ಕೊರೋನಾ ಸಂಕಷ್ಟದಲ್ಲೂ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಡಯಟ್!

ಕೊಪ್ಪಳ ಜಿಲ್ಲೆಯ ಮುನಿರಾಬಾದ್​​ನ ಡಯಟ್​​ನಲ್ಲಿ ಜಿಲ್ಲೆಯ ನಾನಾ ತಾಲೂಕುಗಳ 20 ಶಾಲೆಯ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಜುಲೈ 15ರಿಂದ 15 ದಿನಗಳ ಕಾಲ ಇಂಗ್ಲಿಷ್ ಭಾಷೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯನ್ನು ಆನ್​ಲೈನ್​ ಮೂಲಕವೇ ಮಾಡಬಹುದಿತ್ತು ಎಂಬುದು ಸದ್ಯ ಕೇಳಿ ಬರುತ್ತಿರುವ ಮಾತು.

news18-kannada
Updated:July 16, 2020, 7:16 AM IST
ಕೊರೋನಾ ಸಂಕಷ್ಟದಲ್ಲೂ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಡಯಟ್!
ಶಿಕ್ಷಕರಿಗೆ ತರಬೇತಿ
  • Share this:
ಕೊಪ್ಪಳ(ಜು.15): ಎಲ್ಲೆಡೆ ಕೊರೋನಾ ಭೀತಿ ಆವರಿಸಿದ್ದು, ಶಾಲಾ-ಕಾಲೇಜುಗಳು,  ಶಿಕ್ಷಣ ಸಂಸ್ಥೆಗಳು ಆನ್​ಲೈನ್​ ಮೂಲಕವೇ ಮಕ್ಕಳಿಗೆ ಪಾಠ ಮಾಡಬೇಕು ಎಂದು ಒಂದು ಕಡೆ ಸರ್ಕಾರ ಹೇಳುತ್ತಿದೆ. ಆದರೆ ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರಿಗೆ ಆನ್​ಲೈನ್​ ಮೂಲಕ ತರಬೇತಿ ನೀಡುವ ಬದಲಾಗಿ, ನಿಗದಿತ ಸ್ಥಳ, ದಿನಗಳಲ್ಲಿ ಖುದ್ದು ತರಬೇತಿಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಈಗ ಶುರುವಾಗಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್​​ನ ಡಯಟ್​​ನಲ್ಲಿ ಜಿಲ್ಲೆಯ ನಾನಾ ತಾಲೂಕುಗಳ 20 ಶಾಲೆಯ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಜುಲೈ 15ರಿಂದ 15 ದಿನಗಳ ಕಾಲ ಇಂಗ್ಲಿಷ್ ಭಾಷೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯನ್ನು ಆನ್​ಲೈನ್​ ಮೂಲಕವೇ ಮಾಡಬಹುದಿತ್ತು ಎಂಬುದು ಸದ್ಯ ಕೇಳಿ ಬರುತ್ತಿರುವ ಮಾತು.

ಇಡೀ ಜಿಲ್ಲೆಯ 20 ಶಾಲೆಗಳ ಶಿಕ್ಷಕರು ಎಂದರೆ ಕೆಲ ಶಿಕ್ಷಕರಿಗೆ ಮುನಿರಾಬಾದ್ ಬಹಳ ಹತ್ತಿರವೂ ಇರಬಹುದು. ಹತ್ತಿರ ಇರುವಂಥ ಶಿಕ್ಷಕರಿಗೆ ಇದು ಅಷ್ಟೇನೂ ಸಮಸ್ಯೆಯಾಗಲಿಕ್ಕಿಲ್ಲ.  ಆದರೆ ಮುನಿರಾಬಾದ್​ಗೆ ದೂರದ ತಾಲೂಕುಗಳಾದ ಕೊಪ್ಪಳವೂ ಸೇರಿದಂತೆ ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ ತಾಲೂಕುಗಳಿಂದ ಆಯ್ಕೆಯಾದ ಶಿಕ್ಷಕರಿಗೆ ಖಂಡಿತವಾಗಿಯೂ ಈ ತರಬೇತಿ ಸಮಸ್ಯೆಯಾಗಿ ಕಾಡುತ್ತದೆ.

ಕಲಬುರ್ಗಿಯಲ್ಲಿ ಕೊರೋನಾ ಜೊತೆ ಮಳೆರಾಯನ ಅಬ್ಬರ; ಅಪಾರ ಪ್ರಮಾಣದ ಬೆಳೆ ಹಾನಿ

ತರಬೇತಿಗೆ ಆಯ್ಕೆಯಾದ ಶಿಕ್ಷಕರು ತಮ್ಮ ಮನೆ ಇರುವ ಊರಿನಿಂದ ಮುನಿರಾಬಾದ್​ಗೆ ತೆರಳಬೇಕೆಂದರೆ ಸ್ವಂತ ವಾಹನ ಹೊಂದಿರುವವರನ್ನು ಹೊರತುಪಡಿಸಿದರೆ ಉಳಿದವರು ಬಸ್ ಅವಲಂಬಿಸಲೇಬೇಕು. ಈಗ ಸಮಯಕ್ಕೆ ಸರಿಯಾಗಿ ಬಸ್​ಗಳ ಸೌಕರ್ಯ ಸಹ ಇಲ್ಲ. ತರಬೇತಿಗೆ ಹಾಜರಾದರೆ ಬಸ್ ಪ್ರಯಾಣದಿಂದ ಕೊರೊನಾ ಭೀತಿ ಒಂದು ಕಡೆಯಾದರೆ, ತರಬೇತಿಗೆ ಹಾಜರಾಗದಿದ್ದರೆ ಇಲಾಖೆಯ ಕ್ರಮ ಎದುರಿಸುವ ಭೀತಿ ಮತ್ತೊಂದು ಕಡೆ.

ಒಂದು ದಿನವಾದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ 15ದಿನಗಳ ಕಾಲ ಬಸ್ ಸಂಚಾರ ಕಷ್ಟವೂ ಹೌದು. ಆಪತ್ತು ತಂದೊಡ್ಡಿಕೊಳ್ಳುವ ವಿಚಾರವೂ ಹೌದು ಎಂಬುದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರ ಅಳಲು.

ಸರಿ ತರಬೇತಿಗೆ ಹಾಜರಾದರೆ ಅಲ್ಲಾದರೂ ಸರಿಯಾದ ವ್ಯವಸ್ಥೆ, ಮುಂಜಾಗ್ರತೆ ಇದೆ ಎಂದುಕೊಂಡರೆ ಅದೂ ಸಹ ಇಲ್ಲ. ತರಬೇತಿಗೆ ಹಾಜರಾದ ಶಿಕ್ಷಕರಿಗೆ ಖಾನಾವಳಿಯಿಂದ ಊಟ ತರಿಸಿಕೊಡುತ್ತಿರುವುದು ಸಹ ಸಮಂಜಸ ಕ್ರಮವಲ್ಲ. ಕೊರೊನಾ ಹರಡದಿರುವ ಯಾವ ಎಚ್ಚರಿಕೆ ಕ್ರಮಗಳು ತರಬೇತಿ ಸಮಯದಲ್ಲಿ ಶಿಕ್ಷಕರಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಕೋಟ್ಮುನಿರಾಬಾದ್​​ನ ಡಯಟ್​​​ನಲ್ಲಿ ಜುಲೈ 15ರಿಂದ 15ದಿನಗಳ ಕಾಲ ಆಯ್ದ ಶಿಕ್ಷಕರಿಗೆ ಇಂಗ್ಲಿಷ್ ವಿಷಯ ಕುರಿತ ತರಬೇತಿ ನಡೆಯುತ್ತಿರುವುದು ಸತ್ಯ. ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಹಾಗೂ ಮಾಸ್ಕ್ ನೀಡಲಾಗುತ್ತಿದೆ.

ತರಬೇತಿಗೆ ಬರುವ ಶಿಕ್ಷಕರಿಗೆ ತೊಂದರೆಯಾಗುತ್ತಿರುವುದು ನಿಜ. ಇದನ್ನು ಸರಕಾರದ ಗಮನಕ್ಕೆ ತರುತ್ತೇವೆ. ಮುಂದಿನ ದಿನಗಳಲ್ಲಿ ಕ್ಲಸ್ಟರ್​​ ಮಟ್ಟದಲ್ಲಿ ತರಬೇತಿ ನೀಡಲು ಸರಕಾರಕ್ಕೆ ಕೋರಲಾಗಿದೆ. ಸದ್ಯ ಸರಕಾರದ ಆದೇಶದನ್ವಯ ತರಬೇತಿ ನಡೆಯುತ್ತಿದೆ. ಸರಕಾರದ ಆದೇಶವನ್ನು ಪಾಲಿಸಲೇಬೇಕಲ್ಲ ಎಂದು ಹೇಳುತ್ತಾರೆ ಎಂದು ಡಯಟ್​ನ ಪ್ರಾಚಾರ್ಯರಾದ ಹನುಮಕ್ಕ ಹೇಳುತ್ತಾರೆ.
Published by: Latha CG
First published: July 16, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading