ಸತ್ತ ವ್ಯಕ್ತಿಗಳ ಹೆಸರಿನಲ್ಲೂ ಬೆಡ್ ಮುಂದುವರೆಸುತ್ತಿರುವ ಖಾಸಗಿ ಆಸ್ಪತ್ರೆಗಳ ಹೆಸರು ನಾಳೆ ಬಹಿರಂಗ; ಸಚಿವ ಆರ್.ಅಶೋಕ್

ಹಾಸಿಗೆ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಸತ್ತಿರುವಂತಹ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಮುಂದುವರೆಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾಳೆ ಅಂತಹ ಖಾಸಗಿ ಆಸ್ಪತ್ರೆಗಳ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ಸಚಿವ ಆರ್​.ಅಶೋಕ್

ಸಚಿವ ಆರ್​.ಅಶೋಕ್

 • Share this:
  ಬೆಂಗಳೂರು: ಎರಡು ದಿನಗಳ ಒಳಗೆ ಬೆಡ್ ಕೊಡದೇ ಇದ್ದರೆ ಒಪಿಡಿ ಬಂದ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 100ಕ್ಕೂ ಹೆಚ್ಚಿನ ಹಾಸಿಗೆಯುಳ್ಳ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿದ್ದೇವೆ. ಕಣ್ಣಾಮುಚ್ಚಾಲೇ ಆಟ ಬಿಟ್ಟು ಸರ್ಕಾರಕ್ಕೆ ನೀಡಬೇಕಾದ ಬೆಡ್ ಕೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಇನ್ನೆರಡು ದಿನದಲ್ಲಿ ಬೆಡ್ ಕೊಡದಿದ್ದರೆ ಓಪಿಡಿ ಬಂದ್ ಮಾಡಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

  ಬಿಬಿಎಂಪಿಯಿಂದ ಬಿಯೂ ನಂಬರ್ ನೀಡಿದರೂ ಅವರಿಗೆ ಇನ್ನು ಬೆಡ್ ಖಾಲಿ ಆಗಿಲ್ಲ ಎಂದು ಹೊರಗೆ ಇರಿಸುವ ಕೆಲಸ ಆಗುತ್ತಿದೆ. ಅವರನ್ನು ಆಸ್ಪತ್ರೆಯ ಒಳಗೆ ಇರಿಸಬೇಕು. ಬೆಡ್ ಹಂಚಿಕೆ ವಿಷಯವಾಗಿ ಸರ್ಕಾರ ಉಸ್ತುವಾರಿಗಳನ್ನು ನೇಮಿಸಿದೆ. ಮಂಜುನಾಥ್ ಪ್ರಸಾದ್ ಅವರು ಬೆಂಗಳೂರಿನ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಬೆಡ್ ಇನ್ ಚಾರ್ಜ್ ವಹಿಸಿಕೊಳ್ಳಲಿದ್ದಾರೆ. ತುಷಾರ್ ಗಿರಿನಾಥ್ ಅವರು ರಾಜ್ಯವ್ಯಾಪಿ ಬೆಡ್ ಇನ್ ಚಾರ್ಜ್ ಜವಾಬ್ದಾರಿ ಹೊತ್ತಿದ್ದಾರೆ. ಬೆಡ್ ನೀಡದ ಆಸ್ಪತ್ರೆ ಹೆಸರನ್ನು ನಾಳೆ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.

  ಚಿಕಿತ್ಸೆ ಮುಗಿದಿದ್ದರೂ  ಅವರನ್ನು ಮುಂದುವರೆಸುತ್ತಿರುವ ಕೆಲಸವನ್ನು ಖಾಸಗಿ ಆಸ್ಪತ್ರೆಗಳು ಮಾಡುತ್ತಿವೆ. 10 ದಿನ ಕಳೆದ ಬಳಿಕ ಚಿಕಿತ್ಸೆ ಮುಂದುವರೆಸಬೇಕಾದರೆ ಬಿಬಿಎಂಪಿಯ ಅನುಮತಿ ಪಡೆಯಬೇಕು. ನಾವು ಬದಲಾವಣೆ ತರಲು ಹೊರಟ್ಟಿದ್ದೇವೆ. ಹಾಸಿಗೆ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಸತ್ತಿರುವಂತಹ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಮುಂದುವರೆಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾಳೆ ಅಂತಹ ಖಾಸಗಿ ಆಸ್ಪತ್ರೆಗಳ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

  ಇದನ್ನು ಓದಿ: Karnataka Lockdown: 14 ದಿನ ಕರ್ನಾಟಕ ಸಂಪೂರ್ಣ ಲಾಕ್​ಡೌನ್?; ಕೆಲವೇ ಕ್ಷಣಗಳಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ

  ಕರ್ನಾಟಕದಲ್ಲಿ ದಿನವೊಂದಕ್ಕೆ ಅರ್ಧ ಲಕ್ಷದಷ್ಟು ಕೊರೋನಾ ಕೇಸುಗಳು ದಾಖಲಾಗುತ್ತಿರುವುದರಿಂದ ಇನ್ನೂ 14 ದಿನಗಳ ಕಾಲ ಕರ್ನಾಟಕದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಮೇ 12ರವರೆಗೂ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಇದರಿಂದಲೂ ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಮೇ 10ರಿಂದ 2 ವಾರಗಳ ಕಾಲ ಕಠಿಣ ಲಾಕ್​ಡೌನ್ ಜಾರಿಗೊಳಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಈಗಾಗಲೇ ಸಚಿವರು, ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಿಎಂ ಯಡಿಯೂರಪ್ಪ ಲಾಕ್​ಡೌನ್ ಜಾರಿಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

  ಸೆಮಿ ಲಾಕ್​ಡೌನ್​ನಿಂದ ಯಾವುದೇ ಉಪಯೋಗವಾಗದ ಕಾರಣ ಸೋಮವಾರದಿಂದ ಸಂಪೂರ್ಣ ಲಾಕ್​ಡೌನ್ ಮಾಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೊರೋನಾ ಮೊದಲ ಅಲೆಯ ಮಾದರಿಯಲ್ಲೇ 14 ದಿನಗಳ ಕಾಲ ಲಾಕ್​ಡೌನ್ ಘೋಷಣೆ ಮಾಡಲಾಗುತ್ತಿದ್ದು, ಪ್ಯಾಕೇಜ್ ಕೂಡ ಘೋಷಣೆ ಮಾಡುವ ಸಾಧ್ಯತೆಯಿದೆ. ಹಾಲು, ತರಕಾರಿ, ದಿನಸಿ ವಸ್ತುಗಳು, ಮೆಡಿಕಲ್ ಶಾಪ್​ಗೆ ಮಾತ್ರ ಅನುಮತಿ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಉಳಿದಂತೆ ಸಂಪೂರ್ಣ ಬಂದ್ ಆಗಿರಲಿದೆ.
  Published by:HR Ramesh
  First published: