ರಾಜ್ಯದಲ್ಲಿ ಇಂದು 15 ಸಾವು,1,498 ಪ್ರಕರಣ ದಾಖಲು​ ; ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆ

ಸೋಂಕಿತರ ಪೈಕಿ ಸದ್ಯಕ್ಕೆ ರಾಜ್ಯದಲ್ಲಿ 14, 385 ಸಕ್ರಿಯ ಪ್ರಕರಣಗಳಿದ್ದು, 143 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

news18-kannada
Updated:July 7, 2020, 8:42 PM IST
ರಾಜ್ಯದಲ್ಲಿ ಇಂದು 15 ಸಾವು,1,498 ಪ್ರಕರಣ ದಾಖಲು​ ; ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು(ಜುಲೈ.07): ಕಳೆದ 24 ಗಂಟೆ ಅವಧಿಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. 1, 498 ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 26, 815 ತಲುಪಿದ್ದು, ಸಾವಿನ ಸಂಖ್ಯೆ 416ಕ್ಕೆ ಮುಟ್ಟಿದೆ.

ಬೆಂಗಳೂರು ಕೊರೋನಾ ಹಾಟ್​​ಸ್ಪಾಟ್ ಆಗಿ ಮುಂದುವರಿದಿದೆ. ನಗರದಲ್ಲಿ ಹೊಸ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ದಿನ 800 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಪ್ರಕರಣಗಳು ಬರೋಬ್ಬರಿ 11,361 ಮುಟ್ಟಿದೆ.

ರಾಜ್ಯಾದ್ಯಂತ ಈವರೆಗೆ 11,098 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಆಕ್ಟಿವ್ ಕೊರೋನಾ ಕೇಸ್​ಗಳ ಸಂಖ್ಯೆ 26,815, ಸೋಂಕಿತರ ಪೈಕಿ ಸದ್ಯಕ್ಕೆ ರಾಜ್ಯದಲ್ಲಿ 15,297 ಸಕ್ರಿಯ ಪ್ರಕರಣಗಳಿದ್ದು, 143 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರಿಗೆ ಕೊರೋನಾ ಸೋಂಕು ; ಚಾಮರಾಜನಗರ ಜಿಲ್ಲೆಯಲ್ಲಿ 120 ಕ್ಕೇರಿದ ಸೋಂಕಿತರ ಸಂಖ್ಯೆ

 

ಬೆಂಗಳೂರು 800, ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ 51, ಬೀದರ್ 51, ಮೈಸೂರು 49, ಬಳ್ಳಾರಿ 45, ರಾಮನಗರ 37, ಉತ್ತರ ಕನ್ನಡ 35, ಶಿವಮೊಗ್ಗ 33, ಮಂಡ್ಯ 29, ಉಡುಪಿ 28, ಹಾಸನ 26, ಬಾಗಲಕೋಟೆ 26, ರಾಯಚೂರು 23, ವಿಜಯಪುರ 22, ಬೆಳಗಾವಿ 20, ತುಮಕೂರು 16, ಕೊಡಗು 14, ಯಾದಗಿರಿ 10, ದಾವಣಗೆರೆ, ಕೋಲಾರ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು 6, ಕೊಪ್ಪಳ. 5, ಗದಗ 4, ಚಿಕ್ಕಬಳ್ಳಾಪುರ 3, ಚಿತ್ರದುರ್ಗ 1 ಪ್ರಕರಣಗಳು ದಾಖಲಾಗಿವೆ.
Published by: G Hareeshkumar
First published: July 7, 2020, 7:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading