ತುಮಕೂರಿನಲ್ಲಿ ಪಾಲಿಕೆ ಅಧಿಕಾರಿಯದ್ದು ಆಡಿದ್ದೇ ಆಟ - ಕೊರೋನಾ ಸಮಯದಲ್ಲೂ ತೆರಿಗೆ ಕಟ್ಟಿ ಎಂದು ಜನರಿಗೆ ಕಾಟ

ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 35 ವಾರ್ಡ್​ಗಳ ಜನರು ತಮ್ಮ ಜಮೀನು, ಮನೆ, ಹೊಟೆಲ್, ಮಳಿಗೆ ಇತ್ಯಾದಿ ಆಸ್ತಿಗಳಿಗೆ ಶೇ.15 ರಷ್ಟು ತೆರಿಗೆಯನ್ನ ಕಟ್ಟಬೇಕು ಅಂತ ಕೊರೋನಾ ಸಂಕಷ್ಟದ ಸಮಯದಲ್ಲೂ ಪಾಲಿಕೆಯ ಅಧಿಕಾರಿಯೊಬ್ಬ ಜನರನ್ನ ಪೀಡುಸುತ್ತಿದ್ದನಂತೆ.

ತುಮಕೂರು ಮಹಾನಗರ ಪಾಲಿಕೆ

ತುಮಕೂರು ಮಹಾನಗರ ಪಾಲಿಕೆ

  • Share this:
ತುಮಕೂರು(ಆ.26): ತುಮಕೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಯೊಬ್ಬ ಆಡಿದ್ದೇ ಆಟವಾಗಿದೆ. ಅವನೇನೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಯಾರೂ ಕೇಳದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಆತನ ಉಪಟಳ ಯಾವ ಮಟ್ಟಕ್ಕಾಗಿದೆ ಅಂದ್ರೆ ಬರೋಬ್ಬರಿ ಮೂರು ಬಾರಿ ಗೆಲ್ಲುತ್ತಾ ಬಂದಿರೋ ಕಾರ್ಪೋರೇಟರ್ ಒಬ್ಬರಿಗೆ ನಿಮ್ಮ ಅಧಿಕಾರವನ್ನೆಲ್ಲಾ ಸೂಪರ್ ಸೀಡ್ ಮಾಡ್ತೇನೆ ಅಂತ ಹೆದರಿಸಿದ್ದಾನೆ. ಈ ಬಗ್ಗೆ ಇವತ್ತು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು‌.

ಹೌದು, ತುಮಕೂರು ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸೂಪರ್ ಸೀಡ್ ವಿಚಾರ ಭಾರಿ ಚರ್ಚೆಗೆ ಕಾರಣವಾಯ್ತು. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 35 ವಾರ್ಡ್​ಗಳ ಜನರು ತಮ್ಮ ಜಮೀನು, ಮನೆ, ಹೊಟೆಲ್, ಮಳಿಗೆ ಇತ್ಯಾದಿ ಆಸ್ತಿಗಳಿಗೆ ಶೇ.15 ರಷ್ಟು ತೆರಿಗೆಯನ್ನ ಕಟ್ಟಬೇಕು ಅಂತ ಕೊರೋನಾ ಸಂಕಷ್ಟದ ಸಮಯದಲ್ಲೂ ಪಾಲಿಕೆಯ ಅಧಿಕಾರಿಯೊಬ್ಬ ಜನರನ್ನ ಪೀಡುಸುತ್ತಿದ್ದನಂತೆ.

ಈ ಬಗ್ಗೆ ಪ್ರಶ್ನೆ ಮಾಡಿದ ಕೌನ್ಸಿಲ್ ಒಬ್ಬರಿಗೆ‌ ಇದು ಸರ್ಕಾರದ ಆದೇಶ. ಇದನ್ನ ಉಲ್ಲಂಘಿಸಿದರೇ ನಿಮ್ಮ ಅಧಿಕಾರವನ್ನ ಸೂಪರ್ ಸೀಡ್ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ.

ಇತ್ತೀಚೆಗೆ ನಡೆದ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಕೊರೋನಾ ಸೋಂಕು ಹರಡುವಿಕೆ ಭೀತಿಯ ನಡುವೆ ತೆರಿಗೆ ಹೆಚ್ಚಳ ಮಾಡಬಾರದು. ಇದರಿಂದ ಸಾರ್ವಜನಿಕರ ಮೇಲೆ ಸಾಕಷ್ಟು ಒತ್ತಡ ಬೀಳಲಿದೆ ಎಂದು ಸರ್ಕಾರವೇ ಹೇಳಿದೆ. ಆದರೆ, ಇದಕ್ಕೆ ಪಾಲಿಕೆಯ ಅಧಿಕಾರಿ ತೆರಿಗೆ ಹೆಚ್ಚಳ ಮಾಡಲು ಸದಸ್ಯರು ಒಪ್ಪದಿದ್ದರೆ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲಿದೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಪಾಲಿಕೆ ಸದಸ್ಯ ನಯಾಝ್ ಅಹ್ಮದ್‌ ಆರೋಪಿಸಿದರು.

ಇದನ್ನೂ ಓದಿ: ಆರ್ಥಿಕ ಪ್ರಗತಿಗಾಗಿ ವಿದೇಶಿ ನೇರ ಹೂಡಿಕೆಗೆ ಉತ್ತೇಜನ - ಸಿಎಂ ಬಿಎಸ್​ ಯಡಿಯೂರಪ್ಪ

ಪಾಲಿಕೆ ಅಧಿಕಾರಿ ಜಗದೀಶ್ ಹೀಗೆಲ್ಲಾ ಕೌನ್ಸಲರ್​​ಗಳಿಗೆ ಅವಾಜ್ ಹಾಕಿದ್ದಾನೆ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಇವತ್ತು ನಯಾಝ್ ಅಹ್ಮದ್‌ ಆಗ್ರಹಿಸಿದರು. ಇದರಿಂದ ಕಕ್ಕಾಬಿಕ್ಕಿಯಾದ ಅಧಿಕಾರಿ ಜಗದೀಶ್ ಪಾಲಿಕೆ ಮೇಯರ್ ಬಳಿ ತೆರಳಿ ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೆ ಕಿವಿಗೊಡದ ಮೇಯರ್ ಫರೀದಾ ಬೇಗಂ ಅವರು ಸೂಪರ್ ಸೀಡ್ ಕುರಿತು ವಿಷಯವನ್ನು ಹಬ್ಬಿಸುತ್ತಿರುವ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ಕುರಿತು ಮುಂದಿನ ಸಭೆಯಲ್ಲಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದರು.

ಒಟ್ಟಾರೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಈ ಜಗದೀಶ್‌ ಎಂಬ ಅಧಿಕಾರಿಯದ್ದೇ ಆಡಳಿತ ಶುರುವಾಗಿದೆ. ಈತನ ವೇಗಕ್ಕೆ‌ ಕಡಿವಾಣ ಹಾಕಬೇಕಿದ್ದ ಪಾಲಿಕೆ ಮೇಯರ್‌ ಹಾಗೂ ಆಯುಕ್ತರು ದಿವ್ಯ ಮೌನ ವಹಿಸಿರೋದು ಹಲವು ಅನುಮಾನಗಳಿಕೆ ದಾರಿ ಮಾಡಿಕೊಟ್ಟಿದೆ. ಪಾಲಿಕೆ ಈಗಲೇ ಎಚ್ಚೆತ್ತು ಹೀಗೆಲ್ಲಾ ಹೆದರಿಸಿಕೊಂಡು ಓಡಾಡುತ್ತಿರುವ ಅಧಿಕಾರಿ ಜಗದಿಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
Published by:Ganesh Nachikethu
First published: