news18-kannada Updated:May 19, 2020, 11:48 AM IST
ಡೊನಾಲ್ಡ್ ಟ್ರಂಪ್
ನವದೆಹಲಿ(ಮೇ.19): ವಿಶ್ವ ಆರೋಗ್ಯ ಸಂಸ್ಥೆಗೆ(WHO) ನೀಡಲಾಗುತ್ತಿರುವ ಅನುದಾನ ಶಾಶ್ವತವಾಗಿ ಕಡಿತಗೊಳಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ಧಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ಗೆ ಪತ್ರ ಬರೆದ ಟ್ರಂಪ್, WHO ಈಗ ಚೀನಾದ ಕೈಗೊಂಬೆ ಆಗಿದೆ. ನೀವು ಬದಲಾಗದಿದ್ದರೆ ನೀಡುತ್ತಿರುವ ಅನುದಾತಕ್ಕೆ ಕಡಿವಾಣ ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಗೆ 450 ಮಿಲಿಯನ್ ಡಾಲರ್ ವಾರ್ಷಿಕ ಅನುದಾನ ನೀಡುತ್ತಿದ್ದೇವೆ. ವಿಶ್ವದ ಯಾವುದೇ ರಾಷ್ಟ್ರವೂ ಇಷ್ಟು ಅನುದಾನ ನೀಡುವುದಿಲ್ಲ. ಎಲ್ಲಾ ರಾಷ್ಟ್ರಗಳಿಂತಲೂ ನಾವೇ ಹೆಚ್ಚಿನ ಅನುದಾನ ಕೊಡುತ್ತಿದ್ದೇವೆ. ಹೀಗಿದ್ದರೂ ನೀವು ಚೀನಾ ಮಾತು ಕೇಳುತ್ತಿದ್ದೀರಿ. ನಮಗೆ ಸ್ಪಂದಿಸುತ್ತಿಲ್ಲ. ಇದು ಮುಂದೆ ಹತೋಟಿಗೆ ಬರದಿದ್ದಲ್ಲಿ ಕೊಡಲಾಗುತ್ತಿರುವ ಅನುದಾನ ನಿಲ್ಲಿಸುತ್ತೇವೆ ಎಂದು ವಾರ್ನ್ ಮಾಡಿದ್ದಾರೆ.
ಚೀನಾದ ಮಾತು ಕೇಳಿಕೊಂಡು ನೀವು ನಮಗೆ ಕೇವಲ ಉಪದೇಶಗಳನ್ನು ನೀಡುತ್ತಿದ್ದೀರಿ. ನಿಮಗೆ 30 ದಿನ ಕಾಲಾವಕಾಶ ಕೊಡುತ್ತಿದ್ದೇವೆ. ಎಲ್ಲವನ್ನೂ ಸರಿಪಡಿಸಿದರೇ ಅನುದಾನ, ಇಲ್ಲದೆ ಹೋದಲ್ಲಿ ಕಡಿತಗೊಳಿಸುತ್ತೇವೆ. ಚೀನಾ 300 ಕೋಟಿ ನೀಡುತ್ತಿದೆ. ನಾವು ಅಷ್ಟೇ ಕೊಡುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು, ಏಪ್ರಿಲ್ ತಿಂಗಳಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗುತ್ತಿದ್ದ ಅನುದಾನವನ್ನು ಅಮೆರಿಕಾ ನಿಲ್ಲಿಸಿತ್ತು. ಚೀನಾ ನೀಡುವಷ್ಟೇ ನೀಡುವುದಾಗಿಯೂ ಎಚ್ಚರಿಸಿತ್ತು.
ಇದನ್ನೂ ಓದಿ: ಅಮೆರಿಕಕ್ಕೆ ಭಾರತ ಸರಬರಾಜು ಮಾಡಿದ ಔಷಧಿಯನ್ನೇ ನಿತ್ಯ ಸೇವಿಸುತ್ತಿರುವ ಟ್ರಂಪ್
ಈ ಹಿಂದೆ ಜನವರಿ 15ರಂದು ವಿಶ್ವ ಆರೋಗ್ಯ ಸಂಸ್ಥೆ, “ಕೋವಿಡ್ 19 ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಪುರಾವೆ ಇಲ್ಲ’ ಎಂದು ಹೇಳಿತ್ತು. ಆದರೆ, ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಖುದ್ದು ಚೀನಾದ ವೈದ್ಯರು ಹೇಳುತ್ತಾ ಬಂದರೂ WHO ಕಡೆಗಣಿಸಿತ್ತು.ಇದಾದ 15 ದಿನಗಳ ಬಳಿಕ ಜಗತ್ತಿನ ಹಲವು ದೇಶಗಳು ಒತ್ತಡ ಹೇರಿದ ಮೇಲಷ್ಟೇ ವಿಶ್ವಸಂಸ್ಥೆ ಜನವರಿ 30ನೇ ತಾರೀಕಿನಂದು ಕೋವಿಡ್ 19 ವೈರಸ್ ಅನ್ನು ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಅಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್, ರೋಗ ಹರಡುವಿಕೆಯನ್ನು ತಡೆಯಲು ಚೀನ ಉತ್ತಮ ಕೆಲಸ ಮಾಡುತ್ತಿದೆ ಎಂದಿದ್ದರು. ಹೀಗೆ ಚೀನವನ್ನು ಹೊಗಳಿದಕ್ಕೆ ಟ್ರಂಪ್ ಕೆಂಡಕಾರಿದ್ದರು.
First published:
May 19, 2020, 11:43 AM IST