ವಲಸೆ ಕಾರ್ಮಿಕರನ್ನು ಇನ್ನೂ ಯಾಕೇ ಮನೆಗೆ ಕಳಿಸಿಲ್ಲ? - ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ತರಾಟೆ

ಸದ್ಯ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆರೋಪಿಸಿದೆ. ನಾವು ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸಲು ಬೇಕಾದಷ್ಟು ರೈಲು ವ್ಯವಸ್ಥೆ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಇದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ. ಈ ಆರೋಪಕ್ಕೆ ಕೇಂದ್ರ ರೈಲ್ವೇ ಸಚಿವ ಪಿಯೂಷ್​ ಗೋಯಲ್​​, ಇದು ಶುದ್ದ ಸುಳ್ಳು ಎಂದು ತಿರುಗೇಟು ನೀಡಿದ್ಧಾರೆ.

ವಲಸಿಗರು (ಸಾಂದರ್ಭಿಕ ಚಿತ್ರ)

ವಲಸಿಗರು (ಸಾಂದರ್ಭಿಕ ಚಿತ್ರ)

 • Share this:
  ಮುಂಬೈ(ಜೂ.09): ಕೊರೋನಾ ವೈರಸ್ ಲಾಕ್‌ಡೌನ್​​ನಿಂದಾಗಿ ರಾಜ್ಯದಲ್ಲಿ ಸಿಲುಕಿರುವ ಎಲ್ಲಾ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕಳಿಸಲು ಇನ್ನೂ ಯಾಕೇ ಸರಿಯಾದ ವ್ಯವಸ್ಥೆ ಮಾಡಿಲ್ಲ? ಎಂದು ಸುಪ್ರೀಂಕೋರ್ಟ್​ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಶ್ನಿಸಿದೆ. ಸಾವಿರಾರು ವಲಸೆ ಕಾರ್ಮಿಕರು ತವರಿಗೆ ಹೋಗಲಾಗದೆ ಇನ್ನೂ ರಾಜ್ಯದಲ್ಲೇ ಇದ್ದಾರೆ. ಇವರು ಉಳಿದುಕೊಳ್ಳಲು ಆಶ್ರಯ ಕಲ್ಪಿಸದೆ, ಸರಿಯಾದ ಊಟದ ವ್ಯವಸ್ಥೆಯೂ ಮಾಡದೇ ಹೀಗ್ಯಾಕೇ ಇದ್ದೀರಿ. ವಲಸೆ ಕಾರ್ಮಿಕರು ತಮ್ಮ ಮನೆಗೆ ಸರಿಯಾದ ವ್ಯವಸ್ಥೆ ಮಾಡಿ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.

  ಮಹಾರಾಷ್ಟ್ರ ಸರ್ಕಾರ 5 ಲಕ್ಷ ಮಂದಿ ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಗಳಿಗೆ ಕಳಿಸಲಾಗಿದೆ. ಕೇವಲ 37 ಸಾವಿರ ಮಂದಿ ಮಾತ್ರ ಇನ್ನೂ ಇದ್ದಾರೆ ಎಂದು ಹೇಳಿದೆ. ರಾಜ್ಯ ಸರ್ಕಾರ ತನ್ನ ನೀತಿ ಮತ್ತು ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಬಹಳ ಎಡವುತ್ತಿದೆ. ನಿಮ್ಮ ನಿರ್ಧಾರಗಳ ಕೇವಲ ಪೇಪರ್​ ಮೇಲಿದೆ. ಇದು ಕಾರ್ಯರೂಪದಲ್ಲಿ ಇಲ್ಲ. ಹೀಗೆ ಮಾಡಿದರೇ ವಲಸೆ ಕಾರ್ಮಿಕರು ಬದುಕಲು ಕಷ್ಟವಾಗುತ್ತದೆ ಎಂದು ಸುಪ್ರೀಂಕೋರ್ಟ್​ ಜಸ್ಟೀಸ್​​​ ಅಶೋಕ್​​ ಭೂಷಣ್​​, ಸಂಜಯ್​​​ ಕಿಶನ್​ ಕೌಲ್​​, ಎಂ.ಆರ್​​ ಶಾ ನೇತೃತ್ವದ ನ್ಯಾಯಪೀಠ ಹೇಳಿದೆ.

  ಇನ್ನು, ರಾಜ್ಯ ಸರ್ಕಾರ ವಲಸೆ ಕಾರ್ಮಿಕರನ್ನು ಕಳಿಸಲು ಬೇಕಾದ ವ್ಯವಸ್ಥೆ ಮಾಡಬೇಕು. ತವರಿಗೆ ಹೋಗಲು ಬಯಸುವ ವಲಸೆ ಕಾರ್ಮಿಕರು ನೋಂದಣಿ ಮಾಡಲು ಒಂದು ಸೂಕ್ತ ಜಾಗವನ್ನು ಸೂಚಿಸಬೇಕು. ಸ್ಥಳೀಯ ಪೊಲೀಸ್​ ಠಾಣೆ ಅಥವಾ ಯಾವುದಾದರೂ ಸರ್ಕಾರ ಕಚೇರಿಗಳಲ್ಲಿ ಅವರ ಹೆಸರು ನೋಂದಣಿ ಮಾಡಿಕೊಂಡು ಮನೆಗೆ ಕಳಿಸಬೇಕು ಎಂದು ಸಾಂವಿಧಾನಿಕ ಪೀಠ ಆದೇಶಿಸಿದೆ.

  ಇದನ್ನೂ ಓದಿ: ಜೂ.14ರಂದು ನಡೆಯಬೇಕಿದ್ದ ಡಿಕೆಶಿ ಪದಗ್ರಹಣಕ್ಕೆ ಅನುಮತಿ ನಿರಾಕರಿಸಿದ ರಾಜ್ಯ ಸರ್ಕಾರ

  ಸದ್ಯ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆರೋಪಿಸಿದೆ. ನಾವು ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸಲು ಬೇಕಾದಷ್ಟು ರೈಲು ವ್ಯವಸ್ಥೆ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಇದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ. ಈ ಆರೋಪಕ್ಕೆ ಕೇಂದ್ರ ರೈಲ್ವೇ ಸಚಿವ ಪಿಯೂಷ್​ ಗೋಯಲ್​​, ಇದು ಶುದ್ದ ಸುಳ್ಳು ಎಂದು ತಿರುಗೇಟು ನೀಡಿದ್ಧಾರೆ.
  First published: