HOME » NEWS » Coronavirus-latest-news » TWO COVID 19 VACCINES FOR YOUNG CHILDREN SHOW PROMISE IN EARLY TRIALS STUDY STG MAK

Covid Vaccine: ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಪ್ರಯೋಗ ಬಹುತೇಕ ಯಶಸ್ವಿ, ಅಂತಿಮ ಘಟ್ಟವಷ್ಟೇ ಬಾಕಿ !

ಬಹಳಷ್ಟು ಮಕ್ಕಳು ಈ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಾವನ್ನಪ್ಪಿದ್ದಾರೆ ಕೂಡ. ಅದನ್ನು ಹರಡದಂತೆ ತಡೆಯಲು ವಹಿಸಿದ ಕ್ರಮಗಳಿಂದ ಇನ್ನೂ ಅನೇಕ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹಾಗಾಗಿ ಚಿಕ್ಕ ಮಕ್ಕಳನ್ನು ಕೋವಿಡ್ -19 ನಿಂದ ರಕ್ಷಿಸಲೇಬೇಕು ಎನ್ನುತ್ತಾರೆ ಪೆರ್ಮರ್.

Trending Desk
Updated:June 18, 2021, 6:41 AM IST
Covid Vaccine: ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಪ್ರಯೋಗ ಬಹುತೇಕ ಯಶಸ್ವಿ, ಅಂತಿಮ ಘಟ್ಟವಷ್ಟೇ ಬಾಕಿ !
ಕೊರೋನಾ ಲಸಿಕೆ
  • Share this:

Covid Vaccine: ಕೋವಿಡ್-19 ಹರಡುವಿಕೆಯನ್ನು ಕಡಿಮೆ ಮಾಡಲು, ಚಿಕ್ಕ ಮಕ್ಕಳಿಗೆ ಲಸಿಕೆ ನೀಡುವುದು ಅಗತ್ಯ ಎಂದು ಸೈನ್ಸ್ ಇಮ್ಯುನಾಲಜಿಯಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ. ಮಾಡೆರ್ನಾ ಕೋವಿಡ್ -19 ಲಸಿಕೆ ಮತ್ತು ಪ್ರಾಯೋಗಿಕ ಪ್ರೋಟೀನ್ ಆಧಾರಿತ ಪ್ರಿವೆಂಟಿವ್ ಸುರಕ್ಷಿತ ಎಂದು ಸಾಬೀತಾಗಿದ್ದು, ಪುಟ್ಟ ಕೋತಿಗಳ ಮೇಲಿನ ಪ್ರಯೋಗದಲ್ಲಿ SARS-CoV-2 ವಿರುದ್ಧ ಉತ್ತಮ ಆ್ಯಂಟಿಬಾಡಿ ಪ್ರತಿಕ್ರಿಯೆಯನ್ನು ತೋರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮಂಗಳವಾರ , ಜರ್ನಲ್ ಸೈನ್ಸ್ ಇಮ್ಯುನಾಲಜಿಯಲ್ಲಿ ಪ್ರಕಟವಾದ ಅಧ್ಯಯನ ವರದಿ, ಈ ಸಾಂಕ್ರಾಮಿಕ ರೋಗವನ್ನು ಕಡಿಮೆ ಮಾಡಲು, ಲಸಿಕೆಗಳು ಚಿಕ್ಕ ಮಕ್ಕಳ ಪಾಲಿಗೆ ಸುರಕಿತ ಸಾಧನಗಳು ಎಂದು ಹೇಳಿದೆ.


“ಚಿಕ್ಕ ಮಕ್ಕಳಿಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಹಾಕುವುದರಿಂದ, ಕೋವಿಡ್-19 ಹರಡುವುದು ಕಡಿಮೆ ಆಗುತ್ತದೆ. ಏಕೆಂದರೆ, ಮಕ್ಕಳು SARS-CoV-2 ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಾದರೆ ಅಥವಾ ರೋಗ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ, ಇತರರಿಗೆ ವೈರಸ್ ಹರಡುತ್ತಾರೆ ಎಂಬುದು ನಮಗೆಲ್ಲಾ ತಿಳಿದಿದೆ” ಎನ್ನುತ್ತಾರೆ ಅಮೆರಿಕದ ಪ್ರೆಸ್ಬಿಟೇರಿಯನ್ ಕೊಮಾಸ್ಕಿ ಮಕ್ಕಳ ಆಸ್ಪತ್ರೆಯ ವೈದ್ಯೆ ಸ್ಯಾಲೀ ಪೆರ್ಮರ್.“ಬಹಳಷ್ಟು ಮಕ್ಕಳು ಈ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಾವನ್ನಪ್ಪಿದ್ದಾರೆ ಕೂಡ. ಅದನ್ನು ಹರಡದಂತೆ ತಡೆಯಲು ವಹಿಸಿದ ಕ್ರಮಗಳಿಂದ ಇನ್ನೂ ಅನೇಕ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹಾಗಾಗಿ ಚಿಕ್ಕ ಮಕ್ಕಳನ್ನು ಕೋವಿಡ್ -19 ನಿಂದ ರಕ್ಷಿಸಲೇಬೇಕು” ಎನ್ನುತ್ತಾರೆ ಪೆರ್ಮರ್.


16 ಮರಿ ಕೋತಿಗಳಲ್ಲಿ, ಲಸಿಕೆಗಳ ಕಾರಣದಿಂದ ಹೊರಹೊಮ್ಮಿದ ತಟಸ್ಥ ಆ್ಯಂಟಿಬಾಡಿಗಳು ಪ್ರತಿಕ್ರಿಯೆಗಳು 22 ವಾರಗಳವರೆಗೆ ಇದ್ದವು. ಲಸಿಕೆಗಳ ದೀರ್ಘಕಾಲೀನ ರಕ್ಷಣೆಯನ್ನು ಅರ್ಥ ಮಾಡಿಕೊಳ್ಳಲು ಸಂಶೋಧಕರು, ಈ ವರ್ಷ ಸವಾಲಿನ ಅಧ್ಯಯನಗಳನ್ನು ನಡೆಸುತ್ತಿದ್ದಾರೆ.


“ನಾವು ಗಮನಿಸಿದ ಪ್ರಬಲ ಆ್ಯಂಟಿಬಾಡಿಗಳ ಮಟ್ಟವನ್ನು , ವಯಸ್ಕ ಮಕಾಕ್ ಕೋತಿಗಳಲ್ಲಿ ಕಂಡ ಪ್ರಬಲ ಆ್ಯಂಟಿಬಾಡಿಗಳ ಮಟ್ಟಕ್ಕೆ ಹೋಲಿಸಬಹುದು. ವಯಸ್ಕ ಕೋತಿಗಳಿಗೆ ನೀಡಿದ್ದು 100 ಮೈಕ್ರೋ ಗ್ರಾಂ ಡೋಸ್, ಆದರೆ ಮರಿಗಳಿಗೆ ನೀಡಿದ್ದು 30 ಮೈಕ್ರೋಗ್ರಾಂ ಮಾತ್ರ” ಎಂದು ಅಮೆರಿಕದ ನಾರ್ತ್ ಕರೋಲಿನಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕ್ರಿಸ್ಟೀನಾ ಡೆ ಪ್ಯಾರಿಸ್ ಹೇಳಿದ್ದಾರೆ.


ಇದನ್ನೂಓದಿ: Mamata Banerjee| ಟ್ವಿಟರ್​ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರದ ನಡೆ; ಪ್ರಧಾನಿ ಮೋದಿ ವಿರುದ್ಧ ಮಮತಾ ಟೀಕಾಸ್ರ್ತ

“ಮಾಡೆರ್ನಾ ಲಸಿಕೆಯಲ್ಲಿ, ನಿರ್ದಿಷ್ಟ ಪ್ರಬಲ ಟಿ ಕೋಶ ಪ್ರತಿಕ್ರಿಯೆಗಳನ್ನು ನಾವು ಗಮನಿಸಿದ್ದೇವೆ, ಹಾಗೂ ಅದು ರೋಗದ ತೀವ್ರತೆಯನ್ನು ಸೀಮಿತಗೊಳಿಸುತ್ತದೆ ಎಂಬುವುದನ್ನು ನಾವು ಬಲ್ಲೆವು’ ಎಂದು ಡಿ ಪ್ಯಾರಿಸ್ ಹೇಳಿದ್ದಾರೆ.ಎಮ್‍ಆರ್ಎನ್‌ಎ ಲಸಿಕೆ, ವೈರಸ್‍ನ ಮೇಲ್ಮೈ ಪ್ರೊಟೀನ್ ಸ್ಪೈಕ್ ಪ್ರೋಟೀನನ್ನು ಉತ್ಪಾದಿಸಲು ದೇಹಕ್ಕೆ ಸೂಚನೆ ನೀಡುತ್ತದೆ. ಸ್ಪೈಕ್ ಪ್ರೋಟೀನನ್ನು ವೈರಸ್ ಸೋಂಕು ತಗುಲಿಸಲು ಮತ್ತು ಜೀವ ಕೋಶಗಳ ಒಳಗೆ ಪ್ರವೇಶಿಸಲು ಬಳಸುತ್ತದೆ. ಮಾನವ ಜೀವಕೋಶಗಳು ಆ ಪ್ರೋಟೀನನ್ನು ಗುರುತಿಸುತ್ತವೆ ಮತ್ತು ಪ್ರತಿಕಾಯಗಳನ್ನು ಅಂದರೆ ಆ್ಯಂಟಿಬಾಡಿಗಳನ್ನು ಹಾಗೂ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಅಭಿವೃದ್ಧಿಪಡಿಸುತ್ತವೆ.


ಇದನ್ನೂ ಓದಿ: ಪ್ರಧಾನಿ ಮೋದಿ ತನ್ನ ತಪ್ಪುಗಳನ್ನು ಒಪ್ಪಿ, ದೇಶವನ್ನು ಪುನರ್​ ನಿರ್ಮಿಸಲು ತಜ್ಞರಿಗೆ ಸಹಕರಿಸಬೇಕು; ರಾಹುಲ್ ಗಾಂಧಿ

ಅಮೆರಿಕದ ನ್ಯಾಶನಲ್ ಇನ್‍ಸ್ಟಿಟ್ಯೂಶನ್ ಆಫ್ ಅಲರ್ಜಿ ಅಂಡ್ ಇನ್‍ಫೆಕ್ಷನ್ ಡಿಸೀಸಸ್ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಕೂಡ ಒಂದು ಸ್ಪೈಕ್ ಪ್ರೊಟೀನ್ ಆಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯು ಅದೇ ರೀತಿ ಗುರುತಿಸುತ್ತದೆ. ಎರಡೂ ಲಸಿಕೆಗಳು SARS-CoV-2 ಮತ್ತು ಸ್ಪೈಕ್ ಪ್ರೊಟೀನ್ ವಿರುದ್ಧ ಪ್ರತಿಕಾಯಗಳನ್ನು ಹೊರಹೊಮ್ಮಿಸಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: June 18, 2021, 6:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories