ಒಂದೇ ದಿನ 2 ಸಾವಿರ ಜನ ಮೃತಪಟ್ಟ ಹೊರತಾಗಿಯೂ ಕೊರೋನಾವನ್ನು ಬಡಿದೋಡಿಸಿದ್ದೇವೆ ಎಂದ ಟ್ರಂಪ್

ಅಮೆರಿಕದಲ್ಲಿ ನಿನ್ನೆ ಒಂದೇ ದಿನ ಸುಮಾರು 21 ಸಾವಿರ ಜನರಿಗೆ ಕೊರೋನಾ ವೈರಸ್​ ಅಂಟಿದೆ. ಕಳೆದ 24 ಗಂಟೆಯಲ್ಲಿ 2 ಸಾವಿರ ಜನರು ಮೃತಪಟ್ಟಿದ್ದಾರೆ. ಹೀಗಿದ್ದರೂ ನಾವು ಕೊರೋನಾ ನಿಯಂತ್ರಣ ಮಾಡಿದ್ದೇವೆ ಎಂದು ಟ್ರಂಪ್​ ಹೇಳಿದ್ದಾರೆ.

news18-kannada
Updated:May 6, 2020, 9:19 AM IST
ಒಂದೇ ದಿನ 2 ಸಾವಿರ ಜನ ಮೃತಪಟ್ಟ ಹೊರತಾಗಿಯೂ ಕೊರೋನಾವನ್ನು ಬಡಿದೋಡಿಸಿದ್ದೇವೆ ಎಂದ ಟ್ರಂಪ್
ಡೊನಾಲ್ಡ್ ಟ್ರಂಪ್
  • Share this:
ವಾಷಿಂಗ್ಟನ್ (ಮೇ 6)​: ಅಮೆರಿಕದಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾವಿನ ಸಂಖ್ಯೆ 70 ಸಾವಿರ ದಾಟಿದರೆ, ಸೋಂಕಿತರ ಸಂಖ್ಯೆ 12 ಲಕ್ಷದ ಗಡಿ ದಾಟಿದೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಾವು ಕೊರೋನಾವನ್ನೇ ಒದ್ದು ಓಡಿಸಿದ್ದೇವೆ ಎಂದು ಬೀಗಿದ್ದಾರೆ. ಅವರ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ಅಮೆರಿಕದಲ್ಲಿ ನಿನ್ನೆ ಒಂದೇ ದಿನ ಸುಮಾರು 21 ಸಾವಿರ ಜನರಿಗೆ ಕೊರೋನಾ ವೈರಸ್​ ಅಂಟಿದೆ. ಕಳೆದ 24 ಗಂಟೆಯಲ್ಲಿ 2 ಸಾವಿರ ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 12.37 ಲಕ್ಷ ಇದೆ. ಸಾವಿನ ಸಂಖ್ಯೆ 72 ಸಾವಿರ ಆಗಿದೆ. ಅಮೆರಿಕದ ಬಳಿ ಕೊರೋನಾ ತಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಟೀಕೆ ಕೇಳಿ ಬರುತ್ತಿರುವಾಗಲೇ ಟ್ರಂಪ್​ ಈ ರೀತಿ ಟ್ವೀಟ್​ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್​​ ಮಾಡಿರುವ ಟ್ರಂಪ್​, ನಾವು ಕೊರೋನಾ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದೇವೆ. ಈ ಮೂಲಕ ದೇಶದ ಜನರ ಪ್ರಾಣವನ್ನು ರಕ್ಷಣೆ ಮಾಡಿದ್ದೇವೆ. ನಾವು ಈಗ ದೇಶವನ್ನು ಮತ್ತೆ ಪುನರಾರಂಭ ಮಾಡಬೇಕಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಭಾರೀ ಟೀಕೆಗಳು ವ್ಯಕ್ತವಾಗಿದೆ.

ಇದನ್ನೂ ಓದಿ: ಕೊರೋನಾ ನಾಶಕ್ಕೆ ದೇಹದೊಳಗೆ ಅಲ್ಟ್ರಾವಯಲೆಟ್​ ಕಿರಣ ಹಾಯಿಸಿ; ಟ್ರಂಪ್​ ಸಲಹೆಗೆ ವೈದ್ಯರೇ ಶಾಕ್​

ಈ ಮೊದಲು “ಕೊರೋನಾ ವೈರಸ್​ ಬಂದ ವ್ಯಕ್ತಿಯ ದೇಹದ ಒಳಗೆ ಸೋಂಕು ನಿವಾರಕವನ್ನು ಸೇರಿಸಿ. ಇದರ ಜೊತೆಗೆ ಅಲ್ಟ್ರಾವಯಲೆಟ್​ ಕಿರಣ​ ಹಾಯಿಸುವ ಮೂಲಕ ವೈರಸ್​ ಸಾಯಿಸಿ,” ಎಂದು ಟ್ರಂಪ್​ ಸೂಚನೆ ನೀಡಿದ್ದರು. ಅವರ ಈ ಅಸಂಬದ್ಧ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು.
First published: May 6, 2020, 9:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading