Corona:’’ಕೊರೋನಾ 3ನೇ ಅಲೆ ನಮ್ಮ ನಡುವೆ ಇದೆ’’ ಎಂದು ಎಚ್ಚರಿಸಿದ ಪ್ರಸಿದ್ದ ಭೌತಶಾಸ್ತ್ರಜ್ಞ

ಈ ಅಂಕಿ- ಅಂಶದ ಹೆಸರು ’ಡೈಲಿ ಡೆತ್​ ಲೋಡ್​’  (DDL) ಈ ನಕ್ಷೆಯನ್ನು  24 ಗಂಟೆಗಳ ಅವಧಿಯಲ್ಲಿ ಕರೋನವೈರಸ್ ಸಾವುಗಳು ಮತ್ತು ಹೊಸ ಸಕ್ರಿಯ ಪ್ರಕರಣಗಳ ಅನುಪಾತವನ್ನು ತೆಗೆದುಕೊಳ್ಳುವ ಮೂಲಕ ಲೆಕ್ಕಹಾಕಲಾಗಿದೆ.

ಜನನಿಬಿಡ ಪ್ರದೇಶ

ಜನನಿಬಿಡ ಪ್ರದೇಶ

 • Share this:
  ಕಳೆದ 15 ತಿಂಗಳುಗಳ ಅಂಕಿ-ಅಂಶಗಳನ್ನು ವಿಶ್ಲೇಷಿಸಿರುವ ಹಾಗೂ ಹೊಸ ಸೋಂಕುಗಳು ಮತ್ತು ಸಾವುಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಲೆಕ್ಕಾಚಾರ ಹಾಕಿರುವ ಹೈದರಾಬಾದ್ ಮೂಲದ ಸಂಶೋಧಕರ ತಂಡ ಸ್ಪೋಟಕ ಮಾಹಿತಿಯನ್ನು ಹೊರಗೆ ಹಾಕಿದ್ದು,  ಕರೋನ ಸಾಂಕ್ರಾಮಿಕ ರೋಗದ ಮೂರನೇ ಅಲೆ ಜುಲೈ 4 ರಂದು ಪ್ರಾರಂಭವಾಗಿ ನಮ್ಮ ನಡುವೆ ಕುಳಿತಿದೆ ಎಂದು ವರದಿ ಮಾಡಿದೆ.

  ಟೈಮ್ಸ್​ ಆಫ್​ ಇಂಡಿಯಾ ಈ ಕುರಿತು ವರದಿ ಮಾಡಿದ್ದು, ಡಾ. ವಿಪಿನ್​ ಶ್ರೀವಾಸ್ತವ್​, ಪ್ರಸಿದ್ದ ಭೌತ ವಿಜ್ಞಾನಿ ಹಾಗೂ ಹೈದರಾಬಾದ್​ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಈ ಸಂಗತಿಯನ್ನು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಎರಡನೇ ಅಲೆಯ ಅಟ್ಟಹಾಸ ಪ್ರಾರಂಭವಾಗಿದ್ದು ಫೆಬ್ರುವರಿಯ ಮೊದಲ ವಾರದಲ್ಲಿ ಆಗಲೇ ಒಂದಷ್ಟು ಹೊಸ ರೂಪಾಂತರದ ಕೇಸ್​ಗಳು ಸಹ ಬಂದವು ಆದರೆ ಈ ಅಬ್ಬರದಲ್ಲಿ ಅದು ಸದ್ದು ಮಾಡಲಿಲ್ಲ. ಎಲ್ಲಾ ರೀತಿಯ ಅಧ್ಯಯನಗಳ ಪ್ರಕಾರ ಈಗಾಗಲೇ ಅಂದರೆ ಜುಲೈ 4ರಂದೇ 3 ಅಲೆಯ ವೈರಸ್​ ಬಂದು ನಮ್ಮ ನಡುವೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

  ಡಾ. ಶ್ರೀವಾತ್ಸವ ಅವರು ವಿಶ್ಲೇಷಿಸಿದ ಸಂಗತಿಗಳಲ್ಲಿ ಅವರು ಮುಖ್ಯವಾಗಿ ತಿಳಿಸಿರುವ ಅಂಶ ಏನೆಂದರೇ,  ಹೊಸ ತರಂಗದ ಪ್ರಾರಂಭಿಕ ಹಂತದ ಚಿಹ್ನೆಗಳು ಗೋಚರಿಸುತ್ತಿವೆ. ಅವರ ಪ್ರಕಾರ, ಸಾಮಾಜಿಕ ಅಂತರ, ಸ್ಯಾನಿಟೈಜರ್​ ಬಳಕೆ, ಮಾಸ್ಕ್​ಗಳ ಬಳಕೆ ಮತ್ತು ವ್ಯಾಕ್ಸಿನೇಷನ್ ಮುಂತಾದ ಕರೋನವೈರಸ್ ತಡೆಗಟ್ಟಲು ಇರುವ ಅಂಶಗಳನ್ನು ನಿರ್ಲಕ್ಷಿಸಿದರೆ ಶೀಘ್ರದಲ್ಲೇ ಮತ್ತೊಮ್ಮೆ ನಾವು ಅವಘಡಕ್ಕೆ ತುತ್ತಾಗುತ್ತೇವೆ ಎಂದು ಎಚ್ಚರಿಸಿದ್ದಾರೆ. ಕಳೆದ 460 ದಿನಗಳ ದೈನಂದಿನ ಕೋವಿಡ್ -19 ಡೇಟಾವನ್ನು ಮ್ಯಾಪ್ ತಯಾರಿಸಿದ್ದು ನಂತರ ಈ ಸಂಗತಿಯನ್ನು ಹೊರಹಾಕಲಾಗಿದೆ ಎಂದು ಮೂಲಗಳು ವರದಿ ಹೇಳಿದೆ.

  ಈ ಅಂಕಿ- ಅಂಶದ ಹೆಸರು ’ಡೈಲಿ ಡೆತ್​ ಲೋಡ್​’  (DDL) ಈ ನಕ್ಷೆಯನ್ನು  24 ಗಂಟೆಗಳ ಅವಧಿಯಲ್ಲಿ ಕರೋನವೈರಸ್ ಸಾವುಗಳು ಮತ್ತು ಹೊಸ ಸಕ್ರಿಯ ಪ್ರಕರಣಗಳ ಅನುಪಾತವನ್ನು ತೆಗೆದುಕೊಳ್ಳುವ ಮೂಲಕ ಲೆಕ್ಕಹಾಕಲಾಗಿದೆ.

  ಡಾ. ಶ್ರೀವಾಸ್ತವ್​ ಅವರು ಹೇಳಿದಂತೆ ’’ನಾನು ಹೇಳಿರುವ ಲೆಕ್ಕಾಚಾರ ಸಮಯಕ್ಕೆ ತಕ್ಕಂತೆ ಬದಲಾಗುತ್ತದೆ. ಒಂದು ಸನ್ನಿವೇಶದಿಂದ ಮತ್ತೊಂದು ಸನ್ನಿವೇಶಕ್ಕೆ ಇದನ್ನು ಹೋಲಿಕೆ ಮಾಡಲು ಬರುವುದಿಲ್ಲ. ಈ ವ್ಯತ್ಯಾಸವನ್ನು ನಾನು ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.

  2021 ರ ಮೇ ತಿಂಗಳಲ್ಲಿ ಸಾವಿನ ಸಂಖ್ಯೆ ತುಂಬಾ ಹೆಚ್ಚಾಗಿದ್ದಾಗ , ಮೇ 6 ಮತ್ತು ಮೇ 17 ರ ನಡುವಿನ 10 ದಿನಗಳ ಅವಧಿಯಲ್ಲಿ ’ಡೈಲಿ ಡೆತ್​ ಲೋಡ್​’  (DDL) ತೀವ್ರವಾಗಿ ಏರಿಳಿತವಾಯಿತು ಎಂದು ಅವರು ವಿವರಿಸುತ್ತಾರೆ. ನಂತರ ಡಿಡಿಎಲ್ ಇಳಿಕೆಯಾಗಿದ್ದಾಗ ಇದ್ದಂತಹ ದನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಇದು ಹೇಳುತ್ತದೆ. ಎರಡನೇ ಅಲೆ ಉತ್ತುಂಗದಲ್ಲಿ ಇದ್ದಾಗಲೂ ಅತ್ಯಂತ ಕಡಿಮೆ ಸಾವು ಸಂಭವಿಸಿರುವುದನ್ನು ಈ ಅಂಕಿ-ಅಂಶ ಹೇಳುತ್ತದೆ ಎಂದಿದ್ದಾರೆ.

  ಇದನ್ನೂ ಓದಿ: ಲೋಕಲ್​ ವಸ್ತುಗಳನ್ನು ಬಳಸಿ ಬಾಂಬ್​ ತಯಾರಿಸುತ್ತಿದ್ದೆ: ಭಯೋತ್ಪಾದಕನಾದ ಡಿಪ್ಲೊಮೊ ಪದವೀಧರ

  ಜುಲೈ 4 ರಿಂದ, ಫೆಬ್ರವರಿ ಮಧ್ಯ ಭಾಗದಲ್ಲಿ ಎರಡನೇ ತರಂಗ ಪ್ರಾರಂಭವಾದಂತೆ ಡಿಡಿಎಲ್ ಏರಿಳಿತವಾಯಿತು ಎಂದು ವರದಿ ತಿಳಿಸಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: