ಕೊರೋನಾ ನಿಯಂತ್ರಣ: ಅದ್ಭುತ ಕೆಲಸ ಮಾಡಿದ್ದೀರಿ ಎಂದ ಪ್ರಧಾನಿ ಮೋದಿ - ಡೊನಾಲ್ಡ್​​ ಟ್ರಂಪ್​​

ಭಾರತ 1.5 ಬಿಲಿಯನ್ ಜನರಿಗೆ ಕೊರೋನಾ ಪರೀಕ್ಷೆ ಮಾಡಿದೆ. ಈ ವಿಚಾರ ಗೊತ್ತಾದ ಕೂಡಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಕೊರೋನಾ ಪರೀಕ್ಷೆಯಲ್ಲಿ ನೀವು ಅದ್ಭುತ ಕೆಲಸ ಮಾಡಿದ್ದೀರಿ ಎಂದು ಕರೆ ಮಾಡಿ ಹೇಳಿದರು ಎಂದರು.

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ

 • Share this:
  ನವದೆಹಲಿ(ಸೆ.14): ಮಾರಕ ಕೊರೋನಾ ವೈರಸ್​​ ಪರೀಕ್ಷೆಯಲ್ಲಿ ಯಾರು ಮಾಡಿರದಂತಹ ಅದ್ಭುತ ಕೆಲಸ ನೀವು ಮಾಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ಹೊಗಳಿದ್ದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ ಹೇಳಿಕೊಂಡಿದ್ದಾರೆ. ಈ ಸಂಬಂಧ ಚುನಾವಣಾ ಪ್ರಚಾರದಲ್ಲಿ ಮಾತಾಡಿದ ಟ್ರಂಪ್​​, ಕೊರೋನಾ ನಿಯಂತ್ರಣ ವಿಚಾರದಲ್ಲಿ ಮೋದಿ ನನ್ನ ಬೆನ್ನು ತಟ್ಟಿದ್ದಾರೆ. ಈ ಹಿಂದಿನ ಸರ್ಕಾರವೂ ತನ್ನ ಅಧಿಕಾರದ ಅವಧಿಯಲ್ಲಿ ಎಚ್‌1ಎನ್1 ಕಾಣಿಸಿಕೊಂಡಾಗ ಅದನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಈಗ ಅಂತಹುದ್ದೇ ಮತ್ತೊಂದು ಮಾರಕ ರೋಗ ಕೊರೋನಾ ವೈರಸ್​ ಕಾಣಿಸಿಕೊಂಡಿದೆ. ಇದನ್ನು​ ಸಂಪೂರ್ಣ​ ನಿಯಂತ್ರಣ ಮಾಡುವಲ್ಲಿ ನಮ್ಮ ಸರ್ಕಾರ ಸಫಲವಾಗಿದೆ ಎನ್ನುವ ಮೂಲಕ ಡೆಮಾಕ್ರಟಿಕ್ ಪಕ್ಷದ ತಮ್ಮ ಎದುರಾಳಿ ಜೋ ಬಿಡೆನ್ ವಿರುದ್ಧ ಟೀಕಾ ಪ್ರಕಾರ ಮುಂದುವರಿಸಿದ್ದಾರೆ. ಹೀಗೆ ಟ್ರಂಪ್​​ ತನ್ನ ಸರ್ಕಾರದ ಸಾಧನೆಯನ್ನ ಜನರ ಮುಂದೆ ಬಿಚ್ಚಿಟ್ಟಿದ್ದಾರೆ.

  ಭಾರತಕ್ಕಿಂತಲೂ ಹೆಚ್ಚು ಕೊರೋನಾ ಕೇಸುಗಳ ಪರೀಕ್ಷೆ ಮಾಡಿದ್ದೇವೆ. ವಿಶ್ವದ ಎಲ್ಲಾ ದೊಡ್ಡ ದೇಶಗಳು ಮಾಡಿರುವುದಕ್ಕಿಂತಲೂ ಹೆಚ್ಚು ಜನರಿಗೆ ಕೊರೋನಾ ಟೆಸ್ಟ್​ ಮಾಡಿದ್ದೇವೆ. ಕೊರೋನಾ ವೈರಸ್ ಪರೀಕ್ಷೆಯಲ್ಲಿ ಅಮೆರಿಕಾದ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. ನಾವು ಭಾರತಕ್ಕಿಂತ 44 ಮಿಲಿಯನ್ ಪರೀಕ್ಷೆಗಳ ಮುಂದೆ ಇದ್ದೇವೆ ಎಂದು ಟ್ರಂಪ್​​ ಹೇಳಿದ್ದಾರೆ.

  ಭಾರತ 1.5 ಬಿಲಿಯನ್ ಜನರಿಗೆ ಕೊರೋನಾ ಪರೀಕ್ಷೆ ಮಾಡಿದೆ. ಈ ವಿಚಾರ ಗೊತ್ತಾದ ಕೂಡಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಕೊರೋನಾ ಪರೀಕ್ಷೆಯಲ್ಲಿ ನೀವು ಅದ್ಭುತ ಕೆಲಸ ಮಾಡಿದ್ದೀರಿ ಎಂದು ಕರೆ ಮಾಡಿ ಹೇಳಿದರು ಎಂದರು.

  ಇದನ್ನೂ ಓದಿ: ‘ನವಿಲು ಜತೆ ಬ್ಯುಸಿಯಾದ ಮೋದಿ; ಕೊರೋನಾ ಟೈಮಲ್ಲಿ ನಿಮ್ಮ ಜೀವನ ನೀವೇ ನೋಡಿಕೊಳ್ಳಬೇಕು‘ - ರಾಹುಲ್​ ಗಾಂಧಿ

  ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 67 ಲಕ್ಷ ದಾಟಿದೆ. ಇನ್ನು 1.98 ಸಾವಿರ ಮಂದಿ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 48 ಲಕ್ಷ ದಾಟಿದೆ. 80 ಸಾವಿರ ಮಂದಿ ಅಸುನೀಗಿದ್ಧಾರೆ.
  Published by:Ganesh Nachikethu
  First published: