ನೇಪಾಳದಿಂದ ಭಾರತಕ್ಕೆ ಬರುವಾಗ ಸೈಕಲ್​ನಿಂದ ಬಿದ್ದು ಇಬ್ಬರು ಭಾರತೀಯರ ಸಾವು

ಭಾರತದಂತೆ ನೇಪಾಳದಲ್ಲೂ 3 ವಾರಗಳ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಅಲ್ಲಿಯೂ ವಲಸಿಗ ಕಾರ್ಮಿಕರ ಜೇಬು ಖಾಲಿಯಾಗಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ

news18-kannada
Updated:April 21, 2020, 6:37 PM IST
ನೇಪಾಳದಿಂದ ಭಾರತಕ್ಕೆ ಬರುವಾಗ ಸೈಕಲ್​ನಿಂದ ಬಿದ್ದು ಇಬ್ಬರು ಭಾರತೀಯರ ಸಾವು
ಸಾಂದರ್ಭಿಕ ಚಿತ್ರ
  • Share this:
ನೇಪಾಳದಿಂದ ಭಾರತಕ್ಕೆ ವಾಪಸ್ ಬರುತ್ತಿದ್ದ ಇಬ್ಬರು ಭಾರತೀಯರು ಸೈಕಲ್​ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಲಾಕ್ ಡೌನ್ ಇದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ವ್ಯಕ್ತಿಗಳು ಸೈಕಲ್​ನಲ್ಲೇ ತಮ್ಮ ತವರಿಗೆ ಬರುತ್ತಿದ್ದರು. ಈ ವೇಳೆ, ದೊಡ್ಡ ತಿರುವು ಸಿಕ್ಕಿ ಆಯತಪ್ಪಿ ಇವರು ಕಂದಕ್ಕೆ ಉರುಳಿ ಬಿದ್ದು ಸಾವನ್ನಪ್ಪಿದ್ಧಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಮೃತಪಟ್ಟವರನ್ನು ಬಿಹಾರದ ಮುಖೇಶ್ ಗುಪ್ತಾ ಮತ್ತು ಸಂತೋಷ್ ಮಹತೋ ಎಂದು ಗುರುತಿಸಲಾಗಿದೆ. ಇವರು ನೇಪಾಳದ ಲಲಿತಪುರ್​ನ ಗುಜರಿ ಅಂಗಡಿವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಲಲಿತ್​ಪುರ್​ನಿಂದ 30 ಕಿಮೀ ದೂರದಲ್ಲಿರುವ ಜಾರಕಿದಾದ ಎಂಬಲ್ಲಿ ಕಡಿದಾದ ಬೆಟ್ಟದ ರಸ್ತೆಯಲ್ಲಿ ತಿರುವು ಸಿಕ್ಕು ಸೈಕಲ್​ ಸಮೇತ ಇವರಿಬ್ಬರು 150 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟರೆಂದು ನೇಪಾಳದ ಕಾಂತಿಪುರ್ ಡೈಲಿ ದಿನಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ : ಕೊರೋನಾ ಹೋರಾಟದಲ್ಲಿ ಪ್ರಾಣ ಕಳೆದುಕೊಳ್ಳುವ ಆರೋಗ್ಯ ಸಿಬ್ಬಂದಿಗೆ 50 ಲಕ್ಷ ಪರಿಹಾರ‌ ಘೋಷಿಸಿದ ಓಡಿಶಾ ಸಿಎಂ

ಭಾರತದಂತೆ ನೇಪಾಳದಲ್ಲೂ 3 ವಾರಗಳ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಅಲ್ಲಿಯೂ ವಲಸಿಗ ಕಾರ್ಮಿಕರ ಜೇಬು ಖಾಲಿಯಾಗಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಭಾರತೀಯ ಕಾರ್ಮಿಕರು ಸೈಕಲ್​ಗಳಲ್ಲೇ ತಮ್ಮ ಊರಿಗೆ ವಾಪಸ್ ಹೋಗಲು ನಿರ್ಧರಿಸಿದ್ದರು. ಮಾರ್ಗಮಧ್ಯೆ ಇಬ್ಬರು ದುರದೃಷ್ಟಕ್ಕೆ ಸಾವನ್ನಪ್ಪಿದರು. ಇನ್ನಿಬ್ಬರು ಸುರಕ್ಷಿತವಾಗಿ ಮರಳಿದ್ಧಾರೆನ್ನಲಾಗಿದೆ.
First published: April 21, 2020, 6:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading