ಬೆಂಗಳೂರಿನ ಶಿವಾಜಿನಗರ ಮತ್ತು ಬಸವನಗುಡಿಯಲ್ಲಿ ಕೊರೋನಾ ಪರೀಕ್ಷೆ​​ ಸೌಲಭ್ಯ

ಮೊದಲ ಹಂತದ ಪರೀಕ್ಷೆ- 3000 ರೂ,  ಮರುದೃಢೀಕರಣ ಪರೀಕ್ಷೆ- 1500 ರೂ ನಿಗದಿ ಮಾಡಲಾಗಿದೆ. ಈ ದರವನ್ನು ಐಸಿಎಂಆರ್ ನಿಗದಿ ಮಾಡಿದ್ದು ಒಟ್ಟಾರೆ ಪರೀಕ್ಷಾ ವೆಚ್ಚ 4500 ಮೀರುವಂತಿಲ್ಲ.

news18-kannada
Updated:April 1, 2020, 2:47 PM IST
ಬೆಂಗಳೂರಿನ ಶಿವಾಜಿನಗರ ಮತ್ತು ಬಸವನಗುಡಿಯಲ್ಲಿ ಕೊರೋನಾ ಪರೀಕ್ಷೆ​​ ಸೌಲಭ್ಯ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಏ.01): ದಿನೇ ದಿನೇ ಕೊರೋನಾ ಭೀತಿ ಹೆಚ್ಚಾಗುತ್ತಿದ್ದು, ಸಾಯುವವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೋನಾ  ಪರೀಕ್ಷಾ ಸೌಕರ್ಯವನ್ನು ಒದಗಿಸಲಾಗಿದೆ. ನಗರದ ಎರಡು ಖಾಸಗಿ ಲ್ಯಾಬ್​ಗಳಲ್ಲಿ ಇನ್ಮುಂದೆ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ.

ಶಿವಾಜಿನಗರದ ನ್ಯೂಬರ್ಗ್ ಆನಂದ್ ಲ್ಯಾಬ್ ಮತ್ತು ಬಸವನಗುಡಿಯ ಕ್ಯಾನ್ಸೈಟ್ ಟೆಕ್ನಾಲಜೀಸ್​ಗಳಲ್ಲಿ ಕೊರೋನಾ ಪರೀಕ್ಷೆಗಾಗಿ ಸಿದ್ದವಿರುವ ಲ್ಯಾಬ್​ಗಳು. ಈ 2 ಲ್ಯಾಬ್​ಗಳಿಗೆ ಐಸಿಎಂಆರ್ ಪರವಾನಗಿ ನೀಡಿದೆ. ಈ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವವರು ಅದಕ್ಕೆ ಹಣ ತೆರಬೇಕಿದೆ.

Coronavirus: ಕೊರೋನಾ ದಾಳಿಗೆ ತುತ್ತಾಗಿರುವ ಟಾಪ್​ 10 ದೇಶಗಳು ಯಾವುವು? ಭಾರತಕ್ಕೆ ಎಷ್ಟನೇ ಸ್ಥಾನ?; ಇಲ್ಲಿದೆ ಮಾಹಿತಿ...

ಮೊದಲ ಹಂತದ ಪರೀಕ್ಷೆ- 3000 ರೂ,  ಮರುದೃಢೀಕರಣ ಪರೀಕ್ಷೆ- 1500 ರೂ ನಿಗದಿ ಮಾಡಲಾಗಿದೆ. ಈ ದರವನ್ನು ಐಸಿಎಂಆರ್ ನಿಗದಿ ಮಾಡಿದ್ದು ಒಟ್ಟಾರೆ ಪರೀಕ್ಷಾ ವೆಚ್ಚ 4500 ಮೀರುವಂತಿಲ್ಲ.

ಇನ್ನು, ಸರ್ಕಾರಿ ಲ್ಯಾಬ್​​ಗಳು ಕೂಡಾ ಎಂದಿನಂತೆ ಪರೀಕ್ಷೆ ನಡೆಸುತ್ತವೆ. ಖಾಸಗಿ ಪ್ರಯೋಗಾಲಯಗಳಲ್ಲೂ ಜನ ತೆರಳಿದರೆ ಹೆಚ್ಚು ಜನರಿಗೆ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಐಸಿಎಂಆರ್ ಈ ಕ್ರಮ ಕೈಗೊಂಡಿದೆ.

ಇದುವರೆಗೂ ರಾಜ್ಯದಲ್ಲಿ 101 ಪ್ರಕರಣ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಈ ಪೈಕಿ ಬೆಂಗಳೂರು- 45, ಮೈಸೂರು- 14, ಚಿಕ್ಕಬಳ್ಳಾಪುರ- 9,  ದಕ್ಷಿಣ ಕನ್ನಡ- 8, ಉತ್ತರ ಕನ್ನಡ- 8, ಕಲಬುರಗಿ- 4, ದಾವಣಗೆರೆ- 3, ಉಡುಪಿ- 3, ಕೊಡಗು- 1, ಧಾರವಾಡ- 1, ತುಮಕೂರರಿನಲ್ಲಿ ಇಬ್ಬರಿಗೆ ಸೋಂಕು ಬಂದಿದೆ. ಇದರಲ್ಲಿ 8 ರೋಗಿಗಳು ಆಸ್ಪತ್ರೆಯಿಂದ‌ ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರಿನಲ್ಲಿ ನಕಲಿ ಸ್ಯಾನಿಟೈಸರ್ ಮತ್ತು ಥರ್ಮಾಮೀಟರ್​ ತಯಾರಿಸುತ್ತಿದ್ದವರ ಬಂಧನ
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading