ಜಮೀನಿಗಾಗಿ ದಾಯಾದಿಗಳ ಕಲಹ: ಎರಡು ಕುಟುಂಬಗಳ ನಡುವಿನ ಗಲಾಟೆ ವಿಡಿಯೋ ಭಾರೀ ವೈರಲ್​​

2002ರಲ್ಲಿ ಮಕ್ಕಳಿಲ್ಲದ ನಾರಾಯಣಮ್ಮ ಮೃತಪಟ್ಟ ನಂತರ ಸದರಿ ಜಮೀನನ್ನ ಮುನಿರಾಜು ಕುಟುಂಬ ನೋಡಿಕೊಳ್ಳುತ್ತಿತ್ತು. ಈ ಸಮಯದಲ್ಲಿ ಮುನಿರಾಜು ದೊಡ್ಡಪ್ಪನ ಮಗ ಕೃಷ್ಣಪ್ಪ ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ರು. ವಿಚಾರಣೆ ನಡೆಸಿದ ನ್ಯಾಯಾಲಯ ಮುನಿರಾಜು ಪರವಾಗಿ ತೀರ್ಪು ನೀಡಿತ್ತು. ಕೋರ್ಟ್ ಆದೇಶದಂತೆ ಜಮೀನು ಸ್ವಾಧೀನಕ್ಕೆ ತೆಗೆದುಕೊಂಡು ಮುನಿರಾಜು ಕುಟುಂಬ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿತ್ತು.

ಜಮೀನಿಗಾಗಿ ದಾಯಾದಿಗಳ ಕಲಹ

ಜಮೀನಿಗಾಗಿ ದಾಯಾದಿಗಳ ಕಲಹ

  • Share this:
ದೊಡ್ಡಬಳ್ಳಾಪುರ(ಜು.05): ನ್ಯಾಯಾಲಯದಿಂದ ಬಂದ ಆದೇಶದಂತೆ ಜಮೀನು ಸ್ವಾಧೀನಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ದಾಯಾದಿ ಕುಟುಂಬ ಕಲ್ಲು, ಇಟ್ಟಿಗೆ ಮತ್ತು ಕಟ್ಟಿಗೆಯಿಂದ ದಾಳಿ ಮಾಡಿದೆ. ದಾಯಾದಿ ಕುಟುಂಬ ದರ್ಪಕ್ಕೆ  ಹೆದರಿ ಹೋಗಿರುವ ಕುಟುಂಬ, ರಕ್ಷಣೆಗಾಗಿ ಪೊಲೀಸರ ಬಳಿ ಮನವಿ ಮಾಡಿದೆ.

ಸದ್ಯ, ಇಬ್ಬರ ಪರಸ್ಪರ ಹೊಡೆದಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಂದೇ ಕುಟುಂಬದ ದಾಯಾದಿಗಳ ಮಾನ ಹರಾಜು ಆಗ್ತಿದೆ. ದಾಯಾದಿ ಕುಟುಂಬ ಮತ್ತೊಂದು ಕುಟುಂಬದ ಮೇಲೆ ದಾಳಿ  ಮಾಡಿದೆ. ಹೊಲದಲ್ಲಿ ಬಿದ್ದಿದ್ದ  ಮಣ್ಣಿನ ಎಂಟೆ  ಕಟ್ಟಿಗೆಗಳಿಂದ, ಕಲ್ಲುಗಳಿಂದ  ಮನಸ್ಸೋ ಇಚ್ಚೆ ಹಲ್ಲೆ ಮಾಡಿದೆ. ಹಲ್ಲೆಯಲ್ಲಿ ಹೆಂಗಸರು ಸಹ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಹಲ್ಲೆ ನಡೆಸಿದೆ. ಏಕಾಏಕಿ ನಡೆದ ಹಲ್ಲೆಯಲ್ಲಿ ಮುನಿರಾಜು ಕುಟುಂಬದ ಸದಸ್ಯರು ಗಾಯಗೊಂಡು  ನರಳುತ್ತಿದ್ದಾರೆ.

ಕೊನಘಟ್ಟದ ಸರ್ವೆ ನಂಬರ್ 87ಪಿ 9ರ 1 ಎಕರೆ 15 ಗುಂಟೆ ಜಮೀನು ಮುನಿರಾಜು ತಾತ ಎಲ್ಲಪ್ಪನವರಿಗೆ ಸೇರಿದ್ದು, ಸರ್ಕಾರ ಈ ಜಮೀನನ್ನು ಎಲ್ಲಪ್ಪನವರಿಗೆ ಮಂಜೂರು  ಮಾಡಿತ್ತು. ಎಲ್ಲಪ್ಪನವರಿಗೆ ಮಕ್ಕಳಿಲ್ಲದಿದ್ದಾಗ ಮುನಿರಾಜು ತಾಯಿ ವೀರಮ್ಮನವರನ್ನು ಸಾಕಿಕೊಂಡಿದ್ರು. ನಂತರ ಎಲ್ಲಪ್ಪರವರಿಗೆ ನಾರಾಯಣಮ್ಮ ಎಂಬ ಹೆಣ್ಣು ಮಗುವಾಗುತ್ತೆ. 1985 ರಲ್ಲಿ ಎಲ್ಲಪ್ಪ ತನ್ನ ಇಬ್ಬರು ಮಕ್ಕಳಿಗೆ ಸಮವಾಗಿ ಜಮೀನು ಬರೆದು ಕೊಟ್ಟಿದ್ರು.

2002ರಲ್ಲಿ ಮಕ್ಕಳಿಲ್ಲದ ನಾರಾಯಣಮ್ಮ ಮೃತಪಟ್ಟ ನಂತರ ಸದರಿ ಜಮೀನನ್ನ ಮುನಿರಾಜು ಕುಟುಂಬ ನೋಡಿಕೊಳ್ಳುತ್ತಿತ್ತು. ಈ ಸಮಯದಲ್ಲಿ ಮುನಿರಾಜು ದೊಡ್ಡಪ್ಪನ ಮಗ ಕೃಷ್ಣಪ್ಪ ಸುಳ್ಳು  ದಾಖಲೆ ಸೃಷ್ಟಿಸಿ ನ್ಯಾಯಾಲಯದಲ್ಲಿ ದಾವೆ  ಹೂಡಿದ್ರು. ವಿಚಾರಣೆ  ನಡೆಸಿದ ನ್ಯಾಯಾಲಯ ಮುನಿರಾಜು ಪರವಾಗಿ ತೀರ್ಪು ನೀಡಿತ್ತು. ಕೋರ್ಟ್  ಆದೇಶದಂತೆ ಜಮೀನು ಸ್ವಾಧೀನಕ್ಕೆ ತೆಗೆದುಕೊಂಡು ಮುನಿರಾಜು ಕುಟುಂಬ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿತ್ತು.

ಕೆಲಸ ಸಮಯದಲ್ಲಿ ಕೃಷ್ಷಪ್ಪನ ಕುಟುಂಬ ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದೆ, ಮಣ್ಣಿನ ಎಂಟೆ ಮತ್ತು ಕಟ್ಟಿಗೆಯಿಂದ ಮುನಿರಾಜು  ಮತ್ತು ಆತನ ತಮ್ಮ ಪ್ರಕಾಶ್ ಮೇಲೆ ಹಲ್ಲೆ ಮಾಡಿದೆ.

ದೊಡ್ಡಪ್ಪ ಮಗ ಕೃಷ್ಣಪ್ಪ ದರ್ಪಕ್ಕೆ ಹೆದರಿ ಹೋಗಿರುವ ಕುಟುಂಬ ಈಗ ರಕ್ಷಣೆಗಾಗಿ ಮನವಿ ಮಾಡಿದೆ. ಪ್ರಕಾಶ್​ ನಡೆದಾಟದ ರೀತಿಯಲ್ಲಿ ಹಲ್ಲೆ ಮಾಡಿರುವ ಕೃಷ್ಣಪ್ಪ ಕೊಲೆ ಬೆದರಿಕೆ ಹಾಕುತ್ತಿದ್ದಾನೆಂದು ಗಾಯಗೊಂಡು ನೊಂದಿರುವ ಕುಟುಂಬ ಕಣ್ಣೀರಿಡುತ್ತಿದೆ.

ಇದನ್ನೂ ಓದಿ: Coronavirus Updates: ಭಾರತದಲ್ಲಿ ಕೋವಿಡ್​-19 ಕಾವು: ಒಂದೇ ದಿನದಲ್ಲಿ 24 ಸಾವಿರ ಕೇಸ್​​ ಪತ್ತೆ, 6,73,165 ಸೋಂಕಿತರು

ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು ಕೃಷ್ಣಪ್ಪ ಸೇರಿದಂತೆ ಕುಟುಂಬದ 7 ಜನರ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸ್ ಸ್ಟೇಷನಲ್ಲಿ ಪ್ರಕರಣ ದಾಖಲಾದರೂ ಕೃಷ್ಣಪ್ಪ ತನ್ನ ರಾಜಕೀಯ ಪ್ರಭಾವ  ಬಳಸಿ ಮುನಿರಾಜು ಕುಟುಂಬದ ಮೇಲೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾನೆಂದು ಮುನಿರಾಜು ಕುಟುಂಬ ಆರೋಪ  ಮಾಡುತ್ತಿದೆ.

ಇಬ್ಬರ ಜಗಳದ ವಿಡಿಯೋ ನೋಡ್ತಾ, ಬೇರೆಯವರಿಗೂ ಕಳಿಸ್ತಾ ಸಖತ್ ಮಜಾ ತಗೊಳ್ತಾ ಇದ್ರೆ, ಕುಟುಂಬದ ಮಾನ ತಾವೆ ಹರಾಜು ಹಾಕಿಳ್ತಿರೋ ಕುಟುಂಬ ಸಹ ಮುಜುಗರ ಅನುಭವಿಸುತ್ತಿದ್ದಾರೆ.
Published by:Ganesh Nachikethu
First published: