ಮೈಸೂರು: ಮೈಸೂರಿನಲ್ಲಿ 28 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಫೇಸ್ಬುಕ್ ಮೂಲಕ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ 28 ಮಂದಿಯಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 21 ಮಂದಿ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆ ನೌಕರರು ಹಾಗೂ ಸಂಬಂಧಿತ ವ್ಯಕ್ತಿಗಳಾಗಿದ್ದಾರೆ. 5 ಮಂದಿ ದೆಹಲಿಯಿಂದ ಬಂದವರಿಗೆ ಸೋಂಕು ತಗುಲಿದೆ. ದೆಹಲಿಯಿಂದ ಬಂದವರು ಜನವರಿ ತಿಂಗಳಿನಿಂದ ಮೈಸೂರಿನಲ್ಲಿ ಇದ್ದರು. ಸುಮಾರು 10 ಮಂದಿ ದೆಹಲಿ ಮೂಲದ ವ್ಯಕ್ತಿಗಳು ಮೈಸೂರಿನಲ್ಲಿ ನೆಲೆಸಿದ್ದರು. ಮಾರ್ಚ್ 13ರಂದು ಅವರು ಮಂಡ್ಯಗೆ ತೆರಳಿದ್ದರು. ಸದ್ಯ ಪಾಸಿಟಿವ್ ಕಂಡುಬಂದವರ ಪ್ರಾಥಮಿಕ ಸಂಪರ್ಕದಲ್ಲಿ 8 ಮಂದಿ ಇದ್ದಾರೆ. ಆ 5 ಮಂದಿಗೆ ಬೆಂಗಳೂರು ಅಥವಾ ಮಂಡ್ಯದಲ್ಲಿ ಸೋಂಕು ತಗುಲಿರಬಹುದು ಎಂದು ಮಾಹಿತಿ ನೀಡಿದ್ದಾರೆ.
ಮೈಸೂರಿನ ಮೊದಲ ಇಬ್ಬರು ಸೋಂಕಿತರು ಶೀಘ್ರದಲ್ಲೇ ಡಿಸ್ಚಾರ್ಜ್ ಅಗಲಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಕೊರೋನಾದಿಂದ ಮುಕ್ತರಾಗುವ ವಿಶ್ವಾಸ ಇದೆ. ಅವರ ಗಂಟಲು ದ್ರವದ ಪರೀಕ್ಷೆ ನಡೆಸಿ ಶೀಘ್ರದಲ್ಲೇ ಅವರನ್ನು ಡಿಸ್ವಾರ್ಜ್ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದೆ. ಇಂದು 16 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 144ಕ್ಕೆ ಏರಿಕೆಯಾಗಿದೆ. ನಿನ್ನೆ ತಡರಾತ್ರಿ ಬಾಗಲಕೋಟೆಯಲ್ಲಿ 75 ವರ್ಷದ ವೃದ್ಧರೊಬ್ಬರು ಕೊರೋನಾ ವೈರಸ್ನಿಂದಾಗಿ ಸಾವನ್ನಪ್ಪಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಇನ್ನು, 11 ಮಂದಿ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಇದನ್ನು ಓದಿ: ನಾಳೆಯಿಂದ ಖಾಸಗಿ ಕ್ಲಿನಿಕ್ ತೆರೆಯಲು ಅನುಮತಿ, 7.5 ಲಕ್ಷ ಕುಟುಂಬಗಳಿಗೆ ಅರ್ಧ ಲೀ. ಹಾಲು; ಸುರೇಶ್ ಕುಮಾರ್
ಕರ್ನಾಟಕದಲ್ಲಿ ಇದುವೆರಗೂ 144 ಮಂದಿಗೆ ಕೊರೋನಾ ಬಂದಿರುವುದು ಧೃಡಪಟ್ಟಿದೆ. ಈ ಪೈಕಿ ಬೆಂಗಳೂರು- 55, ಬೆಂಗಳೂರು ಗ್ರಾಮಾಂತರ- 01, ಮೈಸೂರು- 28, ಬೀದರ್- 10, ಚಿಕ್ಕಬಳ್ಳಾಪುರ- 7, ದಕ್ಷಿಣ ಕನ್ನಡ- 12, ಉತ್ತರ ಕನ್ನಡ- 8, ಕಲಬುರಗಿ- 5, ದಾವಣಗೆರೆ- 3, ಉಡುಪಿ- 3, ಬೆಳಗಾವಿ- 3, ಬಳ್ಳಾರಿ- 5, ಕೊಡಗು- 1, ಧಾರವಾಡ- 1, ತುಮಕೂರು- 1 ಮತ್ತು ಬಾಗಲಕೋಟೆಯಲ್ಲೋರ್ವನಿಗೆ ಕೊರೋನಾ ವೈರಸ್ ತಗುಲಿದೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ