Omicron: ರಾಜ್ಯಕ್ಕೆ ಕಾಲಿಟ್ಟೇ ಬಿಡ್ತಾ ಕೋವಿಡ್ 4ನೇ ಅಲೆ? ಪತ್ತೆಯಾಯ್ತು ಒಮಿಕ್ರಾನ್ ಹೊಸ ಉಪ ತಳಿ!

ರಾಜ್ಯಕ್ಕೆ 4ನೇ ಅಲೆ (4th Wave) ಕಾಲಿಟ್ಟೇ ಬಿಡ್ತಾ ಎನ್ನುವ ಅನುಮಾನ ಕಾಡುತ್ತಿದೆ. ಇದರ ನಡುವೆಯೇ ಒಮಿಕ್ರಾನ್ ವೈರಸ್‌ನ (Omicron Virus) ಎರಡು ಉಪ ತಳಿಗಳು (Sub-breeds) ರಾಜ್ಯದಲ್ಲಿ ಪತ್ತೆಯಾಗಿವೆ ಅಂತ ಆರೋಗ್ಯ ಇಲಾಖೆ (Health Department) ಮಾಹಿತಿ ನೀಡಿದೆ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಓಮಿಕ್ರಾನ್ ಇಂಟರ್‌ನೆಟ್ ಚಿತ್ರ

ಓಮಿಕ್ರಾನ್ ಇಂಟರ್‌ನೆಟ್ ಚಿತ್ರ

  • Share this:
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ (Covid infected) ಸಂಖ್ಯೆ ದಿನದಿಂದ ದಿನಕ್ಕೆ ನಿಧಾನಕ್ಕೆ ಜಾಸ್ತಿಯಾಗುತ್ತಿದೆ. ಕೊರೋನ (Corona) ಸೋಂಕಿತರ ಸಂಖ್ಯೆ ಹೀಗೆ ಏರುತ್ತಿರುವುದನ್ನು ನೋಡಿದರೆ ರಾಜ್ಯಕ್ಕೆ 4ನೇ ಅಲೆ (4th Wave) ಕಾಲಿಟ್ಟೇ ಬಿಡ್ತಾ ಎನ್ನುವ ಅನುಮಾನ ಕಾಡುತ್ತಿದೆ. ಇದರ ನಡುವೆಯೇ ಒಮಿಕ್ರಾನ್ ವೈರಸ್‌ನ (Omicron Virus) ಎರಡು ಉಪ ತಳಿಗಳು (Sub-breeds) ರಾಜ್ಯದಲ್ಲಿ ಪತ್ತೆಯಾಗಿವೆ ಅಂತ ಆರೋಗ್ಯ ಇಲಾಖೆ (Health Department) ಮಾಹಿತಿ ನೀಡಿದೆ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕೆ (Study) ವೈರಾಲಜಿಸ್ಟ್‌ಗಳು (Virologists) ಮುಂದಾಗಿದ್ದು, ಲಕ್ಷಣಗಳೇನು (Symptoms), ಎಷ್ಟು ಅಪಾಯಕಾರಿ (Danger) ಎಂಬುದು ತಿಳಿಯಲಿದೆ.

ಪತ್ತೆಯಾಯ್ತು 2 ಒಮಿಕ್ರಾನ್ ಉಪ ತಳಿಗಳು

ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ನಿಧಾನವಾಗಿ ಏರಿಕೆ ಆಗ್ತಿದೆ. ಈ ಮಧ್ಯೆ BA.4 ಹಾಗೂ BA.5 ಎಂಬ ಒಮಿಕ್ರಾನ್​​ನ ಎರಡು ಉಪತಳಿಗಳು ಪತ್ತೆಯಾಗಿವೆ. ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಒಮಿಕ್ರಾನ್‌ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದೆ. ಈ ಉಪತಳಿ BA.2ನ ಸೀಕ್ವೆನ್ಸ್‌ಗಿಂತ ವಿಭಿನ್ನ ಎಂದು ಹೇಳಲಾಗುತ್ತಿದೆ. ಒಮಿಕ್ರಾನ್ ಸೋಂಕಿತರಿಗೂ ಮತ್ತೆ ಸೋಂಕು ತಗುಲುವ ಸಾಧ್ಯತೆ ಇದೆಯಂತೆ.

4ನೇ ಅಲೆಯ ಅಪಾಯ ತಂದೊಡ್ಡುತ್ತಾ ಈ ವೈರಸ್?

ಈ ಹಿಂದೆ ಡೆಲ್ಟಾ & ಸಬ್ ಲೈನ್ಸ್- 9.8%, ಈಟಾ, ಕಪ್ಪಾ, ಪಂಗೋ- 2.4%, ಒಮಿಕ್ರಾನ್- 87.8%, BA1.1.529- 17.6%, BA1 - 1.8%, BA2- 80.6% ರಷ್ಟು ಅಪಾಯ ತಂದಿತ್ತು. ಇದೀಗ ಒಮಿಕ್ರಾನ್‌ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ನಾಲ್ಕನೇ ಅಲೆಯಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಾ ಹೊಸ ಉಪತಳಿಗಳು  ಎಂಬ ಆತಂಕ ಮೂಡಿದೆ.

ಇದನ್ನೂ ಓದಿ: Explained: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚುತ್ತಿರೋದೇಕೇ? 4ನೇ ಅಲೆ ಬಗ್ಗೆ ಆತಂಕಪಡಬೇಕೆ?

ಅತೀ ಬೇಗ ಹರಡುವ ತಳಿ

ಫೆಬ್ರವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಓಮಿಕ್ರಾನ್‌ನ BA.2 ಉಪ-ರೂಪಾಂತರವು BA.1 ಸ್ಟ್ರೈನ್‌ಗಿಂತ ಹೆಚ್ಚು ಹರಡುತ್ತದೆ ಅಂತ ಎಚ್ಚರಿಸಿದೆ. ಮೂರನೇ ಅಲೆ ಉಂಟುಮಾಡಿದ್ದ ಒಮಿಕ್ರೋನ್‌ ರೂಪಾಂತರಿಯೂ ರಾಜ್ಯವನ್ನು ಕೇವಲ ಒಂದೂವರೆ ತಿಂಗಳು ಕಾಡಿತ್ತು. ಸದ್ಯ ಕಾಣಿಸಿಕೊಂಡಿರುವುದು ಒಮಿಕ್ರೋನ್‌ನ ಉಪತಳಿಗಳೇ ಆಗಿರುವುದರಿಂದ ನಾಲ್ಕನೇ ಅಲೆಯೂ ಕೂಡಾ ಒಂದರಿಂದ ಒಂದೂವರೆ ತಿಂಗಳು ಇರಬಹುದು. ಇನ್ನು ತೀವ್ರತೆಯು ಒಮಿಕ್ರೋನ್‌ನಷ್ಟೇ ಇರಲಿದೆ. ಇದರರ್ಥ ತೀವ್ರತೆ ಕಮ್ಮಿ ಇರಲಿದೆ ಅಂತ ತಜ್ಞರು ಹೇಳಿದ್ದಾರೆ.

ಸದ್ಯದಲ್ಲೇ ಕಾಲಿಡಲಿದೆಯಾ 4ನೇ ಅಲೆ?

ಹೊಸ ಪ್ರಕರಣಗಳಿಂದಾಗಿ ಸದ್ಯದಲ್ಲೇ ರಾಜ್ಯದಲ್ಲಿ ನಾಲ್ಕನೇ ಅಲೆಯ ಎದುರಾಗುವ ಭೀತಿ ಉಂಟಾಗಿದೆ ಅಂತ . ‘ಮುಂದಿನ 4-5 ವಾರದಲ್ಲೇ ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ ಅಂತ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ. ಇದು ವೇಗವಾಗಿ ಹರಡಿದರೂ ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಮೂರನೇ ಅಲೆ ಮಾದರಿಯಲ್ಲೇ ಒಂದೂವರೆ ತಿಂಗಳಲ್ಲಿ ಕಡಿಮೆಯಾಗಲಿದೆ’ ಅಂತ ಅವರು ಹೇಳಿದ್ದಾರೆ.

ಕೊರೋನಾ ಸೋಂಕಿತರ ಅಂಕಿ ಅಂಶ

ಜಗತ್ತಿನಲ್ಲಿ ಈವರೆಗೂ 514,760,016 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,266,165 ಮಂದಿ ಪ್ರಾಣ ಬಿಟ್ಟಿದ್ದಾರೆ. 469,488,566 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 39,005,285 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: Explained: ಪ್ರತಿ ಬಾರಿಯೂ ಕೋವಿಡ್‌ಗೆ ಬೆಂಗಳೂರೇ ಟಾರ್ಗೆಟ್ ಆಗುವುದೇಕೆ? ಈ ಬಾರಿಯೂ ಇದೆಯಾ 'ಹೆಣ'ಗಾಟ?


ಕಳೆದ 24 ಗಂಟೆಗಳಲ್ಲಿ 3545 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ. ದೇಶದಲ್ಲಿ ಸದ್ಯ ಸಕ್ರಿಯ ಪ್ರಕಣಗಳ ಸಂಖ್ಯೆ 19,688 ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೋವಡ್‌ನಿಂದಾಗಿ ದೇಶದಲ್ಲಿ 27 ಮಂದಿ ಮೃತಪಟ್ಟಿದ್ದಾರೆ.
Published by:Annappa Achari
First published: