• ಹೋಂ
  • »
  • ನ್ಯೂಸ್
  • »
  • Corona
  • »
  • ಕೆಮ್ಮು, ಜ್ವರ, ನೆಗಡಿ ಇತ್ಯಾದಿ ಕೊರೋನಾ ರೋಗಲಕ್ಷಣಗಳಿದ್ದರೆ ತಿರುಪತಿಗೆ ಬರಬೇಡಿ: ಟಿಟಿಡಿ

ಕೆಮ್ಮು, ಜ್ವರ, ನೆಗಡಿ ಇತ್ಯಾದಿ ಕೊರೋನಾ ರೋಗಲಕ್ಷಣಗಳಿದ್ದರೆ ತಿರುಪತಿಗೆ ಬರಬೇಡಿ: ಟಿಟಿಡಿ

ತಿರುಪತಿ ತಿಮ್ಮಪ್ಪ

ತಿರುಪತಿ ತಿಮ್ಮಪ್ಪ

Tirumala Tirupati Devasthanams: ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಸ್ಯಾನಿಟೈಸರ್​, ಮಾಸ್ಕ್​ ಬಳಸುವುದು ಉತ್ತಮ. ಬೇರೆ ಭಕ್ತರೊಂದಿಗೆ 3 ಅಡಿ ಅಂತರ ಕಾಯ್ದುಕೊಳ್ಳಿ. ಸಾಮಾನ್ಯ ಜ್ವರ ಹೊಂದಿದ್ದರೂ ಕೂಡ, ದರ್ಶನವನ್ನು ಮುಂದೂಡಿ ಎಂದು ಆಡಳಿತ ಮಂಡಳಿ ತಿಳಿಸಿದೆ.

  • Share this:

ಬೆಂಗಳೂರು(ಮಾ. 09):  ಕೆಮ್ಮು, ಜ್ವರ, ನೆಗಡಿ ಹಾಗೂ ಉಸಿರಾಟದಂತಹ ಸಮಸ್ಯೆಇದ್ದರೆ,   ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದಯವಿಟ್ಟು ಬರಬೇಡಿ ಎಂದು ಟಿಟಿಡಿ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.


ವಿಶ್ವದಲ್ಲಿ ಭೀತಿ ಮೂಡಿಸಿರುವ ಕೊರೋನಾ ಕರಿಛಾಯೆಗೆ ಈಗ ದೇಶ ಕೂಡ ನಲುಗುತ್ತಿದ್ದು, ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿದೆ. ತೆಲಂಗಾಣದ ವ್ಯಕ್ತಿ ಸೇರಿದಂತೆ ಇಲ್ಲಿಯವರೆಗೆ 43 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ.  ಈ ಹಿನ್ನೆಲೆಯಲ್ಲಿ ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣಗಳು ಹೊಂದಿರುವವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವೈರಸ್​ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕರ ಸಮಾರಂಭ, ಜನಸಂದಣಿ ಪ್ರದೇಶಗಳಿಗೆ ಹೋಗದಿರುವುದು ಒಳಿತು ಎಂದು ಕೇಂದ್ರ ಆರೋಗ್ಯ ಇಲಾಖೆ ಕೂಡ ಸಲಹೆ ನೀಡಿದೆ.


ಇನ್ನು ದೇಶದ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಸ್ಥಳವಾದ ತಿರುಪತಿಗೆ ಕೂಡ ಈ ಕೊರೋನಾ ಭಯ ಕಾಡುತ್ತಿದೆ. ಅತ್ಯಂತ ಪ್ರಸಿದ್ಧಿ ಹೊಂದಿರುವ ತಿಮ್ಮಪ್ಪನ ದರ್ಶನಕ್ಕೆ ದೇಶ ವಿದೇಶದಿಂದ ಆಗಮಿಸುವ ಭಕ್ತರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಿದೆ.  ಈ ಹಿನ್ನೆಲೆ  ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರಕಟಣೆ ಹೊರಡಿಸಲಾಗಿದೆ ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಹಕ ಅಧಿಕಾರಿ ಎವಿ ಧರ್ಮ ರೆಡ್ಡಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.


ಅಷ್ಟೇ ಅಲ್ಲದೇ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಸ್ಯಾನಿಟೈಸರ್​, ಮಾಸ್ಕ್​ ಬಳಸುವುದು ಉತ್ತಮ. ಬೇರೆ ಭಕ್ತರೊಂದಿಗೆ 3 ಅಡಿ ಅಂತರ ಕಾಯ್ದುಕೊಳ್ಳಿ. ಸಾಮಾನ್ಯ ಜ್ವರ ಹೊಂದಿದ್ದರೂ ಕೂಡ, ದರ್ಶನವನ್ನು ಮುಂದೂಡಿ ಎಂದಿದೆ.


ದರ್ಶನಕ್ಕೆ ಬಂದ ಭಕ್ತರಲ್ಲಿ ಸಣ್ಣ ಜ್ವರ ಕಂಡು ಬಂದರೂ ಅದನ್ನು  ಥರ್ಮಲ್​ ಸ್ಕ್ರೀನಿಂಗ್​ ಮೂಲಕ ಗಮನಿಸಲಾಗುವುದು. ಅಂತಹವರನ್ನು ತಕ್ಷಣಕ್ಕೆ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಚಿಕಿತ್ಸೆಗೆ ಕಳುಹಿಸಲಾಗುವುದು.


ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಟಿಟಿಡಿ ಆಡಳಿತ ಮಂಡಳಿ ಶನಿವಾರ ಚರ್ಚೆ ನಡೆಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೇಡಿಯೋ, ಶ್ರೀವೆಂಕಟೇಶ್ವರ ಭಕ್ತಿ ಚಾನಲ್​ನಲ್ಲಿ ಕೂಡ ಈ ಪ್ರಕಟಣೆ ಹೊರಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಟಿಟಿಡಿ ಆರೋಗ್ಯ ಅಧಿಕಾರಿಗಳು ಕೂಡ ನಿಗಾವಹಿಸಿದ್ದಾರೆ


ದೇವರ ದರ್ಶನ, ಊಟ, ಪ್ರಸಾದದ ಕ್ಯೂ, ಜನಸಂದಣಿ ಪ್ರದೇಶ, ಕೇಂದ್ರ ಮೀಸಲು ಕಚೇರಿ ಸೇರಿದಂತೆ ಹಲವು ಕಡೆ ಎರಡು ಗಂಟೆಗಳಿಗೆ ಒಮ್ಮೆ ಸೋಂಕುರಹಿತವಾಗಿದೆಯೇ ಎಂಬ ಬಗ್ಗೆ ಆರೋಗ್ಯ ಇಲಾಖೆ ತಪಾಸಣೆ ನಡೆಸಲಾಗುವುದು ಎಂದು ಕೂಡ ತಿಳಿಸಿದೆ.


ಇದನ್ನು ಓದಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 42ಕ್ಕೇರಿಕೆ; ವಿಶ್ವಾದ್ಯಂತ 3,800 ದಾಟಿದ ಸಾವಿನ ಸಂಖ್ಯೆ

top videos


    ಕಳೆದ ವಾರ ಇಲ್ಲಿನ ತಿರುಪತಿ ದೇವಾಲಯದಲ್ಲಿ ಇಬ್ಬರು ಥಾಯ್ಲೆಂಡ್​ ಮೂಲದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಯಾವುದೇ ಸೋಂಕಿಲ್ಲ ಎಂದು ವರದಿ ತಿಳಿಸಿತ್ತು. ತೆಲಂಗಾಣದಲ್ಲಿ ಒಂದು ಪ್ರಕರಣ ಈಗಾಗಲೇ ಪತ್ತೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಮಾತ್ರ ಇದುವರೆಗೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು