ಇಂದು ಬೆಂಗಳೂರಿನಲ್ಲಿ ಎರಡು ಠಾಣೆಗಳು ಸೀಲ್ ಡೌನ್; ಸುಮಾರು 50 ಮಂದಿ ಪೊಲೀಸರು ಕ್ವಾರೆಂಟೈನ್​​ನಲ್ಲಿ

ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗ ಎರಡೂ ಠಾಣೆಗಳನ್ನು ಸೀಲ್ ಡೌನ್ ಮಾಡಿದ್ದಾರೆ. ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಎರಡೂ ಠಾಣೆಗಳಲ್ಲೂ ಈಗಾಗಲೇ ಸ್ಯಾನಿಟೈಸ್ ಮಾಡುವ ಕೆಲಸ ಮಾಡುತ್ತಿದ್ದಾರೆ.

ಪೊಲೀಸರ ಪ್ರಾತಿನಿಧಿಕ ಚಿತ್ರ

ಪೊಲೀಸರ ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು(ಜೂ.18): ಬೆಂಗಳೂರಿನ ಪೊಲೀಸರಿಗೆ ಇಂದು ಸಹ ಟೆನ್ಶನ್  ಶುರುವಾಗಿದೆ. ಕೆ.‌ಆರ್. ಮಾರುಕಟ್ಟೆಯ ಸಂಚಾರಿ ಠಾಣೆಯ ಮತ್ತೊಬ್ಬ ಪೊಲೀಸ್ ಪೇದೆಗೆ ಕೊರೋನಾ ಸೋಂಕು ದೃಢವಾಗಿದೆ.

ಈ‌ ಮೊದಲೇ ಮಾರುಕಟ್ಟೆ ಸಂಚಾರಿ ಠಾಣೆಯಲ್ಲಿ ಓರ್ವ ಪೊಲೀಸ್ ಪೇದೆಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇಡೀ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಇನ್ನೂ ಕೆಲವರು ಪೊಲೀಸರನ್ನು ಕ್ವಾರೆಂಟೈನ್ ಸಹ ಮಾಡಲಾಗಿತ್ತು. ಆದರೆ ಈಗ ಮತ್ತೊಬ್ಬ ಪೊಲೀಸ್ ಪೇದೆಗೆ ಕೊರೋನಾ ಪಾಸಿಟಿವ್ ಆಗಿದ್ದು, ಇಡೀ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಸುಮಾರು 40 ಜನ ಪೊಲೀಸ್ ಪೇದೆಗಳನ್ನು ಕ್ವಾರೆಂಟೈನ್ ಮಾಡಲಾಗಿದೆ.

‘ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲೊರಟ ಬಿಜೆಪಿ ವಿರುದ್ಧ ಹೋರಾಟ ಅನಿವಾರ್ಯ‘ - ಸಿದ್ದರಾಮಯ್ಯ

ಇದು ಒಂದು ಕಡೆಯಾದರೆ ನಗರದಲ್ಲಿ ಮತ್ತೊಂದು ಪೊಲೀಸ್ ಸ್ಟೇಷನ್ ಸಹ ಸೀಲ್ ಡೌನ್ ಆಗಿದೆ. ತಮಿಳುನಾಡಿನಿಂದ ಮಾರತಹಳ್ಳಿ ಪೊಲೀಸರು ಆರೋಪಿಯೊಬ್ಬನನ್ನು ಹಿಡಿದು ಕರೆತಂದಿದ್ದರು.  ಕ್ರೈಂ ಪ್ರಕರಣ ಒಂದರಲ್ಲಿ ವಿಚಾರಣೆ ಸಹ ನಡೆಸಿದ್ದರು. ‌ವಿಚಾರಣೆ ಬಳಿಕ ಆರೋಪಿಗೆ ಕೋವಿಡ್ ಪರೀಕ್ಷೆ ಸಹ ಮಾಡಿದ್ದರು. ಇಂದು ಆರೋಪಿಯ ಪರೀಕ್ಷಾ ವರದಿ ಬಂದಿದ್ದು ಆತನಿಗೆ ಸೋಂಕು ದೃಢವಾಗಿದೆ. ಇನ್ನು ಆರೋಪಿಯ ಪ್ರಾಥಮಿಕ ಸಂಪರ್ಕದಲ್ಲಿ ಸುಮಾರು 10 ಪೊಲೀಸರು ಇದ್ದು, ಈಗ ಅವರನ್ನೆಲ್ಲಾ ಕ್ವಾರೆಂಟೈನ್ ಮಾಡಲಾಗಿದೆ. ಇದರ ಜೊತೆಗೆ ಇಡೀ ಪೊಲೀಸ್ ಠಾಣೆಯನ್ನೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

ದಿನೇ ದಿನೇ ನಗರದ ಪೊಲೀಸರಲ್ಲಿ ಸೊಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗ ಎರಡೂ ಠಾಣೆಗಳನ್ನು ಸೀಲ್ ಡೌನ್ ಮಾಡಿದ್ದಾರೆ. ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಎರಡೂ ಠಾಣೆಗಳಲ್ಲೂ ಈಗಾಗಲೇ ಸ್ಯಾನಿಟೈಸ್ ಮಾಡುವ ಕೆಲಸ ಮಾಡುತ್ತಿದ್ದಾರೆ.

ಇದುವರೆಗಿನ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಇರುವರೆಗೂ 22 ಪೊಲೀಸರಿಗೆ ಪಾಸಿಟಿವ್ ಬಂದಿದ್ದು, ಠಾಣೆಗೆ ಬರಲು ಪೊಲೀಸ್ ಸಿಬ್ಬಂದಿ ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.‌ ಇನ್ನು ಕೆಲವು ಪೊಲೀಸರು ರಜೆ‌ ಕೊಡುವಂತೆಯೂ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ಮನವಿ ಮಾಡುತ್ತಿದ್ದಾರೆ.
First published: