ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ : ಒಂದೇ ದಿನ 71 ಸಾವು, 2,627 ಜನರಿಗೆ ಸೋಂಕು ದೃಢ

ಬೆಂಗಳೂರು ಕೊರೋನಾ ಹಾಟ್​​ಸ್ಪಾಟ್ ಆಗಿ ಮುಂದುವರಿದಿದೆ. ನಗರದಲ್ಲಿ ಹೊಸ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ದಿನ 1,525 ಪ್ರಕರಣಗಳು ದಾಖಲಾಗಿವೆ.

news18-kannada
Updated:July 12, 2020, 8:25 PM IST
ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ : ಒಂದೇ ದಿನ 71 ಸಾವು, 2,627 ಜನರಿಗೆ ಸೋಂಕು ದೃಢ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜುಲೈ.12): ಇಂದು ರಾಜ್ಯದಲ್ಲಿ ಕೊರೋನಾ ಆರ್ಭಟ ತಾರಕಕ್ಕೇರಿದೆ. ಕಳೆದ 24 ಗಂಟೆ ಅವಧಿಯಲ್ಲಿ71 ಮಂದಿ ಸಾವನ್ನಪ್ಪಿದ್ದಾರೆ. 2,627 ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 38,843ಕ್ಕೆ ತಲುಪಿದ್ದು, ಸಾವಿನ ಪ್ರಮಾಣ 684ಕ್ಕೆ ಏರಿದೆ. 

ಈವರೆಗೆ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದವರ ಸಂಖ್ಯೆ 15,409 ಇದೆ. ಇದರೊದಿಗೆ ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 22,746ಕ್ಕೆ ಮುಟ್ಟಿದೆ. ಐಸಿಯುನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯದಲ್ಲಿ ಈಗ 532 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಕಲಬುರ್ಗಿಯಲ್ಲಿ ಕೊರೋನಾ ರುದ್ರನರ್ತನ ; ನಗರ ಪ್ರದೇಶದ ಸಂಪೂರ್ಣ ಲಾಕ್ ಡೌನ್ ಗೆ ಸರ್ಕಾರಕ್ಕೆ ಡಿಸಿ ಪತ್ರ

ಬೆಂಗಳೂರು ಕೊರೋನಾ ಹಾಟ್​​ಸ್ಪಾಟ್ ಆಗಿ ಮುಂದುವರಿದಿದೆ. ನಗರದಲ್ಲಿ ಹೊಸ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ದಿನ 1525 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಪ್ರಕರಣಗಳು ಬರೋಬ್ಬರಿ 18, 387ಮುಟ್ಟಿದೆ.  ನಗರದಲ್ಲಿ ಇಂದು 45 ಜನ ಸಾವನ್ನಪ್ಪಿದ್ದು, ಇಲ್ಲಿ ಸಾವಿನ ಸಂಖ್ಯೆ 274 ತಲುಪಿದೆ.

ಬೆಂಗಳೂರು ನಗರ 1525, ದಕ್ಷಿಣಕನ್ನಡ 196, ಧಾರವಾಡ 129, ಯಾದಗಿರಿ 120,  ಕಲಬುರ್ಗಿ 79,  ಬಳ್ಳಾರಿ 63, ಬೀದರ 62, ರಾಯಚೂರು 48, ಉಡುಪಿ 43, ಮೈಸೂರು 42, ಶಿವಮೊಗ್ಗ 42, ಚಿಕ್ಕಬಳ್ಳಾಪುರ 39, ಹಾಸನ 31, ಕೊಪ್ಪಳ 27, ತುಮಕೂರು 26, ಕೋಲಾರ 24, ದಾವಣಗೆರೆ 20,  ಬೆಂಗಳೂರು ಗ್ರಾಮಾಂತರ 19, ಕೊಡಗು 15,  ಗದಗ 14, ಚಾಮರಾಜನಗರ 13, ಉತ್ತರ ಕನ್ನಡ 12, ಹಾವೇರಿ 12, ಚಿಕ್ಕಮಗಳೂರು 10, ಬಾಗಲಕೋಟೆ 07, ಮಂಡ್ಯ 04, ರಾಮನಗರ 3, ಬೆಳಗಾವಿ 02 ಪ್ರಕರಣಗಳು ದಾಖಲಾಗಿವೆ.
Published by: G Hareeshkumar
First published: July 12, 2020, 8:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading