• Home
 • »
 • News
 • »
 • coronavirus-latest-news
 • »
 • ಮಾರಕ ಕೊರೋನಾ ವೈರಸ್​ಗೆ ಜಗತ್ತಿನಾದ್ಯಂತ 1.86 ಲಕ್ಷ ಜನ ಬಲಿ; 26 ಲಕ್ಷ ಮಂದಿಯಲ್ಲಿ ಸೋಂಕು

ಮಾರಕ ಕೊರೋನಾ ವೈರಸ್​ಗೆ ಜಗತ್ತಿನಾದ್ಯಂತ 1.86 ಲಕ್ಷ ಜನ ಬಲಿ; 26 ಲಕ್ಷ ಮಂದಿಯಲ್ಲಿ ಸೋಂಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದಲ್ಲಿ ಇದುವರೆಗೂ 21,393 ಕೊರೋನಾ ಪಾಸಿಟಿವ್​​ ಕೇಸುಗಳು ದಾಖಲಾಗಿವೆ. ಇಷ್ಟು ಪ್ರಕರಣಗಳ ಪೈಕಿ 4,257 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ವಿವಿಧ ರಾಜ್ಯಗಳಲ್ಲಿ 16,454 ಮಂದಿಯನ್ನು ಪ್ರತ್ಯೇಕವಾಗಿ ಆಸ್ಪತ್ರೆಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದೆ ಓದಿ ...
 • Share this:

  ನವದೆಹಲಿ: ಮಾರಕ ಕೊರೋನಾ ವೈರಸ್ ಕಬಂಧಬಾಹುಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಮರಣಮೃದಂಗ ಮುಂದುವರೆಸಿದೆ. ಜಗತ್ತಿನಾದ್ಯಂತ ಈವರೆಗೂ ಈ ಹೆಮ್ಮಾರಿ ಸೋಂಕಿಗೆ 1,86,150 ಮಂದಿ ಬಲಿಯಾಗಿದ್ದು, 26,66,390 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಸಮಾಧಾನದ ಸಂಗತಿ ಅಂದರೆ  7,30,855 ಜನರು ಮಾರಕ ಸೋಂಕಿನಿಂದ ಗುಣಮುಖರಾಗಿದ್ದಾರೆ.


  ಒಟ್ಟಾರೆ 17,49,385 ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 57,986 ಪ್ರಕರಣಗಳು ಗಂಭೀರವಾಗಿವೆ ಎಂದು ತಿಳಿದುಬಂದಿದೆ.


  ಈ ಸೋಂಕಿನ ಸಾವಿನ ಪ್ರಮಾಣದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕವೇ ಮುಂದಿದೆ. ಈವರೆಗೂ ಅಲ್ಲಿ 47,684 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 25,085 ಜನರು, ಸ್ಪೇನ್​ನಲ್ಲಿ 22,157 ಹಾಗೂ ಫ್ರಾನ್ಸ್​ನಲ್ಲಿ 21,340 ಜನರು ಕೊರೋನಾ ವೈರಸ್​ನಿಂದ ಮೃತಪಟ್ಟಿದ್ದಾರೆ.


  ಭಾರತದಲ್ಲಿ ಇದುವರೆಗೂ 21,393 ಕೊರೋನಾ ಪಾಸಿಟಿವ್​​ ಕೇಸುಗಳು ದಾಖಲಾಗಿವೆ. ಇಷ್ಟು ಪ್ರಕರಣಗಳ ಪೈಕಿ 4,257 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ವಿವಿಧ ರಾಜ್ಯಗಳಲ್ಲಿ 16,454 ಮಂದಿಯನ್ನು ಪ್ರತ್ಯೇಕವಾಗಿ ಆಸ್ಪತ್ರೆಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ 681 ಜನ ಕೋವಿಡ್​​-19 ಸೋಂಕಿಗೆ ಬಲಿಯಾಗಿದ್ದಾರೆ.


  ಇದನ್ನು ಓದಿ: ದೇಶದಲ್ಲಿ ಕೊರೋನಾ ಆರ್ಭಟ: ಇಂದು ಒಂದೇ ದಿನ 1409 ಕೇಸ್​​ ಪತ್ತೆ; 21 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ


  ಇನ್ನು, ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಸಂಜೆ ವೇಳೆಗೆ) 1409 ಮಂದಿಗೆ ಕೊರೋನಾ ಪತ್ತೆಯಾಗಿದೆ.  ಈ ಮೂಲಕ ದೇಶಾದ್ಯಂತ ಇದುವೆರಗೂ 21,393 ಪ್ರಕರಣಗಳು ಬೆಳಕಿಗೆ ಬಂದಿವೆ. ಸಂತಸದ ವಿಚಾರವೆಂದರೇ ಕಳೆದ 28 ದಿನಗಳಲ್ಲಿ ದೇಶದ 12 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಜತೆಗೆ ಕಳೆದ 14 ದಿನಗಳಲ್ಲಿ 78 ಜಿಲ್ಲೆಗಳಲ್ಲಿ ಒಂದೇ ಒಂದು ಕೋವಿಡ್​​-19 ಕೇಸ್​​​ ಬೆಳಕಿಗೆ ಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಸ್ಪಷ್ಟಪಡಿಸಿದೆ.

  Published by:HR Ramesh
  First published: