COVID-19: ಮಾರಕ ಕೊರೋನಾಗೆ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ತಮೋನಾಶ್​ ಘೋಷ್​​​ ಸಾವು

ಘೋಷ್​​ ನಮ್ಮನ್ನು ಅಗಲಿದ್ದಾರೆ. ಇವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ರಾಜ್ಯದ ಜನತೆ ಪರವಾಗಿ ಮೃತರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ ಎಂದರು ಮಮತಾ ಬ್ಯಾನರ್ಜಿ.

news18-kannada
Updated:June 24, 2020, 10:00 AM IST
COVID-19: ಮಾರಕ ಕೊರೋನಾಗೆ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ತಮೋನಾಶ್​ ಘೋಷ್​​​ ಸಾವು
ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ತಮೋನಾಶ್​ ಘೋಷ್​​​
  • Share this:
ಕೋಲ್ಕತ್ತಾ(ಜೂ.24): ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​​ ಶಾಸಕ ತಮೋನಾಶ್ ಘೋಷ್​​​(60) ಎಂಬುವರು ಮಾರಕ ಕೊರೋನಾ ವೈರಸ್​​ಗೆ ಬಲಿಯಾಗಿದ್ದಾರೆ. ಕೋವಿಡ್​​-19 ಚಿಕಿತ್ಸೆ ಫಲಕಾರಿಯಾಗದ ಕಾರಣ ಈ ಸೋಂಕಿಗೆ ತಮೋನಾಶ್​​​ ಅಸುನೀಗಿದ್ದಾರೆ ಎನ್ನುತ್ತಿವೆ ಮೂಲಗಳು. 

ಕಳೆದ ತಿಂಗಳು ತಮೋನಾಶ್​ ಘೋಷ್​ಗೆ ಕೊರೋನಾ ವೈರಸ್​ ಕಾಣಿಸಿಕೊಂಡಿತ್ತು. ನಂತರ ಚಿಕಿತ್ಸೆಗಾಗಿ ಕೋವಿಡ್​​-19 ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗೆ ಮೊದಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮೋನಾಶ್​ ಘೋಷ್​​​ಗೆ ನೀಡಿದ ಕೋವಿಡ್-19 ಚಿಕಿತ್ಸೆ ಫಲಿಸಲಿಲ್ಲ. ಹೀಗಾಗಿ ಈ ಮಾರಕ ಕೋವಿಡ್​​-19 ವೈರಸ್​ನಿಂದ ಸಾವನ್ನಪ್ಪಿದ್ದಾರೆ.

ಇನ್ನು, ತಮೋನಾಶ್​​ ಘೋಷ್​​​ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1988ರಿಂದಲೂ ತೃಣಮೂಲ ಕಾಂಗ್ರೆಸ್​ ಪಕ್ಷದ ಖಜಾಂಚಿಯಾಗಿದ್ದರು. ನಮ್ಮೊಂದಿಗೆ 35 ವರ್ಷದಿಂದ ಇದ್ದ ಘೋಷ್​​​​ ರಾಜ್ಯದ ಜನತೆ ಮತ್ತು ಪಕ್ಷಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಸಿದ್ದರು. ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದರು. ಇಂತಹ ಮಹಾನ್​​ ನಾಯಕ ಈಗ ನಮ್ಮೊಂದಿಗಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್​​ ಮಾಡಿದ್ದಾರೆ.


ಇದನ್ನೂ ಓದಿ: ಐಎಎಸ್​​ ಅಧಿಕಾರಿ ವಿಜಯಶಂಕರ್​​ ಆತ್ಮಹತ್ಯೆ ಪ್ರಕರಣ - ಪೊಲೀಸ್​​ ಎಫ್​​ಐಆರ್​​ನಲ್ಲಿ ಏನಿದೆ?

ಘೋಷ್​​ ನಮ್ಮನ್ನು ಅಗಲಿದ್ದಾರೆ. ಇವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ರಾಜ್ಯದ ಜನತೆ ಪರವಾಗಿ ಮೃತರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ ಎಂದರು ಮಮತಾ ಬ್ಯಾನರ್ಜಿ.
First published: June 24, 2020, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading