HOME » NEWS » Coronavirus-latest-news » UDUPI NEWS KARKALA PRIEST PERFORMED FUNERAL IN ONLINE VIDEO CALL SCT

ಲಾಕ್​ಡೌನ್​ ಎಫೆಕ್ಟ್​; ಕಾರ್ಕಳದ ಪುರೋಹಿತರಿಂದ ಆನ್​ಲೈನ್​‌ನಲ್ಲೇ ಶ್ರಾದ್ದ

ಕಾರ್ಕಳದ  ಶಾಂತಾ ನಾಗೇಶ್ ಪೈ ಅವರು ನಿಧನರಾಗಿದ್ದು,  ಮೃತರ ಮಗ ಮುಂಬೈಯಲ್ಲಿದ್ದು, ಊರಿಗೆ ಆಗಮಿಸಲಾಗದ ಹಿನ್ನೆಲೆಯಲ್ಲಿ ಆನ್​​ಲೈನ್ ಲೈವ್ ವಿಡಿಯೋ ಮೂಲಕ ಮಗನಿಗೆ ತಾಯಿಯ ಶವಸಂಸ್ಕಾರದ ವಿಧಿಗಳನ್ನು ನೆರವೇರಿಸಲಾಗಿದೆ.

news18-kannada
Updated:May 24, 2020, 6:33 PM IST
ಲಾಕ್​ಡೌನ್​ ಎಫೆಕ್ಟ್​; ಕಾರ್ಕಳದ ಪುರೋಹಿತರಿಂದ ಆನ್​ಲೈನ್​‌ನಲ್ಲೇ ಶ್ರಾದ್ದ
ಪ್ರಾತಿನಿಧಿಕ ಚಿತ್ರ
  • Share this:
ಉಡುಪಿ (ಮೇ 24): ಲಾಕ್​ಡೌನ್‌  ಪರಿಣಾಮ ಈಗ ಶವಸಂಸ್ಕಾರ, ಶ್ರಾದ್ಧ ಕಾರ್ಯಗಳನ್ನು ಸಹ ಆನ್​ಲೈನ್​ ಮೂಲಕವೇ ನೆರವೇರಿಸಲಾಗುತ್ತಿದೆ. ‌ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ದೇವರ ಪೂಜಾ ಕಾರ್ಯಕ್ರಮಗಳನ್ನು ಆನ್​​ಲೈನ್ ಮೂಲಕ ನಡೆಸುವ ಬಗ್ಗೆ ಸರ್ಕಾರ‌ ವಿಷಯ ಪ್ರಸ್ತಾಪಿಸಿದ ಬೆನ್ನಲ್ಲೇ, ಪುರೋಹಿತರೊಬ್ಬರು ಆನ್​ಲೈನ್​​ನಲ್ಲೇ ತಿಥಿ ಕಾರ್ಯ ಮಾಡಿ ಮುಗಿಸಿದ ಘಟನೆಯೊಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

ಒಂದೆಡೆ ಲಾಕ್​​ಡೌನ್, ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಮತ್ತೊಂದೆಡೆ ಪುರೋಹಿತರು ಸಿಗುತ್ತಿಲ್ಲ. ಈ ನಡುವೆ ದೈವಾಧೀನರಾದವರಿಗೆ ಶ್ರಾದ್ಧ, ಪಿಂಡತರ್ಪಣ, ನೀಡುವುದಾರೆ ಹೇಗೆ? ಇಂತಹ ಧರ್ಮ ಸಂಕಟದಲ್ಲಿ ಸಿಲುಕಿದ ಕುಟುಂಬವೊಂದು ಪುರೋಹಿತರ‌ ಜೊತೆ ‌ನೇರ ಸಂಪರ್ಕದಲ್ಲಿ ಅವರ ಸಲಹೆಯಂತೆ ಆನ್​ಲೈನ್ ವಿಡಿಯೋ ಮೂಲಕ ತಿಥಿ ಕಾರ್ಯವನ್ನು ನೆರವೇರಿಸಿ ತೃಪ್ತಿ ಪಡೆದಿದ್ದಾರೆ.

ಇದನ್ನೂ ಓದಿ: Bangalore Accident: ಬೆಂಗಳೂರಿನ ನಡುರಸ್ತೆಯಲ್ಲಿ ಧಗ-ಧಗನೆ ಹೊತ್ತಿ ಉರಿದ ಕಾರು; ಐವರು ಪ್ರಯಾಣಿಕರು ಪಾರು

ಕಾರ್ಕಳ ತಾಲೂಕಿನ‌ ಕಸಬಾ ಗ್ರಾಮದ ಮಲ್ಲಿಗೆ‌ ಓಣಿಯ‌ ನಿವಾಸಿ ಪುರೋಹಿತ‌ ಸುರೇಂದ್ರ ಭಟ್ ಎಂಬುವವರು ಅರಬ್ ದೇಶದ ಮಸ್ಕತ್​​ನಲ್ಲಿರುವ ಸಚಿತ್ ಕಾಮತ್ ಅವರ ತಂದೆಯ ವಾರ್ಷಿಕ ಶ್ರಾದ್ಧವನ್ನು ‌ಆನ್​​ಲೈನ್ ಲೈವ್ ವಿಡಿಯೋ ಮೂಲಕ ನೆರವೇರಿಸಿದ್ದರು.‌ ಈಗ ಕಾರ್ಕಳದ  ಶಾಂತಾ ನಾಗೇಶ್ ಪೈ ಅವರು ನಿಧನರಾಗಿದ್ದು,  ಮೃತರ ಮಗ ಮುಂಬೈಯಲ್ಲಿದ್ದು, ಊರಿಗೆ ಆಗಮಿಸಲಾಗದ ಹಿನ್ನೆಲೆಯಲ್ಲಿ ಇದೇ ಆನ್​​ಲೈನ್ ಲೈವ್ ವಿಡಿಯೋ ಮೂಲಕ ಮಗನಿಗೆ ತಾಯಿಯ ಶವಸಂಸ್ಕಾರದ ವಿಧಿಗಳನ್ನು ನೆರವೇರಿಸಲಾಗಿದೆ. ಹಾಗೇ, ಒಂಭತ್ತನೇ ದಿನದ ಕ್ರಿಯೆಯನ್ನೂ ಆನ್​ಲೈನ್​​ನಲ್ಲಿ ಸುರೇಂದ್ರ ಭಟ್​ ನೆರವೇರಿಸಿಕೊಟ್ಟಿದ್ದಾರೆ. ಈ ಎರಡು ಕುಟುಂಬದ ಶ್ರಾದ್ದ ಕಾರ್ಯ ಆನ್ ಲೈನ್ ನಲ್ಲೇ ನಡೆದಿರುವುದು ವಿಶೇಷ.‌

Udupi News Karkala Priest performed Funeral in Online Video Call
ವಿಡಿಯೋ ಕಾಳ್​ ಮೂಲಕ ಅಂತ್ಯಸಂಸ್ಕಾರದ ವಿಧಿಗಳನ್ನು ನಡೆಸುತ್ತಿರುವ ಕಾರ್ಕಳದ ಪುರೋಹಿತರು


ಶ್ರಾದ್ದ ಕಾರ್ಯಕ್ಕೆ ಎಲ್ಲಾ ತಯಾರಿ ಬಳಿಕ ವಾಟ್ಸ್​ಅಪ್​​​ ವಿಡಿಯೋ ಕಾಲ್ ಮೂಲಕ ಎಲ್ಲಾ ಚಟುವಟಿಕೆಗಳನ್ನು ಮೃತರ ಮಕ್ಕಳಿಗೆ‌ ತೋರಿಸುವುದರ ಜೊತೆಗೆ ಪ್ರತಿಯೊಂದನ್ನು ಕ್ರಮಬದ್ಧವಾಗಿ ಧಾರ್ಮಿಕವಾಗಿ ವಿಡಿಯೋ‌ ಕರೆ ಮೂಲಕವೇ  ನಡೆಸಿಕೊಟ್ಟಿದ್ದಾರೆ ಪುರೋಹಿತರು.
Youtube Video
First published: May 24, 2020, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories