• ಹೋಂ
  • »
  • ನ್ಯೂಸ್
  • »
  • Corona
  • »
  • ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ; ಸಚಿವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್!

ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ; ಸಚಿವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್!

ಸಚಿವ ಉಮೇಶ್ ಕತ್ತಿ ಶವಯಾತ್ರೆ.

ಸಚಿವ ಉಮೇಶ್ ಕತ್ತಿ ಶವಯಾತ್ರೆ.

ಸಚಿವ ಉಮೇಶ್ ಕತ್ತಿ ಹೇಳಿಕೆ ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ. ಸಚಿವರು ದಬ್ಬಾಳಿಕೆ, ನಿಷ್ಕಾಳಜಿ, ಉಡಾಫೆ ವರ್ತನೆ ತೋರಿಸುತ್ತಿದ್ದಾರೆ. ಜೆಪಿ ನಡ್ಡಾ, ನಳಿನ್ ಕುಮಾರ್ ಕಟೀಲ್ ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಡಬೇಕು ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದ್ದಾರೆ.

ಮುಂದೆ ಓದಿ ...
  • Share this:

    ಬೆಂಗಳೂರು (ಏಪ್ರಿಲ್ 28); ರೈತರೊಬ್ಬರಿಗೆ ಸತ್ತೋಗು ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪೇಚಿಗೆ ಸಿಲುಕಿರುವ ಬಿಜೆಪಿ ಸಚಿವ ಉಮೇಶ್ ಕತ್ತಿ ವಿರುದ್ಧ ಇಂದು ಕಾಂಗ್ರೆಸ್​ ಕಾರ್ಯಕರ್ತರು ಅಣಕು ಶವಯಾತ್ರ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.  ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಡವರಿಗೆ ಪಡಿತರ ಅಕ್ಕಿಯನ್ನು ಈ ಹಿಂದೆ ತಿಂಗಳಿಗೆ 5 ಕೆ.ಜಿ. ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು 3 ಕೆ.ಜಿ.ಗೆ ಇಳಿಸಿದೆ. ಇದರಿಂದಾಗಿ ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ರೈತರಿಗೆ ಸಾಕಷ್ಟು ಸಂಷಕ್ಟ ಎದುರಾಗಿದೆ. ಹೀಗಾಗಿಯೇ ರೈತರೊಬ್ಬರು ಸಚಿವ ಆಹಾರ ಸಚಿವ ಉಮೇಶ್ ಕತ್ತಿ ಅವರಿಗೆ ಕರೆ ಮಾಡಿ, "ಸಂಕಷ್ಟದ ಸಂದರ್ಭದಲ್ಲಿ ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಾವು ಸಾಯಬೇಕಾ ಬದುಕಬೇಕಾ?" ಎಂದು ಪ್ರಶ್ನಿಸಿದ್ದಾರೆ. ಆದರೆ, ಅದಕ್ಕೆ ದರ್ಪದಿಂದಲೇ ಉತ್ತರಿಸಿದ್ದ ಸಚಿವ ಉಮೇಶ್ ಕತ್ತಿ "ಸಾಯಿ" ಎಂದು ಹೇಳಿರುವುದು ಇದೀಗ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಹೇಳಿಕೆ ಸಂಬಂಧ ಸಚಿವ ಉಮೇಶ್ ಕತ್ತಿ ಕ್ಷಮೆಯನ್ನೂ ಯಾಚಿಸಿದ್ದರು.


    ಆದರೆ, ಇಷ್ಟಕ್ಕೆ ಸಮಾಧಾನವಾಗದ ಕಾಂಗ್ರೆಸ್​ ಕಾರ್ಯಕರ್ತರು ಸಚಿವ ಉಮೇಶ್ ಕತ್ತಿ ಅವರ ಶತಯಾತ್ರೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಕಾಂಗ್ರೆಸ್​ ಭವನದಲ್ಲಿ ಶವಯಾತ್ರೆ ನಡೆಸಿ ಶವಕ್ಕೆ ಬೆಂಕಿ ಹಚ್ಚಿದ್ದ ಕೈ ಕಾರ್ಯಕರ್ತರು, ಶವಯಾತ್ರೆಯನ್ನು ಸಿಎಂ ಗೃಹ ಕಚೇರಿ ಕೃಷ್ಣಾ ವರೆಗೆ ನಡೆಸಲು ಪೊಲೀಸರ ಬಳಿ ಅನುಮತಿ ಕೇಳಿದ್ದರು. ಆದರೆ, ಕೊರೋನಾ ಕಾರಣದಿಂದಾಗಿ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ ಕಾರಣ ಕಾಂಗ್ರೆಸ್ ಭವನದಲ್ಲೇ ಶವಯಾತ್ರೆಯ ಅಣಕು ಪ್ರದರ್ಶನ ಹಾಗೂ ಅಂತ್ಯ ಸಂಸ್ಕಾರ ನಡೆಸಲಾಗಿದೆ.


    ಈ ವೇಳೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, "ಉಮೇಶ್ ಕತ್ತಿಯವರ ಆಡಿಯೋ ಹೇಳಿಕೆಯನ್ನು ನಾನೂ ಕೇಳಿಸಿಕೊಂಡೆ. ಉಮೇಶ್ ಕತ್ತಿ ಕರೆ ಮಾಡಿದ ವ್ಯಕ್ತಿಗೆ ಸಾಯಿ ಅಂತ ಹೇಳಿದ್ದಾರೆ. ಇದನ್ನು ಖಂಡಿಸಿ ನಾವು ಇಂದು ಪ್ರತಿಭಟನೆ ನಡೆಸಿದ್ದೇವೆ. ಸಚಿವ ಉಮೇಶ್ ಕತ್ತಿ ಹೇಳಿಕೆ ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ. ಸಚಿವರು ದಬ್ಬಾಳಿಕೆ, ನಿಷ್ಕಾಳಜಿ, ಉಡಾಫೆ ವರ್ತನೆ ತೋರಿಸುತ್ತಿದ್ದಾರೆ. ಜೆಪಿ ನಡ್ಡಾ, ನಳಿನ್ ಕುಮಾರ್ ಕಟೀಲ್ ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಡಬೇಕು.


    ಜನ ಕೊರೋನಾ ಚಿಕಿತ್ಸೆ ಸೌಕರ್ಯ ಸಿಗದೆ ಸಾಯುತ್ತಿದ್ದಾರೆ. ಇಂಥ ದುಸ್ಥತಿಯಲ್ಲಿ ಇಡೀ ಸರ್ಕಾರ ತಲೆ ತಗ್ಗಿಸುವ ಹೇಳಿಕೆಯನ್ನು ಸಚಿವ ಉಮೇಶ್ ಕತ್ತಿ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಸಚಿವ ಉಮೇಶ್ ಕತ್ತಿ ಅಣಕು ಶವಕ್ಕೆ ಬೆಂಕಿ ಇಟ್ಟು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ" ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.


    ಉಮೇಶ್ ಕತ್ತಿ ಫೋನ್ ಸಂಭಾಷಣೆಯ ಮಾತುಕತೆ


    ರೈತ: ಎರಡು ಕೆ.ಜಿ. ಅಕ್ಕಿ ಮಾಡಿದ್ದಿರಾ ಅದು ಸಾಲುತ್ತಾ ಸಾರ್.


    ಕತ್ತಿ: ಮೂರು ಕೆ.ಜಿ. ರಾಗಿ ಮಾಡಿದ್ದಿವಿರೈತ: ನಮ್ಮ ಉತ್ತರ ಕರ್ನಾಟಕ ಭಾಗದವರಿಗೆ ಎಲ್ಲಿ ರಾಗಿ ಕೊಡ್ತಾ ಇದೀರಾ?


    ಕತ್ತಿ: ಉತ್ತರ ಕರ್ನಾಟಕದಲ್ಲಿ ಜೋಳ ಮತ್ತು ಅಕ್ಕಿ ಮಾಡಿದ್ದಿವಿ.ರೈತ: ಅದೇ ಸಾರ್ ಸಾಲುತ್ತಾ ಸಾರ್. ಅದು, ಲಾಕ್​ಡೌನ್​ನಲ್ಲಿ ಕೆಲಸ ಇಲ್ಲ.


    ಕತ್ತಿ; ಲಾಕ್​ಡೌನ್​ ಟೈಮಲ್ಲಿ ಕೇಂದ್ರ ಸರ್ಕಾರ ಪ್ರತಿ ತಿಂಗಳು ಮೇ, ಜೂನ್​ನಲ್ಲಿ 5 ಕೆ.ಜಿ. ಅಕ್ಕಿ ಕೊಡ್ತಾ ಇದೆ.


    ರೈತ: ಯಾವಾಗ ಕೊಡ್ತಾ ಇದೀರಾ?


    ಕತ್ತಿ: ಬರೋ ತಿಂಗಳಲ್ಲಿ


    ರೈತ: ಅಲ್ಲಿಯವರೆಗೂ ಉಪವಾಸ ಇರೋದಾ ಸಾರ್. ಇಲ್ಲಾ ಸತ್ತೋಗೊದಾ?


    ಕತ್ತಿ: ಸತ್ತೋದ್ರೆ ಒಳ್ಳೆಯದು. ಅದಕ್ಕಿಂದ ಅಕ್ಕಿ ಮಾರೋದು ಅಲ್ಲೇ ಬಂದ್​ ಮಾಡಿಬಿಡಿ. ಇಡಿ ನಮಗೆ ಫೋನ್ ಮಾಡಬೇಡಿ.


    ಇದನ್ನೂ ಓದಿ: Umesh Katti: ಉಮೇಶ್ ಕತ್ತಿ ದರ್ಪದ ಉತ್ತರದ ವಿರುದ್ಧ ಭುಗಿಲೆದ್ದ ಜನಾಕ್ರೋಶ; ರಾಜ್ಯದ ರೈತರ ಹಾಗೂ ಪಡಿತರ ಕ್ಷಮೆಯಾಚಿಸಿದ ಸಚಿವ


    ಸಚಿವ ಉಮೇಶ್ ಕತ್ತಿ ಮಾತನಾಡಿರುವ ಆಡಿಯೋ ಇದೀಗ ಫುಲ್ ವೈರಲ್ ಆಗಿದ್ದು, ಸಚಿವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಷಯ ವಿವಾದಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿಗಳೇ ಮಧ್ಯೆಪ್ರವೇಶಿಸಿ ಘಟನೆಗೆ ವಿಷಾದ ವ್ಯಕ್ತಪಡಿಸಿರುವುದಲ್ಲದೇ, ಉತ್ತರ ಕರ್ನಾಟಕ ಭಾಗಕ್ಕೆ ಗೋಧಿ ಬೇಡವಾದರೆ 5 ಕೆ.ಜಿ. ಅಕ್ಕಿ ನೀಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

    Published by:MAshok Kumar
    First published: