಾಟ ಮಾಡುತ್ತಿದ್ದಾರೆ. ಗುತ್ತಿಗೆ ತರಬೇತುದಾರರಾಗಿ ತಮ್ಮ 32 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ರಾಷ್ಟ್ರಮಟ್ಟದ ಬಾಕ್ಸರ್‌ಗಳಿಗೆ ತರಬೇತಿ ನೀಡಿದ್ದಾರೆ. ಆದರೀಗ ಕೆಲಸ ಬಿಟ್ಟ ಚಹಾ ಮಾರಾಟ ಮಾಡಲು ಪ್ರಾರಂಭಿಸಿದರು.

ಅವರು ಚಹಾ ಮಾರಾಟ ಮಾಡುವ ಬಗ್ಗೆ ತಮ್ಮ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಆರ್ಥಿಕ ಸಹಾಯವನ್ನು ನೀಡಿದರು ಎಂದು ಅವರು ಆಜ್ ತಕ್ ತಿಳಿಸಿದರು. ಖುರೇಷಿ ಆಯ್ಕೆಗಳನ್ನು ಹುಡುಕುತ್ತಿದ್ದಾನೆ ಮತ್ತು ತನಗಾಗಿ ಏನಾದರೂ ಮಾಡಬೇಕೆಂದು ಸರ್ಕಾರವನ್ನು ವಿನಂತಿಸುತ್ತಿದ್ದಾರೆ. ಯುಪಿಯ ಕ್ರೀಡಾ ನಿರ್ದೇಶಕ ಆರ್.ಪಿ.ಸಿಂಗ್ ಅವರು ಮೇಲೆ ತಿಳಿಸಿದ ಎಲ್ಲಾ 3 ಕೇಸ್ ಸ್ಟಡಿಗಳ ಮೂಲಕ ಹೋಗಿ "ಗುತ್ತಿಗೆ ಸಿಬ್ಬಂದಿಗೆ ಆದ್ಯತೆ ನೀಡಲಾಗುವುದು" ಎಂದು ಭರವಸೆ ನೀಡಿದ್ದಾರೆ.

"ಹೊರಗುತ್ತಿಗೆಗೆ ಸಿಬ್ಬಂದಿಯನ್ನು ನೇಮಕ ಮಾಡುವ ನಿರ್ಧಾರವನ್ನು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಜಾರಿಗೆ ತರಲಾಯಿತು ಮತ್ತು ಒಪ್ಪಂದದ ತರಬೇತುದಾರರು ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಆಯ್ಕೆ ಮಾಡಲು ಗೊತ್ತುಪಡಿಸಿದ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಸ್ ಸ್ಟಡೀಸ್ ನೋಡಿದ ನಂತರ ಅವರು ಗುತ್ತಿಗೆ ಸಿಬ್ಬಂದಿಗೆ ಆದ್ಯತೆ ನೀಡುತ್ತಾರೆ ಎಂದು ಅವರು ಆಜ್ ತಕ್ಗೆ ಒಪ್ಪಿಕೊಂಡರು ಎಂದು ಆರ್.ಪಿ.ಸಿಂಗ್ ಹೇಳಿದ್ದಾರೆ.
First published: May 26, 2021, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories