HOME » NEWS » Coronavirus-latest-news » UMESH KATTI CALLED DINNER PARTY FOR MLAS AS NOT ROTI MEALS AVAILABLE IN BENGALURU SAYS DCM LAXMAN SAVADI HK

ಲಾಕ್​ಡೌನ್​ನಿಂದ ಬೆಂಗಳೂರಲ್ಲಿ ರೊಟ್ಟಿ ಊಟ ಸಿಗ್ತಿರಲಿಲ್ಲ, ಅದಕ್ಕೆ ಉಮೇಶ್ ಕತ್ತಿ ಶಾಸಕರಿಗೆ ಊಟದ ವ್ಯವಸ್ಥೆ ಮಾಡಿದ್ರು: ಸವದಿ ಹಾಸ್ಯ ಚಟಾಕಿ

ಶಾಸಕರ ನೀರೀಕ್ಷೆಗಳು ದೊಡ್ಡಮಟ್ಟದಲ್ಲಿ ಇರುವುದರಿಂದ ಸ್ವಲ್ಪ ಅಸಮಾಧಾನ ಎದ್ದಿದೆ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಸರಿಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಪ್ರವೃತ್ತರಾಗಿದ್ದಾರೆ.

news18-kannada
Updated:June 8, 2020, 12:53 PM IST
ಲಾಕ್​ಡೌನ್​ನಿಂದ ಬೆಂಗಳೂರಲ್ಲಿ ರೊಟ್ಟಿ ಊಟ ಸಿಗ್ತಿರಲಿಲ್ಲ, ಅದಕ್ಕೆ ಉಮೇಶ್ ಕತ್ತಿ ಶಾಸಕರಿಗೆ ಊಟದ ವ್ಯವಸ್ಥೆ ಮಾಡಿದ್ರು: ಸವದಿ ಹಾಸ್ಯ ಚಟಾಕಿ
ಡಿಸಿಎಂ ಲಕ್ಷ್ಣಣ ಸವದಿ
  • Share this:
ಕಲಬುರ್ಗಿ(ಜೂ. 08): ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟ ಮಾಡಲು ಉಮೇಶ್ ಕತ್ತಿ ಮನೆಯಲ್ಲಿ ಶಾಸಕರು ಬಂದಿದ್ದರು ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕೊರೋನಾ ಲಾಕ್ ಡೌನ್ ಇದ್ದುದ್ದರಿಂದ ಬೆಂಗಳೂರಿನಲ್ಲಿ ಎಲ್ಲಿಯೂ ರೊಟ್ಟು ಊಟ ಸಿಗುತ್ತಿರಲಿಲ್ಲ. ಉತ್ತರ ಕರ್ನಾಟಕದ ಶಾಸಕರಿಗೆ ಬೆಂಗಳೂರಿಗೆ ಬಂದ್ರೆ ಹೋಟೆಲ್ ಬಂದ್ ಇರುವ ಕಾರಣ ರೊಟ್ಟಿ ಊಟ ಸಿಗುತ್ತಿಲ್ಲ. ಉತ್ತರ ಕರ್ನಾಟಕದ ಶಾಸಕರಿಗೆ ರೊಟ್ಟಿ ಊಟದ ಮೇಲೆ ವಿಶೇಷ ಅಭಿರುಚಿಯಿದೆ. ಹೀಗಾಗಿ ಉತ್ತರ ಕರ್ನಾಟಕ ಶೈಲಿಯ ಊಟ ಉಣಬಡಿಸಲು ಕತ್ತಿ ಅವರು ಶಾಸಕರಿಗೆ ಆಹ್ವಾನ ನೀಡಿದ್ದರು.

ನಾನೂ ಸಹ ಕೆಲವೊಮ್ಮೆ ಕೆಲ ಶಾಸಕರನ್ನು ಊಟಕ್ಕೆ ಕರೆದಿದ್ದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪಕ್ಷ ಅಂದ ಮೇಲೆ ಭಿನ್ನಾಭಿಪ್ರಾಯ ಇರುವುದು ಸಹಜ. ಕೆಲ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಅದರಲ್ಲಿಯೂ ಯಡಿಯೂರಪ್ಪ ಸರ್ಕಾರಕ್ಕೆ ತೊಂದರೆಗಳ ಮೇಲೆ ತೊಂದರೆ ಬರುತ್ತಿವೆ. ಮೊದಲು ಪ್ರವಾಹ ಬಂದಿತ್ತು. ಈಗ ಕೊರೋನಾ ಬಂದಿದ್ದು, ಎಲ್ಲ ಯೋಜನೆಗಳಿಗೂ ಹಣಕಾಸು ವ್ಯವಸ್ಥೆ ಮಾಡುವುದು ಕಷ್ಟ ಅನ್ನುವಂತಾಗಿದೆ ಎಂದರು.

ಶಾಸಕರ ನೀರೀಕ್ಷೆಗಳು ದೊಡ್ಡಮಟ್ಟದಲ್ಲಿ ಇರುವುದರಿಂದ ಸ್ವಲ್ಪ ಅಸಮಾಧಾನ ಎದ್ದಿದೆ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಸರಿಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಪ್ರವೃತ್ತರಾಗಿದ್ದಾರೆ. ಬಿಜೆಪಿ ಸರ್ಕಾರ ಯಾವುದೇ ತೊಂದರೆಯಿಲ್ಲದೆ ಮೂರು ವರ್ಷ ಪೂರೈಸುತ್ತೆ ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಸಾರಿಗೆ ಬಸ್ ದರ ಏರಿಸಿ ಗಾಯದ ಮೇಲೆ ಬರೆ ಎಳೆಯಲ್ಲ

ಸಾರಿಗೆ ಬಸ್ ದರ ಏರಿಕೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಲ್ಲ ಎಂದು ಡಿಸಿಎಂ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪ್ಟಟಿದ್ದಾರೆ. ಸದ್ಯಕ್ಕೆ ಬಸ್ ದರ ಏರಿಕೆಯಿಲ್ಲ. ಬಸ್ ದರ ಏರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಲಾಕ್ ಡೌನ್ ನಿಂದ ಸಾರಿಗೆ ನಿಗಮಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಜೊತೆಗೆ ಜನತೆಯೂ ಸಂಕಷ್ಟದಲ್ಲಿದೆ.
ಇಂತಹ ಸಂದರ್ಭದಲ್ಲಿ ಬಸ್ ದರ ಏರಿಸುವುದಿಲ್ಲ. ಈಗಾಗಲೇ ಶೇ.12 ರಷ್ಟು ಬಸ್ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ : ರಾಜ್ಯಸಭಾ ಚುನಾವಣೆಗೆ ದೇವೇಗೌಡರಿಂದ ನಾಳೆ ನಾಮಪತ್ರ: ಹೆಚ್​ಡಿಕೆ ಟ್ವೀಟ್

1200ಕ್ಕೂ ಹೆಚ್ಚು ಬಸ್ ಗಳು ಗುಜರಿಯಾಗಿವೆ. ಅತಿ ಹೆಚ್ಚು ರನ್ ಆದ ಸಾವಿರಾರು ಬಸ್ ಗಳು ನಿಗಮದಲ್ಲಿವೆ. ಸರ್ಕಾರಕ್ಕೆ ನಾಲ್ಕು ಸಾವಿರ ಹೊಸ ಬಸ್ ಕೊಡಿಸುವಂತೆ ಮನವಿ ಮಾಡಿದ್ದೇನೆ. ಲಾಕ್ ಡೌನ್ ಕಾರಣದಿಂದಾಗಿ ಸರ್ಕಾರವೂ ಏನೂ ಮಾಡದ ಸ್ಥಿತಿಯಲ್ಲಿದೆ. ಇದೆಲ್ಲವೂ ಒಂದು ಹಂತಕ್ಕೆ ಬಂದ ನಂತರ ಸರ್ಕಾರ ನಾಲ್ಕು ಸಾವಿರ ಬಸ್ ಖರೀದಿಸಿ ಕೊಡಲಿದೆ ಎಂದರು.
Youtube Video
First published: June 8, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories