ಕೊರೋನಾ ವೈರಸ್: ಚೀನಾದಲ್ಲಿ ಇಷ್ಟು ಕಡಿಮೆ ಅನಾಹುತ ಹೇಗೆ ಸಾಧ್ಯ? – ಅಮೆರಿಕ ಸಂದೇಹ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಚೀನಾವನ್ನು ನಂಬಲು ಸಾಧ್ಯವಿಲ್ಲ ಎಂದು ರಿಪಬ್ಲಿಕನ್ ಪಕ್ಷದ ಮುಖಂಡ ಮಿಖೇಲ್ ಮೆಕೋಲ್ ಹೇಳುತ್ತಾರೆ.

news18
Updated:April 2, 2020, 11:11 AM IST
ಕೊರೋನಾ ವೈರಸ್: ಚೀನಾದಲ್ಲಿ ಇಷ್ಟು ಕಡಿಮೆ ಅನಾಹುತ ಹೇಗೆ ಸಾಧ್ಯ? – ಅಮೆರಿಕ ಸಂದೇಹ
ಡೊನಾಲ್ಡ್ ಟ್ರಂಪ್
  • News18
  • Last Updated: April 2, 2020, 11:11 AM IST
  • Share this:
ವಾಷಿಂಗ್ಟನ್(ಏ. 02): ಕೊರೋನಾ ವೈರಸ್ ಸೋಂಕು ಅಮೆರಿಕದಲ್ಲಿ ದೊಡ್ಡ ಪಿಡುಗಾಗಿ ಹಬ್ಬುತ್ತಿದೆ. 5 ಸಾವಿರಕ್ಕೂ ಹೆಚ್ಚು ಜನರು ಅಮೆರಿಕದಲ್ಲಿ ಬಲಿಯಾಗಿದ್ದಾರೆ. ಕೊರೋನಾ ವೈರಸ್ ಮೊದಲು ಪತ್ತೆಯಾಗಿದ್ದು ಚೀನಾದಲ್ಲಿ. ಇಲ್ಲಿ 83 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆಯಾದರೂ ಸಾವಿನ ಸಂಖ್ಯೆ 3,400ಕ್ಕಿಂತಲೂ ಕಡಿಮೆ ಇದೆ. ಇದು ಅಮೆರಿಕಕ್ಕೆ ಅಚ್ಚರಿ ತಂದಿದೆ. ಚೀನಾದವರು ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ. ಚೀನಾದಲ್ಲಿ ಕೊರೋನಾ ವೈರಸ್​ನಿಂದ ಅನಾಹುತವಾಗಿರುವ ಪ್ರಮಾಣ ಹೆಚ್ಚು ಇದೆ ಎಂದು ಅಮೆರಿಕದ ಗುಪ್ತಚರರು ತಿಳಿಸಿದ್ದಾರೆನ್ನಲಾಗುತ್ತಿದೆ.

ಅಮೆರಿಕ ಅಧ್ಯಕ್ಷ ಸುದ್ದಿಗೋಷ್ಠಿ ನಡೆಸಿ ಈ ವಿಚಾರದ ಬಗ್ಗೆ ಮಾತನಾಡಿದರು. “ಅದು ಸರಿ ಎಂದು ಹೇಗೆ ಹೇಳುತ್ತೀರಿ? ಅವರ ಅಂಕಿ-ಅಂಶ ಸ್ವಲ್ಪ ವ್ಯತ್ಯಾಸವಾಗಿರುವಂತಿದೆ” ಎಂದು ಟ್ರಂಪ್ ಹೇಳಿದರು.

ಅಮೆರಿಕ ಮತ್ತು ಚೀನಾ ದೇಶಗಳು ಒಳಗಿಂದೊಳಗೆ ಪರಸ್ಪರ ಕತ್ತೆ ಮಸೆಯುತ್ತಿರುವುದು ಹೊಸದಲ್ಲ. ಕೊರೋನಾ ವೈರಸ್ ಅನ್ನು ಟ್ರಂಪ್ ಅವರು ಯಾವ ಮುಲಾಜೂ ಇಲ್ಲದೇ ಚೀನೀ ವೈರಸ್ ಎಂದು ಸಂಬೋಧಿಸುತ್ತಾರೆ. ಅತ್ತ ಚೀನಾದಲ್ಲಿ ಕೊರೋನಾ ವೈರಸ್ ವಕ್ಕರಿಸಲು ಅಮೆರಿಕದ ಸೈನಿಕರೇ ಕಾರಣ ಎಂಬ ಸಂಚಿನ ಕಥೆಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಅಮೆರಿಕದಲ್ಲಿ ಮುಂದುವರಿದ ಕೊರೋನಾ ಆರ್ಭಟ; ಒಂದೇ ದಿನ 884 ಸಾವು, ಸೋಂಕಿತರ ಸಂಖ್ಯೆ 2.15 ಲಕ್ಷಕ್ಕೆ ಏರಿಕೆ

ಅಮೆರಿಕದ ರಿಪಬ್ಲಿಕನ್ ಪಕ್ಷದ ಸದಸ್ಯರು ಕೊರೋನಾ ವಿಚಾರದಲ್ಲಿ ಚೀನಾ ವರ್ತನೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ಧಾರೆ. ಸೋಂಕು ತಗುಲಿರುವ ಪ್ರಮಾಣದ ಬಗ್ಗೆ ಚೀನಾ ಸುಳ್ಳು ಲೆಕ್ಕ ಕೊಡುತ್ತಿದೆ ಎಂಬುದು ಇವರ ಆಪಾದನೆ.

“ಚೀನಾಗಿಂತಲೂ ಅಮೆರಿಕದಲ್ಲಿ ಹೆಚ್ಚು ಸಾವಿಗೆ ಎಂಬುದು ಸುಳ್ಳು. ಇದು ಚೀನಾದ ಕೊಳಕು ಅಪಪ್ರಚಾರ…. ಚೀನಾದ ಕಮ್ಯೂನಿಸ್ಟ್ ಪಕ್ಷವು ತನ್ನ ಅಧಿಕಾರ ಉಳಿಸಿಕೊಳ್ಳಲು ಕೊರೋನಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆ” ಎಂದು ರಿಪಬ್ಲಿಕನ್ ಸಂಸದ ಬೆನ್ ಸಾಸ್ಸೆ ಹೇಳಿಕೆಯೊಂದನ್ನು ನೀಡಿದ್ಧಾರೆ.

ಇದನ್ನೂ ಓದಿ: Nirmal Singh: ಕೊರೋನಾ ಸೋಂಕಿಗೆ ಪದ್ಮಶ್ರೀ ಪುರಸ್ಕೃತ ಗಾಯಕ ನಿರ್ಮಲ್ ಸಿಂಗ್ ಬಲಿ“ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಚೀನಾವನ್ನು ನಂಬಲು ಸಾಧ್ಯವಿಲ್ಲ” ಎಂದು ಮತ್ತೊಬ್ಬ ರಿಪಬ್ಲಿಕನ್ ಪಕ್ಷದ ಮುಖಂಡ ಮಿಖೇಲ್ ಮೆಕೋಲ್ ಹೇಳುತ್ತಾರೆ.

ಅಮೆರಿಕದಲ್ಲಿ ಈಗ ಕೊರೋನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 2 ಲಕ್ಷ ದಾಟಿದೆ. ಸಾವಿನ ಸಂಖ್ಯೆ ಕೂಡ 5 ಸಾವಿರ ದಾಟಿದೆ. ಇಟಲಿ ದೇಶದಲ್ಲಿ 13 ಸಾವಿರಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಸ್ಪೇನ್ ದೇಶದಲ್ಲಿ ಸಾವಿನ ಸಂಖ್ಯೆ 10 ಸಾವಿರದ ಗಡಿ ಸಮೀಪಿಸುತ್ತಿದೆ. ಆದರೆ, ಮೊದಲು ಕೊರೊನಾ ವೈರಸ್ ಪತ್ತೆಯಾಗಿದ್ದ ಚೀನಾದಲ್ಲಿ ಬಹಳ ದಿನಗಳಿಂದ 3 ಸಾವಿರದ ಆಸುಪಾಸಿನಲ್ಲೇ ಸಾವಿನ ಸಂಖ್ಯೆ ನಿಂತಿದೆ. ಇದು ಪಾಶ್ಚಿಮಾತ್ಯ ದೇಶಗಳಿಗೆ ಬಹಳ ಅಚ್ಚರಿ ಮೂಡಿಸಿದೆ.

First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading