• Home
  • »
  • News
  • »
  • coronavirus-latest-news
  • »
  • 10 ದಿನಗಳ ಕ್ವಾರಂಟೈನ್ ಉಲ್ಲೇಖಿಸಿ ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಅಧಿಕೃತ ಘೋಷಣೆ ನವೀಕರಿಸಿದ ಇಂಗ್ಲೆಂಡ್

10 ದಿನಗಳ ಕ್ವಾರಂಟೈನ್ ಉಲ್ಲೇಖಿಸಿ ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಅಧಿಕೃತ ಘೋಷಣೆ ನವೀಕರಿಸಿದ ಇಂಗ್ಲೆಂಡ್

ಇಂಗ್ಲೆಂಡ್ ವಿಮಾನ ನಿಲ್ದಾಣ.

ಇಂಗ್ಲೆಂಡ್ ವಿಮಾನ ನಿಲ್ದಾಣ.

ಹೊಸ ಬ್ರಿಟಿಷ್ ನಿಯಮಗಳು ಅಸ್ಟ್ರಾಜೆನಿಕಾ ಕೋವಿಶೀಲ್ಡ್ ಅನುಮೋದನೆ ಪಡೆದ ಲಸಿಕೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದರೂ, ನಮೂದಿಸಿದ 17 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ. ಇಂಗ್ಲೆಂಡ್‌ನ ಈ ರೀತಿಯ ಧೋರಣೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

  • Trending Desk
  • 5-MIN READ
  • Last Updated :
  • Share this:

ಲಂಡನ್ (ಅಕ್ಟೋಬರ್​ 04); ಭಾರತದ ಲಸಿಕಾ ಪ್ರಮಾಣಪತ್ರವನ್ನು ಗುರುತಿಸುವ ಇಂಗ್ಲೆಂಡ್ ಸರಕಾರದ ನಿಲುವಿಗೆ ಪ್ರರಸ್ಪರ ಕ್ರಮಕ್ಕೆ ಸಂಬಂಧಿಸಿ ಭಾರತವು ಇಂಗ್ಲೆಂಡ್‌ನಿಂದ ಆಗಮಿಸುವವರಿಗೆ ಹತ್ತು ದಿನದ ಕ್ವಾರಂಟೈನ್ (Quarantine) ಕಡ್ಡಾಯಗೊಳಿಸಿದ ಒಂದು ದಿನದ ನಂತರ ಇಂಗ್ಲೆಂಡ್ (England) ಸರಕಾರವು ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ತನ್ನ ಅಧಿಕೃತ ಘೋಷಣೆಯನ್ನು ನವೀಕರಿಸಿದೆ.ಭಾರತಕ್ಕೆ ಆಗಮಿಸುವ ಪ್ರಯಾಣಿಕರು ತಮ್ಮ ಲಸಿಕಾ ಪ್ರಮಾಣಪತ್ರದ ಹೊರತಾಗಿಯೂ, ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ COVID-19 RT-PCR ಪರೀಕ್ಷೆಗೆ ಒಳಪಡಬೇಕಾಗುತ್ತದೆ ಹಾಗೂ ತಮ್ಮದೇ ಸ್ವಂತ ಖರ್ಚಿನಲ್ಲಿ 8ನೇ ದಿನದಂದು ಆಗಮಿಸಿದ ನಂತರ ನಿವಾಸ ಇಲ್ಲದಿದ್ದರೆ ಬೇರೆ ಸ್ಥಳದಲ್ಲಿ ಕಡ್ಡಾಯ 10 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ ಎಂದು ನವೀಕರಿಸಲಾದ ಸಲಹೆ ತಿಳಿಸಿದ್ದು, ಈ ಹೊಸ ನಿಯಮ ಅಕ್ಟೋಬರ್ 4ರಿಂದ (ಇಂದಿನಿಂದ) ಜಾರಿಗೆ ಬರಲಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.


ಭಾರತಕ್ಕೆ ಆಗಮಿಸುವ ಕುರಿತು ನಿಯಮಗಳನ್ನು ಹೊಂದಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿಗಳನ್ನು ಭಾರತೀಯ ಅಧಿಕಾರಿಗಳು ಹೊಂದಿರುತ್ತಾರೆ. ಈ ನಿಯಮಗಳಲ್ಲಿ ಏನಾದರೂ ಬದಲಾವಣೆಗಳಾದಲ್ಲಿ ಇಂಗ್ಲೆಂಡ್ ಸರಕಾರದಡಿಯಲ್ಲಿ FCDO ಪ್ರಯಾಣ ಸಲಹೆಯನ್ನು ನವೀಕರಿಸುತ್ತೇವೆ ಎಂದು ಇಂಗ್ಲೆಂಡ್ ಸರಕಾರದ ಅಧಿಕೃತ ವಕ್ತಾರರು ತಿಳಿಸಿದ್ದಾರೆ. ವ್ಯಾಕ್ಸಿನೇಶನ್ ವರದಿಯ ಹೊರತಾಗಿಯೂ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಭಾರತವು ಹತ್ತು ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.


ಭಾರತವು ಇದುವರೆಗೆ ಇಂತಹ ನಿರ್ಬಂಧಗಳನ್ನು ಯಾವುದೇ ದೇಶಕ್ಕೆ ಘೋಷಿಸಿಲ್ಲವಾ ದ್ದರಿಂದ ಇದೊಂದು ಅನಿರೀಕ್ಷಿತ ಕ್ರಮವಾಗಿದೆ. ಇಂಗ್ಲೆಂಡ್ ಸರಕಾರವು ಜಾರಿಗೆ ತಂದಿರುವ ಹೊಸ ನಿಯಮಗಳಿಗೆ ಪ್ರಕ್ರಿಯೆಯಾಗಿ ಭಾರತ ಸರಕಾರವು ಈ ನಿಯಮ ಜಾರಿಗೊಳಿಸಿದೆ ಎನ್ನಲಾಗಿದೆ. ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಫಾರ್ಮ್ಯುಲೇಶನ್ ಕೋವಿಶೀಲ್ಡ್ ಗುರುತಿಸಿದ ಹೊರತಾಗಿಯೂ ಇಂಗ್ಲೆಂಡ್ ಸರಕಾರವು ಭಾರತದ ಲಸಿಕಾ ಪ್ರಮಾಣಪತ್ರವನ್ನು ಅಂಗೀಕರಿಸಲು ನಿರಾಕರಿಸಿದೆ.


ಇದರಿಂದಾಗಿ ಎರಡು ಬಾರಿ ಲಸಿಕೆ ಹಾಕಿದ ಪ್ರಯಾಣಿಕರು ಕೂಡ ಲಸಿಕೆ ಹಾಕದ ಪ್ರಯಾಣಿಕರಿಗೆ ಸಮನಾಗಿದ್ದು 10 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಬೇಕಾಗಿದೆ. ಇನ್ನು ಇಂಗ್ಲೆಂಡ್‌ಗೆ ಪ್ರವೇಶಿಸಲು ಬೇರೆಡೆ ಸಂಪೂರ್ಣವಾಗಿ ಲಸಿಕೆ ಪಡೆದವರಿಗೆ ಇದೇ ನೀತಿ ವಿಸ್ತರಿಸಲು ಇಂಗ್ಲೆಂಡ್ ಅಧಿಕೃತ ವಲಯಗಳು ಯೋಜಿಸುತ್ತಿದ್ದು, ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಹಂತ ಹಂತವಾಗಿ ಪ್ರಪಂಚದಾದ್ಯಂತ ಎಲ್ಲ ದೇಶಗಳು ಹಾಗೂ ಪ್ರಾಂತ್ಯಗಳಿಗೆ ನೀತಿಯ ವಿಸ್ತರಣೆಯನ್ನು ಮುಂದುವರಿಸಲು ಯೋಜಿಸುತ್ತಿದ್ದೇವೆ. ವ್ಯಾಕ್ಸಿನ್ ಪ್ರಮಾಣಪತ್ರದ ವಿಸ್ತರಣೆಯನ್ನು ಪ್ರತಿ ಮೂರು ವಾರಗಳಿಗೊಮ್ಮೆ ಪರಿಶೀಲಿಸಲಾಗುವುದು ಎಂದು ಪಿಟಿಐಗೆ ಸುದ್ದಿ ಮೂಲಗಳು ತಿಳಿಸಿವೆ.


ಇಂಗ್ಲೆಂಡ್ ಹಾಗೂ ಭಾರತ ಸರಕಾರಗಳು ಪರಸ್ಪರ ಧೋರಣೆಗೆ ಬದ್ಧವಾಗಿದ್ದು ಯಾವುದೇ ಪರಿಹಾರ ಕಂಡುಬಂದಿಲ್ಲ. ಹೀಗಾಗಿ ಅಕ್ಟೋಬರ್ 4ರಿಂದ ವ್ಯಾಕ್ಸಿನ್ ಪ್ರಮಾಣಪತ್ರವನ್ನು ಪ್ರಯಾಣಿಕರು ಹೊಂದಿದ್ದರೂ 10 ದಿನಗಳ ಕ್ವಾರಂಟೈನ್ ಎರಡೂ ದೇಶಗಳಿಗೆ ಕಡ್ಡಾಯವಾಗಿದೆ.


ಇಂಗ್ಲೆಂಡ್ ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (FCDO) ಯಿಂದ ನವೀಕರಿಸಿದ ಪ್ರಯಾಣ ಸಲಹೆಯ ಪ್ರಕಾರ 8ನೇ ದಿನದಂದು ಹೆಚ್ಚುವರಿ ಕೋವಿಡ್-19 ಪರೀಕ್ಷೆ ಹಾಗೂ ಇಂಗ್ಲೆಂಡ್‌ನಿಂದ ಭಾರತಕ್ಕೆ ಹೋಗುವ ಎಲ್ಲಾ ಪ್ರಯಾಣಿಕರಿಗೆ ಹತ್ತು ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.


ಇದನ್ನೂ ಓದಿ: CoronaVirus| ಕೋವಿಡ್ ಬಿಕ್ಕಟ್ಟು; ಭಾರತೀಯರ ಪ್ರಯಾಣವನ್ನು ಸಾಧ್ಯವಾದಷ್ಟು ಸುಲಭಗೊಳಿಸುವ ಭರವಸೆ ನೀಡಿದ ಇಂಗ್ಲೆಂಡ್


ಹೊಸ ಬ್ರಿಟಿಷ್ ನಿಯಮಗಳು ಅಸ್ಟ್ರಾಜೆನಿಕಾ ಕೋವಿಶೀಲ್ಡ್ ಅನುಮೋದನೆ ಪಡೆದ ಲಸಿಕೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದರೂ, ನಮೂದಿಸಿದ 17 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ. ಇಂಗ್ಲೆಂಡ್‌ನ ಈ ರೀತಿಯ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತವು ತನ್ನ ನೀತಿಯನ್ನು ಜಾರಿಗೊಳಿಸಿದೆ ಎನ್ನಲಾಗಿದೆ.

Published by:MAshok Kumar
First published: