ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ : ಒಂದೇ ದಿನ 17 ಸಾವು, 2,228 ಜನರಿಗೆ ಸೋಂಕು ದೃಢ

ಬೆಂಗಳೂರು ಕೊರೋನಾ ಹಾಟ್​​ಸ್ಪಾಟ್ ಆಗಿ ಮುಂದುವರಿದಿದೆ. ನಗರದಲ್ಲಿ ಹೊಸ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ದಿನ 1,373 ಪ್ರಕರಣಗಳು ದಾಖಲಾಗಿವೆ

news18-kannada
Updated:July 9, 2020, 9:15 PM IST
ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ : ಒಂದೇ ದಿನ 17 ಸಾವು, 2,228 ಜನರಿಗೆ ಸೋಂಕು ದೃಢ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜುಲೈ. 09): ಇಂದು ರಾಜ್ಯದಲ್ಲಿ ಕೊರೋನಾ ಆರ್ಭಟ ತಾರಕಕ್ಕೇರಿದೆ. ಕಳೆದ 24 ಗಂಟೆ ಅವಧಿಯಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. 2,228 ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 31,105 ತಲುಪಿದ್ದು, ಸಾವಿನ ಸಂಖ್ಯೆ 487 ಮುಟ್ಟಿದೆ.

ಬೆಂಗಳೂರು ಕೊರೋನಾ ಹಾಟ್​​ಸ್ಪಾಟ್ ಆಗಿ ಮುಂದುವರಿದಿದೆ. ನಗರದಲ್ಲಿ ಹೊಸ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ದಿನ 1,373 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಪ್ರಕರಣಗಳು ಬರೋಬ್ಬರಿ 8,345 ಮುಟ್ಟಿದೆ.

ಇದನ್ನೂ ಓದಿ : ಮಲೆಮಹದೇಶ್ವರ ದೇಗುಲ ಮತ್ತೆ ಬಂದ್ ಮಾಡಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ರಾಜ್ಯಾದ್ಯಂತ ಇವತ್ತು 957 ರೋಗಿಗಳು ಗುಣಮುಖಗೊಂಡಿದ್ದಾರೆ. ಈವರೆಗೆ 12,833 ಮಂದಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದಂತಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಆಕ್ಟಿವ್ ಕೊರೊನಾ ಕೇಸ್​ಗಳ ಸಂಖ್ಯೆ 17,782 ಇದೆ. ಸದ್ಯ ರಾಜ್ಯದಲ್ಲಿ 457 ಜನ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

 

ಬೆಂಗಳೂರು 1373, ದಕ್ಷಿಣಕನ್ನಡ 167, ಕಲಬುರಗಿ 85, ಧಾರವಾಡ 75, ಮೈಸೂರು 52, ಬಳ್ಳಾರಿ 41, ದಾವಣಗೆರೆ 40, ಶಿವಮೊಗ್ಗ 37, ಬಾಗಲಕೋಟೆ 36, ಕೋಲಾರ 34, ಚಿಕ್ಕಬಳ್ಳಾಪುರ 32, ತುಮಕೂರು 27, ಮಂಡ್ಯ 24, ಉತ್ತರಕನ್ನಡ 23, ಉಡುಪಿ 22, ಹಾಸನ 21, ಹಾವೇರಿ 18, ರಾಮನಗರ 17, ಯಾದಗಿರಿ 16, ರಾಯಚೂರು 16, ಬೆಂಗಳೂರು ಗ್ರಾಮಾಂತರ 16, ಬೀದರ್ 15, ಚಾಮರಾಜನಗರ 12, ಬೆಳಗಾವಿ 09, ಗದಗ 06, ಚಿಕ್ಕಮಗಳೂರು 05, ಕೊಡಗು 04, ಕೊಪ್ಪಳ 02, ಚಿತ್ರದುರ್ಗ 02, ವಿಜಯಪುರ 01 ಪ್ರಕರಣಗ ದಾಖಲಾಗಿವೆ. 
Published by: G Hareeshkumar
First published: July 9, 2020, 7:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading