ಕೊರೊನಾ ಎರಡನೇ ಅಲೆ ತಡೆಯಲು ಕೇಂದ್ರ ಸರ್ಕಾರ 18 ವರ್ಷದ ಮೇಲ್ಪಟ್ಟವರಿಗೆ ಉಚಿತ ಲಸಿಕೆಯನ್ನು ಘೋಷಣೆ ಮಾಡಿದೆ. ಅಲ್ಲದೆ, ಇತ್ತೀಚೆಗೆ ಲಸಿಕೆ ನೀಡುವ ವೇಗ ಪಡೆದುಕೊಂಡಿದೆ. ಆದರೆ, ಈ ಲಸಿಕೀಕರಣ ಕಾರ್ಯಕ್ರಮದಲ್ಲಿ ಕೆಲ ಆರೋಪಗಳೂ ಕೇಳಿಬರುತ್ತಿದೆ. ದೇಶದ ಕೆಲವೆಡೆ ನಕಲಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ ಎಂಬ ಕೂಗು ಸಣ್ಣದಾಗಿ ಹೊರಹೊಮ್ಮುತ್ತಿದೆ. ಇದೇ ರೀತಿ, ಪಶ್ಚಿಮ ಬಂಗಾಳದ ಲೋಕಸಭಾ ಸಂಸದೆ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಿಮಿ ಚಕ್ರವರ್ತಿ ಅವರು ಕೋಲ್ಕತ್ತಾದ ಹೊಸ ಮಾರುಕಟ್ಟೆ ಪ್ರದೇಶದಲ್ಲಿ 'ನಕಲಿ' ವ್ಯಾಕ್ಸಿನೇಷನ್ ಡ್ರೈವ್ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಈ ಲಸಿಕೆ ಕೇಂದ್ರದಲ್ಲಿ ಸ್ವತ: ವ್ಯಾಕ್ಸಿನೇಷನ್ ಮಾಡಿಸಿಕೊಂಡ ನಂತರ ಯಾವುದೇ ಎಸ್ಎಂಎಸ್ ಅಥವಾ ಲಸಿಕೆ ಪ್ರಮಾಣಪತ್ರವನ್ನು ಪಡೆಯದ ನಂತರ ತನ್ನ ಅನುಮಾನ ಹುಟ್ಟಿಕೊಂಡಿದೆ ಎಂದು ಮಿಮಿ ಹೇಳಿದ್ದಾರೆ. ಈ ಸಂಬಂಧ ಹಿಂದೂಸ್ತಾನ್ ಟೈಮ್ಸ್ ಬಾಂಗ್ಲಾಕ್ಕೆ ಮಾಹಿತಿ ನೀಡಿದ ಜಾಧವ್ಪುರ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದೆ ಮಿಮಿ ಚಕ್ರವರ್ತಿ ಈ ಸಂಬಂಧ ತನಿಖೆಗೆ ಆದೇಶಿಸಿದರು. ಅಲ್ಲದೆ, ಪೊಲೀಸರು ಈಗಾಗಲೇ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಕೋಲ್ಕತಾ ಮುನ್ಸಿಪಲ್ ಕಮಿಷನ್ನ ಜಂಟಿ ಆಯುಕ್ತರು ಮಂಗಳಮುಖಿಯರಿಗೆ ಮತ್ತು ವಿಶಿಷ್ಟ ಸಾಮರ್ಥ್ಯದ ಜನರಿಗೆ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿದ್ದಾರೆ ಎಂಬ ಸಂದೇಶ ನನಗೆ ಬಂತು. ಆ ಲಸಿಕೀಕರಣ ಕಾರ್ಯಕ್ರಮಕ್ಕೆ ನೀವೂ ಹೋದರೆ ಆ ಜನರಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದು ಅವರು ನನಗೆ ಹೇಳಿದರು. ನಂತರ, ನಾನು ಜನರನ್ನು ಪ್ರೇರೇಪಿಸಲು ಅಲ್ಲಿಗೆ ಹೋದೆ ಮತ್ತು ಲಸಿಕೆ ಕೂಡ ಪಡೆದುಕೊಂಡೆ ಎಂದು ಸಂಸದೆ ಮಿಮಿ ಹೇಳಿದರು.
ಇದನ್ನೂ ಓದಿ: Bengaluru Murder: 24 ಗಂಟೆಯೊಳಗೆ ಮಾಜಿ ಕಾರ್ಪೋರೇಟರ್ ಹಂತಕರ ಬಂಧನ; ಸಿಎಂ ಯಡಿಯೂರಪ್ಪ ಭರವಸೆ
ಆದರೆ, ಲಸಿಕೆ ಪಡೆದುಕೊಂಡ ನಂತರ ಫಲಾನುಭವಿಗಳು ಸ್ವೀಕರಿಸುವ ಸಂದೇಶವನ್ನು ನಾನು ಸ್ವೀಕರಿಸದಿದ್ದಾಗ ನನಗೆ ಅನುಮಾನ ಬಂತು, ನನ್ನ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನೂ ನಾನು ಕೇಳಿದೆ, ಅದಕ್ಕೆ ಅವರು ಇನ್ನು ಸ್ವಲ್ಪ ಸಮಯದೊಳಗೆ ಸಿಗುತ್ತದೆ ಎಂದು ಹೇಳಿದರು. ಬಳಿಕ, ಲಸಿಕೆ ಪಡೆದುಕೊಂಡ ಜನರು ನೋಂದಣಿ ಸಂದೇಶಗಳನ್ನು ಸ್ವೀಕರಿಸಿದ್ದಾರೇ ಎಂದು ವಿಚಾರಿಸಲು ನಾನು ತಕ್ಷಣ ನನ್ನ ಕಚೇರಿಗೆ ಹೇಳಿದೆ. ಆದರೆ, ಅಲ್ಲಿದ್ದ ಜನರು ತಮಗೆ ಯಾವುದೇ ಮೆಸೇಜ್ ಬಂದಿಲ್ಲವೆಂದು ಹೇಳಿದರು ಎಂದು ಸಹ ತೃಣಮೂಲ ಕಾಂಗ್ರೆಸ್ ಲೋಕಸಭಾ ಸಂಸದೆ ಹೇಳಿಕೊಂಡಿದ್ದಾರೆ.
ನಾನು ತಕ್ಷಣ ವ್ಯಾಕ್ಸಿನೇಷನ್ ಡ್ರೈವ್ ಅನ್ನು ನಿಲ್ಲಿಸಿದೆ ಮತ್ತು ಪೊಲೀಸರ ಸಹಾಯದಿಂದ ಐಎಎಸ್ ಅಧಿಕಾರಿಯಾಗಿ ನಟಿಸಿದ ದೇಬಂಜನ್ ದೇಬ್ ಎಂಬಾತನನ್ನು ಬಂಧಿಸಿದೆ ಎಂದು ಮಿಮಿ ಹೇಳಿದ್ದಾರೆ. ಪೊಲೀಸರು ನಂತರ ನಕಲಿ ಗುರುತಿನ ಚೀಟಿಯನ್ನು, ಹ್ಯಾಂಡ್ ಸ್ಯಾನಿಟೈಸರ್ ಅನ್ನು ಮತ್ತು ಕೋಲ್ಕತ್ತಾದ ನಾಗರಿಕ ಪ್ರಾಧಿಕಾರದ ಲಾಂಛನ ಹೊಂದಿದ್ದ ಮಾಸ್ಕ್ಗಳನ್ನು ವಶಪಡಿಸಿಕೊಂಡರು,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ