ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಏರುತ್ತಿರುವ ಕೊರೋನಾ; ನಿನ್ನೆ ಒಂದೇ ದಿನ‌ 5,611 ಕೇಸ್

Total Coronavirus Cases In India: ದೇಶದಲ್ಲಿ ನಿನ್ನೆ ಒಂದೇ ದಿನ 5,611 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗೆ ದಿನವೊಂದರಲ್ಲಿ ದಾಖಲಾದ ಅತಿ‌ ಹೆಚ್ಚು ಪ್ರಕರಣಗಳು.

news18-kannada
Updated:May 20, 2020, 10:10 AM IST
ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಏರುತ್ತಿರುವ ಕೊರೋನಾ; ನಿನ್ನೆ ಒಂದೇ ದಿನ‌ 5,611 ಕೇಸ್
Total Coronavirus Cases In India: ದೇಶದಲ್ಲಿ ನಿನ್ನೆ ಒಂದೇ ದಿನ 5,611 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗೆ ದಿನವೊಂದರಲ್ಲಿ ದಾಖಲಾದ ಅತಿ‌ ಹೆಚ್ಚು ಪ್ರಕರಣಗಳು.
  • Share this:
ನವದೆಹಲಿ(ಮೇ.20): ಕೊರೋನಾ ಸೋಂಕು ತಡೆಯಲೇಬೇಕೆಂದು ಒಂದಲ್ಲ, ಎರಡಲ್ಲ, ಮೂರಲ್ಲ ನಾಲ್ಕು ಬಾರಿ‌ ದೇಶಕ್ಕೆ ದೇಶವನ್ನೇ ದಿಗ್ಬಂಧನಕ್ಕೊಳಪಡಿಸಲಾಗಿದೆ. ಆದರೂ ಸೋಂಕು ಹರಡುವಿಕೆ ಮಾತ್ರ ಕಮ್ಮಿ ಆಗಿಲ್ಲ. ನಿನ್ನೆಯಷ್ಟೇ  ಒಂದು ಲಕ್ಷದ ಗಡಿ ದಾಟಿದ್ದ ಕೊರೋನಾ ಸಂಖ್ಯೆ ಈಗ ಇನ್ನೂ ಹೆಚ್ಚಾಗಿದೆ. ನಿನ್ನೆ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ದೇಶದಲ್ಲಿ ನಿನ್ನೆ ಒಂದೇ ದಿನ 5,611 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗೆ ದಿನವೊಂದರಲ್ಲಿ ದಾಖಲಾದ ಅತಿ‌ ಹೆಚ್ಚು ಪ್ರಕರಣಗಳು. ಇದಕ್ಕೂ ಮೊದಲು ಕಳೆದ  ಭಾನುವಾರ ದಾಖಲಾಗಿದ್ದ 5,242 ಪ್ರಕರಣಗಳೇ ದಿನವೊಂದರಲ್ಲಿ ದಾಖಲಾದ ಅತಿ‌ ಹೆಚ್ಚು ಎನಿಸಿತ್ತು. ಈಗ 5,611  ಪ್ರಕರಣಗಳು ದಾಖಲಾಗಿರುವುದರಿಂದ ದೇಶದ ಕೊರೊನಾ ಸಕು ಪೀಡಿತರ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಮೂರು ಸಾವಿರವನ್ನೂ ದಾಟಿತ್ತು. ನಿನ್ನೆ ಒಂದೇ ದಿನ ಕೊರೋನಾದಿಂದ 140 ಜನ ಮೃತಪಟ್ಟಿರುವುದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 3,303ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.

ಇದಕ್ಕೂ ಮೀರಿದ ಅಪಾಯ ಎಂದರೆ ಈಗ ಪ್ರತಿನಿತ್ಯ ನಾಲ್ಕೈದು ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಈಗಾಗಲೇ ಕೊರೋನಾ ಸೋಂಕು ಹರಡುವಿಕೆಯಲ್ಲಿ ಭಾರತವು ಚೀನಾವನ್ನೂ ಮೀರಿಸಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 6 ರಿಂದಲೇ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ಮೂರು ಸಾವಿರಕ್ಕಿಂತಲೂ ಹೆಚ್ಚಾಗಿದೆ.

ಮೇ 6 ರಂದು 3,561 ಜನರಿಗೆ, ಮೇ 7ರಂದು 3,390 ಮಂದಿಗೆ, ಮೇ 8ರಂದು 3,320 ಜನರಿಗೆ ಮತ್ತುಮೇ 9 ರಂದು 3,277 ಜನರಿಗೆ, ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ, ಮೇ 15ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242, ಮೇ 18ರಂದು 4,970 ಮತ್ತು ಮೇ 19ರಂದು 5,611ಹೊಸ ಪ್ರಕರಣಗಳು ಪತ್ತೆಯಾಗಿವೆ.

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಲಾಕ್​ಡೌನ್​​ ನಿಯಮಗಳನ್ನು ಸಡಿಲಗೊಳಿಸಿದ ಮೇಲೆ ಕೊರೋನಾ ಸೋಂಕು ಹರಡುವಿಕೆ ದುಪ್ಪಟ್ಟಾಗಿದೆ. ಸದ್ಯದ ಮಾಹಿತಿ ಪ್ರಕಾರ ಪ್ರಯಾಣಿಕರ ರೈಲು ಸಂಚಾರವನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತದೆ. ಅಂತರ ರಾಜ್ಯ ಸಂಚಾರಕ್ಕೂ ಅವಕಾಶ ಮಾಡಿಕೊಡಲಾಗಿದೆ. ಆದುದರಿಂದ ಲಾಕ್​ ಡೌನ್​ ನಡುವೆಯೇ ತೀವ್ರಗೊಂಡಿದ್ದ ಕೊರೋನಾ ಲಾಕ್ ​ಡೌನ್​ ಇಲ್ಲದಿದ್ದಾಗ ತೆಹಬದಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ : ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ; ಕೊರೋನಾ, ಅಂಫಾನ್ ಬಗ್ಗೆ ಚರ್ಚೆಪ್ರತಿದಿನವೂ ನಾಲ್ಕೈದು ಸಾವಿರ ಸೋಂಕು ಪೀಡಿತರು ಪತ್ತೆ ಆಗುತ್ತಿರುವುದರಿಂದ ಶೀಘ್ರವೇ ಭಾರತದ ‌ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಜಾಗತಿಕವಾಗಿ 'ಟಾಪ್ ಟೆನ್' ಒಳಗೂ ಬರುವ ಅಪಾಯವಿದೆ. ಸದ್ಯ ಜಾಗತಿಕವಾಗಿ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಈಗ ಭಾರತವು 11ನೇ ಸ್ಥಾನ ತಲುಪಿದೆ. 11ನೇ ಸ್ಥಾನದಲ್ಲಿದ್ದ ಚೀನಾ 12ನೇ ಸ್ಥಾನಕ್ಕೆ ಹೋಗಿದೆ.‌ ಅಮೇರಿಕಾ ಮೊದಲ ಸ್ಥಾನದಲ್ಲಿದೆ.
First published: May 20, 2020, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading