‘ಪಾದರಾಯನಪುರ ಲೇಡಿ ಡಾನ್​​ ಫರ್ಜುವಾ ಹೆಂಗಸು, ನಮ್ಮ ಸಮುದಾಯವಲ್ಲ‘: ಸತ್ಯ ಬಯಲು ಮಾಡೋಕೆ ನಾವು ರೆಡಿ ಎಂದ ಮಂಗಳಮುಖಿಯರು

ಹೀಗೆ ಕೋರ್ಟ್​ ಆದೇಶದ ಮೇರೆಗೆ ಪೊಲೀಸ್ ವಶದಲ್ಲಿರುವ ನಾಲ್ವರ ಪೈಕಿ ಫರ್ಜುವಾ ಹೆಸರಿನ ಆರೋಪಿ ತಾನು ಮಂಗಳಮುಖಿ ಎಂದು ಹೇಳಿಕೊಂಡಿದ್ದಾರಂತೆ. ಹೀಗಾಗಿ ಪೊಲೀಸರಿಗೆ ಫರ್ಜುವಾ ವಿಚಾರಣೆ ತಲೆನೋವಾಗಿದೆ. ಫರ್ಜುವಾ ಜೊತೆಗೆ ಕಬೀರ್, ಇರ್ಷಾದ್ ಅಹ್ಮದ್, ಹರ್ಷದ್ ಹೆಸರಿನ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.

ಪಾದರಾಯನಪುರ ಗಲಾಟೆ ದೃಶ್ಯ.

ಪಾದರಾಯನಪುರ ಗಲಾಟೆ ದೃಶ್ಯ.

 • Share this:
  ಬೆಂಗಳೂರು(ಏ.21): ಪಾದರಾಯನಪುರ ಗಲಭೆಗೆ ಕಾರಣಳಾದ ​ಫರ್ಜುವಾ ಎಂಬ ಲೇಡಿ ಡಾನ್​​ ತನ್ನನ್ನು ತಾನು ಮಂಗಳಮುಖಿ ಎಂದು ಹೇಳಿಕೊಂಡಿದ್ದಾರೆ. ಈಕೆ ಹೆಂಗಸು, ಮಂಗಳಮುಖಿಯಲ್ಲ. ಅಗತ್ಯಬಿದ್ದರೆ ನಾವೇ ಆಕೆ ಮಂಗಳಮುಖಿಯಲ್ಲ ಎಂದು ಸಾಬೀತುಪಡಿಸುತ್ತೇವೆ ಎಂದು ನ್ಯೂಸ್​​-18 ಕನ್ನಡಕ್ಕೆ ಮಂಗಳಮುಖಿಯರು ಹೇಳಿಕೆ ನೀಡಿದ್ಧಾರೆ.

  ಇಂದು ನಗರದಲ್ಲಿ ನ್ಯೂಸ್​​-18 ಕನ್ನಡದ ಪ್ರತಿನಿಧಿಯೊಂದಿಗೆ ಮಾತಾಡಿದ ಮಂಗಳಮುಖಿ ಸಮುದಾಯದ ಮುಖಂಡರು, ಪೊಲೀಸರಿಗೆ ನಮ್ಮ ಸಹಾಕರದ ಅಗತ್ಯವಿದ್ದರೆ ನಾವು ನೆರವು ನೀಡುತ್ತೇವೆ. ನಮ್ಮಿಂದ ಈ ವಿಚಾರಕ್ಕೆ ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ಈಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾಟಕ ಮಾಡುತ್ತಿದ್ದಾಳೆ. ನಮ್ಮ ಸಮುದಾಯಕ್ಕೆ ಅವಮಾನ ಮಾಡುತ್ತಿದ್ಧಾಳೆ. ಸತ್ಯ ಬಯಲು ಮಾಯೋಕೆ ನಾವು ರೆಡಿ ಎಂದು ಹೇಳಿಕೊಂಡಿದ್ದಾರೆ.

  ಬೆಂಗಳೂರು ಪೊಲೀಸರು ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ನಿನ್ನೆಯೇ 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇದರಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ, ಐವರು ಅಪ್ರಾಪ್ತರನ್ನು ಬಾಲ ಮಂದಿರಕ್ಕೆ ಶಿಫ್ಟ್ ಮಾಡಿ ಎಂದು ನ್ಯಾಯಲಯ ಆದೇಶಿಸಿತ್ತು. ಜತೆಗೆ 50 ಜನ ಆರೋಪಿಗಳು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಸಿ ಎಂದು ಕೋರ್ಟ್​ ಸೂಚನೆ ನೀಡಿತ್ತು.

  ಇದನ್ನೂ ಓದಿ: Padarayanapura Riot: ರಾಜ್ಯವನ್ನೇ ನಡುಗಿಸಿದ ಪಾದರಾಯನಪುರ ಗಲಾಟೆ, ಕಂಬಿ ಹಿಂದೆ ಆರೋಪಿಗಳು; ಇಲ್ಲಿದೆ ಘಟನೆಯ ಕಂಪ್ಲೀಟ್ ಡೀಟೈಲ್ಸ್‌!

  ಹೀಗೆ ಕೋರ್ಟ್​ ಆದೇಶದ ಮೇರೆಗೆ ಪೊಲೀಸ್ ವಶದಲ್ಲಿರುವ ನಾಲ್ವರ ಪೈಕಿ ಫರ್ಜುವಾ ಹೆಸರಿನ ಆರೋಪಿ ತಾನು ಮಂಗಳಮುಖಿ ಎಂದು ಹೇಳಿಕೊಂಡಿದ್ದಾರಂತೆ. ಹೀಗಾಗಿ ಪೊಲೀಸರಿಗೆ ಫರ್ಜುವಾ ವಿಚಾರಣೆ ತಲೆನೋವಾಗಿದೆ. ಫರ್ಜುವಾ ಜೊತೆಗೆ ಕಬೀರ್, ಇರ್ಷಾದ್ ಅಹ್ಮದ್, ಹರ್ಷದ್ ಹೆಸರಿನ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.

  ಇನ್ನು, ಅನಿವಾರ್ಯವಾಗಿ ಪೊಲೀಸರು ಫರ್ಜುವಾರನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಈಕೆಯನ್ನು ಸೇರಿ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
  First published: