ಕೋವಿಡ್ ಬಿಕ್ಕಟ್ಟಿನಲ್ಲಿ ಭಾರತದ ಸಹಾಯಹಸ್ತ: ವಿಶ್ವಸಂಸ್ಥೆ ಮೆಚ್ಚುಗೆ

ಕೋವಿಡ್ ಸೋಂಕು ಶಮನಕ್ಕೆ ಉಪಯೋಗಿಸಬಹುದಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಭಾರತ ವಿಶ್ವದ ಹಲವು ರಾಷ್ಟ್ರಗಳಿಗೆ ರಫ್ತು ಮಾಡಿದೆ. ಈ ಕಾರ್ಯಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟೆರೆಸ್

ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟೆರೆಸ್

 • Share this:
  ನವದೆಹಲಿ(ಏ. 18): ಕೊರೋನಾ ವೈರಸ್ ಸೋಂಕು ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಚೀನಾದಲ್ಲಿ ಡಿಸೆಂಬರ್ ತಿಂಗಳಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಈ ವೈರಸ್ ಇದೀಗ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ವ್ಯಾಪಿಸಿದೆ. ಎಲ್ಲ ದೇಶಗಳೂ ಸಂಕಷ್ಟದಲ್ಲಿವೆ. ಪರಸ್ಪರ ಕೈಜೋಡಿಸಿ ಈ ಪಿಡುಗಿನ ವಿರುದ್ಧ ಹೋರಾಡುವುದು ಅಗತ್ಯ ಇದೆ. ಕೆಲ ದೇಶಗಳು ಈಗಾಗಲೇ ಈ ನಿಟ್ಟಿನಲ್ಲಿ ಕೈಲಾದಷ್ಟು ಸಹಾಯ ಮಾಡುತ್ತಿವೆ. ಭಾರತ ಕೂಡ ವಿಶ್ವದ ಹಲವು ದೇಶಗಳಿಗೆ ಹೈಡ್ರಾಕ್ಸಿಕ್ಲೋರಿಕ್ಯೂನ್ ಔಷಧವನ್ನು ರಫ್ತು ಮಾಡಿದೆ. ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಭಾರತದ ನೆರವಿನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  “ಕೋವಿಡ್ ವಿರುದ್ಧದ ಹೋರಾಟಕ್ಕೆ ಜಾಗತಿಕ ಒಗ್ಗಟ್ಟು ಅಗತ್ಯತೆ ಇದೆ. ಪ್ರತಿಯೊಂದು ದೇಶವೂ ಕೂಡ ಬೇರೆ ದೇಶಗಳಿಗೆ ತನ್ನ ಕೈಲಾಗುವ ಸಹಾಯವನ್ನು ಮಾಡಬೇಕಿದೆ. ಈ ಕೆಲಸ ಮಾಡುತ್ತಿರುವ ದೇಶಗಳಿಗೆ ನಾವು ನಮಿಸುತ್ತೇವೆ” ಎಂದು ವಿಶ್ವಸಂಸ್ಥೆ ಮುಖ್ಯಸ್ಥರ ವಕ್ತಾರ ಸ್ಪೀಫೇನ್ ಡುಜಾರಿಚ್ ತಿಳಿಸಿದ್ದಾರೆ.

  ಇದನ್ನೂ ಓದಿ: ಭಾರತೀಯ ನೌಕಾಪಡೆಗೂ ತಟ್ಟಿದ ಕೊರೋನಾ ಭೀತಿ; ಮುಂಬೈನ 21 ನಾವಿಕರಲ್ಲಿ ಸೋಂಕು ಪತ್ತೆ!

  ವಿವಿಧ ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಸರಬರಾಜು ಮಾಡಲು ಭಾರತ ಒಪ್ಪಿಕೊಂಡಿರುವ ಬಗ್ಗೆ ಅವರು ಪ್ರತಿಕ್ರಿಯಿಸುತ್ತಾ ಈ ಹೇಳಿಕೆ ನೀಡಿದರು.

  ಕೊರೋನಾ ವೈರಸ್ ಸೋಂಕಿಗೆ ಈಗಲೂ ಔಷಧವನ್ನು ಕಂಡುಹಿಡಿಯಲಾಗಿಲ್ಲ. ಸಂಶೋಧನೆ, ಪ್ರಯೋಗಗಳು ನಡೆಯುತ್ತಲೇ ಇವೆ. ಕೆಲ ಪ್ರಯೋಗಗಳು ಅಂತಿಮ ಹಂತಕ್ಕೆ ಬಂದಿವೆ. ಭಾರತದಲ್ಲಿ ಮಲೇರಿಯಾ ರೋಗಕ್ಕೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ಯೂನ್ ಔಷಧವು ಕೊರೋನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಸಹಾಯಕವಾಗಬಲ್ಲುದು ಎಂಬುದು ಕೆಲ ಪ್ರಯೋಗಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸುವಂತೆ ಅಧಿಕೃವಾಗಿ ನಿರ್ಧರಿಸಲಾಯಿತು. ಅದಾದ ಬಳಿಕ ಔಷಧವನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರ ನಿರ್ದೇಶನ ಹೊರಡಿಸಿತು.

  ಇದನ್ನೂ ಓದಿ: ಲಾಕ್​ಡೌನ್ ನಡುವೆ ಅವಿರತವಾಗಿ ಶ್ರಮಿಸುತ್ತಿರುವ ಎಲ್ಲಾ ವರ್ಗದ ಸಿಬ್ಬಂದಿಗೆ Google Doodle ವಂದನೆ

  ಇದೇ ವೇಳೆ, ಹೈಡ್ರಾಕ್ಸಿಕ್ಲೋರೋಕ್ಯೂನ್ ಔಷಧಕ್ಕೆ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚಾಯಿತು. ಅಮೆರಿಕ ತನಗೆ ಈ ಔಷಧ ನೀಡಬೇಕೆಂದು ಭಾರತದ ಮೇಲೆ ಒತ್ತಡ ಹಾಕಿತು. ಆ ಬಳಿಕ ಕೇಂದ್ರ ಸರ್ಕಾರ ಈ ಔಷಧದ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸಿತು. ವಿಶ್ವದ ಅನೇಕ ದೇಶಗಳು ಈ ಔಷಧಕ್ಕೆ ಬೇಡಿಕೆ ಇಟ್ಟಿವೆ. ಸಂಕಷ್ಟದ ಕಾಲದಲ್ಲಿ ಭಾರತ ಮಾಡಿರುವ ಸಹಾಯವನ್ನು ಯಾವತ್ತೂ ಮರೆಯುವುದಿಲ್ಲ ಎಂದು ಅಮೆರಿಕ ಹೇಳಿದೆ.

  ಬೇರೆ ದೇಶಗಳಿಗೆ ಔಷಧ ಪೂರೈಸಿದರೆ ಭಾರತದಲ್ಲಿ ಕೊರತೆ ಸೃಷ್ಟಿಯಾಗುವ ಆತಂಕವನ್ನು ಹಲವರು ವ್ಯಕ್ತಪಡಿಸಿದ್ಧಾರೆ. ಆದರೆ, ಭಾರತಕ್ಕೆ ಬೇಕಾಗುವಷ್ಟು ಔಷಧವನ್ನ ಇಟ್ಟುಕೊಂಡು ಉಳಿದಿವನ್ನು ಅನ್ಯ ದೇಶಗಳಿಗೆ ಕೊಡುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ.

  First published: