Dawood Ibrahim: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕೊರೋನಾ ಸೋಂಕು; ಪಾಕಿಸ್ತಾನದ ಕರಾಚಿಯಲ್ಲಿ ಚಿಕಿತ್ಸೆ

Dawood Ibrahim Coronavirus: ಭಾರತದ ಮೋಸ್ಟ್​ ವಾಂಟೆಡ್ ಉಗ್ರರಲ್ಲಿ ಒಬ್ಬನಾಗಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದಾನೆ. ದಾವೂದ್ ಮತ್ತು ಆತನ ಹೆಂಡತಿ ಮೆಹಜಾಬಿನ್​ಗೆ ಕೊರೋನಾ ಸೋಂಕು ತಗುಲಿದೆ.

ದಾವೂದ್

ದಾವೂದ್

  • Share this:
ನವದೆಹಲಿ (ಜೂ. 5): ಹಲವು ಕ್ರಿಮಿನಲ್ ಕೇಸ್​ಗಳಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್​ ವಾಂಟೆಡ್ ಅಂಡರ್​ವರ್ಲ್ಡ್​ ಡಾನ್ ದಾವೂದ್ ಇಬ್ರಾಹಿಂ ಹಾಗೂ ಆತನ ಹೆಂಡತಿಗೂ ಕೊರೋನಾ ಸೋಂಕು ತಗುಲಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ದಾವೂದ್​ನ ಸಹಚರರು, ಭದ್ರತಾ ಸಿಬ್ಬಂದಿ ಕೂಡ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದು, ಕ್ವಾರಂಟೈನ್ ಆಗಿದ್ದಾರೆ.

ದಾವೂದ್ ಇಬ್ರಾಹಿಂ ಮತ್ತು ಆತನ ಹೆಂಡತಿ ಮೆಹಜಾಬಿನ್ ಅವರ ವೈದ್ಯಕೀಯ ತಪಾಸಣೆಯ ವರದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ದಾವೂದ್​ ಇಬ್ರಾಹಿಂ ಕರಾಚಿಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ದಾವೂದ್​ ಇಬ್ರಾಹಿಂಗೆ ಪಾಕಿಸ್ತಾನ ಮಿಲಿಟರಿ ಆಶ್ರಯ ನೀಡಿ, ಚಿಕಿತ್ಸೆ ಕೊಡಿಸುತ್ತಿದೆ ಎಂಬ ವಿಷಯ ಬಯಲಾಗಿದೆ.

ಭಾರತದ ಮೋಸ್ಟ್​ ವಾಂಟೆಡ್ ಉಗ್ರರಲ್ಲಿ ಒಬ್ಬನಾಗಿರುವ ದಾವೂದ್ ಇಬ್ರಾಹಿಂ 1990ರಿಂದ ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದಾನೆ. ಆತನನ್ನು ಬಂಧಿಸಲು ಅನೇಕ ಬಾರಿ ಪ್ರಯತ್ನಿಸಿದರೂ ಇನ್ನೂ ಅದು ಯಶಸ್ವಿಯಾಗಿಲ್ಲ. ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಗಳಿಸಿರುವ ದಾವೂದ್ ಇಬ್ರಾಹಿಂ ಮುಂಬೈನಲ್ಲಿ 1993ರಲ್ಲಿ ನಡೆದ ಗಲಭೆಯ ಮಾಸ್ಟರ್ ಮೈಂಡ್ ಕೂಡ ಹೌದು.

ಇದನ್ನೂ ಓದಿ: ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಬೆನ್ನಿಗೆ ಜೋಧಪುರದಲ್ಲೂ ಅದೇ ರೀತಿಯ ಅಮಾನವೀಯ ಘಟನೆ; ವೈರಲ್‌ ಆಗುತ್ತಿದೆ ವಿಡಿಯೋ

ಮುಂಬೈನಲ್ಲಿ ಹುಟ್ಟಿದ ದಾವೂದ್ ಇಬ್ರಾಹಿಂ ಭಾರತದ ಮೋಸ್ಟ್​ ವಾಂಟೆಡ್ ಉಗ್ರರಲ್ಲಿ ಒಬ್ಬ. ಆತ 30 ವರ್ಷಗಳಿಂದ ಪಾಕಿಸ್ತಾನದಲ್ಲಿ ತಲೆರೆಸಿಕೊಂಡಿದ್ದಾನೆ. ಆದರೆ, ಈ ವಿಷಯವನ್ನು ಪಾಕಿಸ್ತಾನ ಒಪ್ಪಿಕೊಂಡಿರಲಿಲ್ಲ. ಈಗ ಆತ ಕರಾಚಿಯ ಆಸ್ಪತ್ರೆಯಲ್ಲಿದ್ದಾನೆ ಎಂಬುದನ್ನು ಅಲ್ಲಿಯ ಮಾಧ್ಯಮಗಳೇ ವರದಿ ಮಾಡಿವೆ. ದಾವೂದ್​ನ ಹೆಂಡತಿ ಮೆಹೆಜಾಬಿನ್ ಅಲಿಯಾಸ್ ಜುಬಿನಾ ಜರೈನ್​ಗೆ ಕೂಡ ಕೊರೋನಾ ಸೋಂಕು ದೃಢಪಟ್ಟಿದೆ. ಅವರಿಗೆ ಮೂವರು ಹೆಣ್ಣುಮಕ್ಕಳಿದ್ದು, ಒಬ್ಬ ಗಂಡು ಮಗನಿದ್ದಾನೆ.First published: