• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೋನಾ ಸಂದಿಗ್ಧ ಪರಿಸ್ಥಿತಿ; ಸ್ಟೇಥಸ್ಕೋಪ್​​ ಹಿಡಿಯಲು ಸಿದ್ದರಾದ ರಾಜ್ಯದ ಇಬ್ಬರು ಶಾಸಕರು.!

ಕೊರೋನಾ ಸಂದಿಗ್ಧ ಪರಿಸ್ಥಿತಿ; ಸ್ಟೇಥಸ್ಕೋಪ್​​ ಹಿಡಿಯಲು ಸಿದ್ದರಾದ ರಾಜ್ಯದ ಇಬ್ಬರು ಶಾಸಕರು.!

ಶಾಸಕ ಡಾ.ಯತೀಂದ್ರ  ಹಾಗೂ ಶಾಸಕ ಡಾ.ರಂಗನಾಥ್​

ಶಾಸಕ ಡಾ.ಯತೀಂದ್ರ ಹಾಗೂ ಶಾಸಕ ಡಾ.ರಂಗನಾಥ್​

ಕಾಂಗ್ರೆಸ್ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕ ರಂಗನಾಥ್​ ಅವರು ಇದೀಗ ವೈದ್ಯಕೀಯ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

  • Share this:

ಬೆಂಗಳೂರು( ಏ.03) : ದೇಶಾದ್ಯಂತ ಲಾಕ್​​ ಡೌನ್​​​ ಮಾಡಿದ್ದರೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸರ್ಕಾರ ತೀವ್ರ ಆತಂಕ್ಕೆ ಈಡಾಗಿದೆ. ರಾಜ್ಯದಲ್ಲೂ ಕೊರೋನಾ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರ ತುರ್ತು ಅವಶ್ಯಕತೆ ಮನಗಂಡ ರಾಜ್ಯದ ಇಬ್ಬರು ಶಾಸಕರು ಸ್ಟೇಥಸ್ಕೋಪ್​​​ ಹಿಡಿಯಲು ಮುಂದಾಗಿದ್ದಾರೆ. 


ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಇಟಲಿಯ ವೈದ್ಯರೂ ಕೂಡ ಸಾವನ್ನಪ್ಪಿದ್ದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು ಹೆದರುತ್ತಿದ್ದಾರೆ. ಭಾರತದಲ್ಲಿ ಕೊರೋನಾ ಮೂರನೇ ಹಂತಕ್ಕೆ ತಲುಪುವ ಸಾಧ್ಯತೆಗಳು ಹೆಚ್ಚಾಗಿದ್ದರಿಂದ ಕಾಂಗ್ರೆಸ್ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕ ರಂಗನಾಥ್​ ಅವರು ಇದೀಗ ವೈದ್ಯಕೀಯ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.


ಸರ್ಕಾರ ಕರೆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಕ್ಕೆ ನಾನು ಸಿದ್ದನಿದ್ದೇನೆ. ಇದು ಅತ್ಯಂತ ತುರ್ತು ಸಂದರ್ಭ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಹಾಯ ಬೇಕಾಗುತ್ತದೆ. ಸದ್ಯ ನಮ್ಮ ದೇಶ ರಾಜ್ಯದಲ್ಲಿ ವೈದ್ಯರ ಕೊರತೆ ಉಂಟಾಗಿಲ್ಲ. ಹಾಗೇನಾದರೂ ವೈದ್ಯರ ಕೊರತೆ ಉಂಟಾದರೆ ನಾನು ಸರ್ಕಾರಕ್ಕೆ ಸಹಾಯ ಮಾಡುತ್ತೇನೆ. ಕೊರೊನಾ ವಿರುದ್ದ ಹೋರಾಡಲು ನಾನು ಕೈ ಜೊಡಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.


ನನ್ನನ್ನೂ ಸೇರಿಸಿ ನಮ್ಮ ಮನೆಯಲ್ಲಿರುವ ಎಲ್ಲರು ವೈದ್ಯರೇ ಒಂದು ವೇಳೆ ನಮ್ಮ ಸೇವೆ ಸರ್ಕಾರಕ್ಕೆ ಅಗತ್ಯವಿದ್ದು ನಮ್ಮನ್ನ ಸರ್ಕಾರ ಆಹ್ವಾನಿಸಿದರೇ ನನ್ನ ಅಣ್ಣ, ನನ್ನ ಅತ್ತಿಗೆ, ನನ್ನ ತಂದೆ ಎಲ್ಲರೂ ಕೂಡ ವೈದ್ಯರೇ ನಾವೆಲ್ಲಾ ಚಿಕಿತ್ಸೆ ನೀಡುವುದಕ್ಕೆ ಸಿದ್ದರಿದ್ದು. ಜನರಿಗೆ ಈಗ ವೈದ್ಯಕೀಯ ನೆರವು ತುಂಬಾ ಅವಶ್ಯಕವಿದೆ ಎಂದು ಶಾಸಕ ಡಾ. ರಂಗನಾಥ್​​ ಹೇಳಿದ್ದಾರೆ.


ಇದನ್ನೂ ಓದಿ : ಓದಿದ್ದು ಇಂಜಿನಿಯರಿಂಗ್ - ಮಾಡೋದು ಸೋಡಾ ಮಾರುವ ಕೆಲಸ - ಈತನ ದಿನದ ಗಳಿಕೆ ಎಷ್ಟು ಗೊತ್ತಾ..?


ಡಾ.ಯತೀಂದ್ರ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಗನಾಗಿದ್ದು, ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಶಾಸಕರಾಗಿದ್ದಾರೆ. ಇನ್ನೊಬ್ಬ ಶಾಸಕ ಡಾ. ರಂಗನಾಥ್​​ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹೋದರ ಸಂಬಂಧಿ ಕುಣಿಗಲ್ ಕ್ಷೇತ್ರದ ಶಾಸಕರಾಗಿದ್ದಾರೆ.

Published by:G Hareeshkumar
First published: