ಕೊರೋನಾ ಆತಂಕದ ನಡುವೆ ಇಂದು ಯುಗಾದಿ ಆಚರಣೆ; ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಣೆಗೆ ಸೂಚನೆ

ಕೊರೋನಾ ಭೀತಿ, ಸರ್ಕಾರಗಳ ಎಚ್ಚರಿಕೆ ನಡುವೆ ಜನರು ಮನೆಯಲ್ಲಿಯೇ ಈ ಬಾರಿಯ ಯುಗಾದಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಹೊಸ ಯುಗ ಆರಂಭಕ್ಕೂ ಮುನ್ನ ಆರಂಭವಾದ ಮಹಾಮಾರಿ ಹಬ್ಬದ ನಂತರದ ದಿನದಲ್ಲಾದರೂ ಕಣ್ಮರೆಯಾಗಿ ಹೊರಟುಹೋಗಲಿ.

news18-kannada
Updated:March 25, 2020, 7:39 AM IST
ಕೊರೋನಾ ಆತಂಕದ ನಡುವೆ ಇಂದು ಯುಗಾದಿ ಆಚರಣೆ; ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಣೆಗೆ ಸೂಚನೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ದಿನದಿಂದ ದಿನಕ್ಕೆ ತನ್ನ ಕರಾಳ ಛಾಯೆ ತೋರುತ್ತಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗದೆ ರುದ್ರನರ್ತನ ಮೆರೆಯುತ್ತಿದೆ. ಏತನ್ಮಧ್ಯೆ ಇಂದು ಹಿಂದೂಗಳ ಹೊಸ ವರ್ಷದ ಹಬ್ಬವಾದ ಯುಗಾದಿಯನ್ನು ಕೊರೋನಾತಂಕದ ನಡುವೆಯೇ ಸರಳವಾಗಿ ಆಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶದಲ್ಲಿ ಈವರೆಗೂ 500ಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿಗೆ ತುತ್ತಾಗಿದ್ದು, ಹತ್ತು ಮಂದಿ ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕು ವ್ಯಾಪಕವಾಗಿ ಹಬ್ಬದಂತೆ ತಡೆಗಟ್ಟಲು ಇಡೀ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್ ಮಾಡಲಾಗಿದೆ.

ಇದಕ್ಕೂ ಮುನ್ನ ರಾಜ್ಯ ಸರ್ಕಾರ ಮಾ.31ರವರೆಗೆ ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಿತ್ತು. ಬಳಿಕ ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಭಾರತ ಸೇರಿದಂತೆ ಜಗತ್ತು ಸಂಕಷ್ಟ ಸ್ಥಿತಿಯಲ್ಲಿದೆ. ಮದ್ದಿಲ್ಲದ ಕೊರೋನಾ ಕಾಯಿಲೆಗೆ ಮನೆಯಲ್ಲಿ ಸುರಕ್ಷಿತವಾಗಿ ಇರುವುದೇ ಮದ್ದು ಎಂದು ಹೇಳಿ ಏಪ್ರಿಲ್ 14ರವರೆಗೆ ಲಾಕ್​ಡೌನ್ ಘೋಷಣೆ ಮಾಡಿದರು. ಹೀಗಾಗಿ ಇಂದಿನಿಂದ ಬಹಳ ಕಟ್ಟುನಿಟ್ಟಾಗಿ ಲಾಕ್​ಡೌನ್​ ಆಗುವುದಿರಿಂದ ದಿನಸಿ, ಮೆಡಿಕಲ್ ಅಂಗಡಿಗಳನ್ನು ಹೊರತುಪಡಿಸಿ, ಎಲ್ಲ ಎಲ್ಲ ಶಟ್​ಡೌನ್​ ಆಗಲಿದೆ. ಮನೆಯಲ್ಲಿಯೇ ಸರಳವಾಗಿ ಯುಗಾದಿ ಹಬ್ಬವನ್ನು ಆಚರಿಸಿಕೊಳ್ಳಬೇಕಿದೆ.

ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು,  ಕೊರೋನಾ ವೈರಸ್​​ ವಿರುದ್ಧ ಹೋರಾಟಕ್ಕೆ ಸರ್ಕಾರದೊಂದಿಗೆ ಜನ ಕೈ ಜೋಡಿಸಬೇಕಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ಇಡೀ ದೇಶ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಜನತಾ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್​​ಡೌನ್ ಮಾಡಲಾಗುವುದು. ಹಾಗಾಗಿ ಕೇಂದ್ರದ ಆದೇಶವನ್ನು ಪಾಲಿಸಿ 21 ದಿನಗಳ ಕಾಲ ಮನೆಯಲ್ಲೇ ಇರಬೇಕಿದೆ. ನಾವು ಮುಂದಿನ 21 ದಿನ ದೇಶಕ್ಕಾಗಿ ಮನೆಯಲ್ಲೇ ಇರದೆ ಹೋದಲ್ಲಿ, ಭಾರತವೂ 21 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ ಎಂದು ಹೇಳಿದ್ದರು.

ಇದನ್ನು ಓದಿ: 21 ದಿನ ದೇಶಾದ್ಯಂತ ಕರ್ಫ್ಯೂ; ಪ್ರಧಾನಿ ಮೋದಿ ಘೋಷಣೆ

ಕೊರೋನಾ ಭೀತಿ, ಸರ್ಕಾರಗಳ ಎಚ್ಚರಿಕೆ ನಡುವೆ ಜನರು ಮನೆಯಲ್ಲಿಯೇ ಈ ಬಾರಿಯ ಯುಗಾದಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಹೊಸ ಯುಗ ಆರಂಭಕ್ಕೂ ಮುನ್ನ ಆರಂಭವಾದ ಮಹಾಮಾರಿ ಹಬ್ಬದ ನಂತರದ ದಿನದಲ್ಲಾದರೂ ಕಣ್ಮರೆಯಾಗಿ ಹೊರಟುಹೋಗಲಿ.


 
First published: March 25, 2020, 7:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading