ನವದೆಹಲಿ(ಮೇ.10): ಕೊರೋನಾ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಲಾಕ್ ಡೌನ್ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಅಂತರರಾಷ್ಟ್ರೀಯ ವಿಮಾನಗಳ ಮರು ಆರಂಭವಾಗಿದೆ. ವಿದೇಶದಿಂದ ಭಾರತಕ್ಕೆ ಕರೆತರಲು ಕಾರ್ಯಾಚರಣೆಯು ಮೇ.7 ರಿಂದ ಆರಂಭವಾಗಿದ್ದು, ಮೇ.14 ವರೆಗೆ ನಡೆಯಲಿದೆ. ಈ ವೇಳೆ ಅನಿವಾಸಿ ಭಾರತೀಯರನ್ನು ಕರೆತರಲು 64 ವಿಮಾನಗಳನ್ನು ಬಳಸಲಾಗುತ್ತಿದೆ.
ವಿದೇಶಗಳಿಂದ ಆಗಮಿಸುವವರಿಂದ ಕೊರೋನಾ ಹೆಚ್ಚಿನ ಸಂಖ್ಯೆಯಲ್ಲಿ ಹರಡಿದೆ ಎಂಬುದು ದೃಢವಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಗಮಿಸುತ್ತಿರುವ ಭಾರತೀಯರು ಡಬಲ್ ಎಚ್ಚರಿಕೆ ವಹಿಸಿದ್ದಾರೆ. ಮುಖಕ್ಕೆ ಮಾಸ್ಕ್ ಮಾತ್ರವಲ್ಲ ಅದರ ಮೇಲೆ ಫೇಸ್ ಶೀಲ್ಡ್ ಮಾಸ್ಕ್ ಧರಿಸುವ ಮೂಲಕ ತಮಗೆ ಯಾವುದೇ ಕಾರಣದಿಂದಲೂ ಕೊರೊನಾ ಸೋಂಕು ಬಾರದಿರಲಿ. ತಮ್ಮ ಬಳಿ ಕೊರೋನಾ ಗಾಳಿಯೂ ಸುಳಿಯದಿರಲಿ ಎಂದು ಕಟ್ಟೆಚ್ಚರ ವಹಿಸಿದ್ದಾರೆ.
ಈಗಾಗಲೇ ಸಿಂಗಾಪುರದಿಂದ ಮುಂಬೈಗೆ ಭಾರತೀಯರನ್ನು ಹೊತ್ತ ವಿಮಾನ ಹೊರಟಿದೆ. ವಿಮಾನದಲ್ಲಿ ಎಲ್ಲರೂ ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ಗಳನ್ನು ಮುಖಕಕ್ಕೆ ಹಾಕಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ಕೊರೋನಾ ಭಯ ಎಲ್ಲರನ್ನೂ ಕಂಗೆಡಿಸುತ್ತಿದೆ. ಮಾಸ್ಕ್ ಅಷ್ಟೇ ಅಲ್ಲ ಅದರ ಮೇಲೆ ಫೇಸ್ ಶೀಲ್ಡ್ ಹಾಕುವ ಪರಿಸ್ಥಿತಿ ವಿಮಾನ ಪ್ರಯಾಣಿಕರಲ್ಲಿ ಬಂದಿದೆ. ಕೊರೋನಾ ಬಗ್ಗೆ ಜನರಲ್ಲಿ ಬೇರೂರಿರುವ ಭಯಕ್ಕೆ ಇದು ಸಾಕ್ಷಿಯಾಗಿದೆ. ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ ಎಂದು ತಮ್ಮ ಟ್ವೀಟರ್ ನಲ್ಲಿ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಈ ಟ್ವೀಟ್ ಈಗ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರೂ ಕೂಡ ಇದಕ್ಕೆ ತಮ್ಮದೇ ಆದ ತರಹೇವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :
Ajit Jogi - ಕೋಮಾ ಸ್ಥಿತಿಗೆ ಜಾರಿದ ಛತ್ತೀಸ್ಗಡ ಮಾಜಿ ಸಿಎಂ ಅಜಿತ್ ಜೋಗಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ