Vaccine Drive: ನಾಳೆ ವಿಶೇಷ ಮಹಾ ಲಸಿಕೆ ಅಭಿಯಾನ; ಬೆಂಗಳೂರಿನಲ್ಲಿ ಒಂದೇ ದಿನ 5 ಲಕ್ಷ ಡೋಸ್ ಹಂಚಿಕೆ ಗುರಿ

ನಾಳೆ ಪ್ರಧಾನಿ ಮೋದಿ ಅವರ ಜನ್ಮ ದಿನದ ಪ್ರಯುಕ್ತ ರಾಜ್ಯ ಸರ್ಕಾರ ಮಹಾ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ನಾಳೆ ಪ್ರಧಾನಿ ಮೋದಿ ಅವರು 71ನೇ ವಸಂತಕ್ಕೆ ಕಾಲಿರಿಸಲಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಬೆಂಗಳೂರು: ನಾಳೆ ವಿಶೇಷ ಮಹಾ ಲಸಿಕೆ ಅಭಿಯಾನ ನಡೆಯಲಿದೆ. ಐದು ಲಕ್ಷ ಲಸಿಕೆ ವಿತರಿಸುವ ಗುರಿ ಇಟ್ಟುಕೊಂಡಿದ್ದೇವೆ. ಈವರೆಗೆ ಪಾಲಿಕೆ ಒಂದು ಲಕ್ಷ ಮೂವತ್ತು ಸಾವಿರ ಗಡಿ ದಾಟಿ ಲಸಿಕೆ ಹಂಚಿದೆ. ಆದರೆ ಈ ಬಾರಿ ಅದಕ್ಕೂ ದೊಡ್ಡ ಟಾರ್ಗೆಟ್ ಹೊಂದಿದ್ದೇವೆ. ಒಂದು ವಾರ್ಡ್ ನಲ್ಲಿ ಲಸಿಕೆ ಕೇಂದ್ರ ನಾಳೆ ಓಪನ್ ಆಗಲಿದೆ. ಈ ಮಹಾ ಅಭಿಯಾನಕ್ಕೆ ಹಲವು ಸಂಘ ಸಂಸ್ಥೆಗಳು ನಮ್ಮ ಜೊತೆ ಕೈ ಜೋಡಿಸಲಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು.

    ನಾಳೆ ಲಸಿಕೆ ಮಹಾ ಅಭಿಯಾನ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ನಾಳೆ ನಗರದ ಖಾಸಗಿ ಆಸ್ಪತ್ರೆ ಕೂಡ ದೊಡ್ಡ ಮಟ್ಟದಲ್ಲಿ ಲಸಿಕೆ ಹಂಚಲಿದೆ. ನಾಳೆ ನಗರದಾದ್ಯಂತ ಖಾಸಗಿ ಆಸ್ಪತ್ರೆ ಯಲ್ಲಿ ಬಿಬಿಎಂಪಿ ಬ್ಯಾನರ್ ನಲ್ಲಿ ಲಸಿಕೆ ನೀಡಲಾಗುವುದು. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಅಂದರೆ ಸತತ 12 ತಾಸು ಲಸಿಕೆ ಅಭಿಯಾನ ನಡೆಯಲಿದೆ. ನಾಳೆ ಲಸಿಕೆ ಕೇಂದ್ರಗಳು ಒಟ್ಟಾರೆ ಕೋವ್ಯಾಕ್ಸಿನ್ - 1 ಲಕ್ಷ ಡೋಸ್ ಹಾಗೂ ಕೋವಿಶೀಲ್ಡ್ - 4 ಲಕ್ಷ ಡೋಸ್ ನೀಡಲಿವೆ. ಕಾರ್ಮಿಕರೇ ನಾಳೆ ಲಸಿಕೆ ಅಭಿಯಾನದ ಟಾರ್ಗೆಟ್ ಎಂದು ಹೇಳಿದರು.

    ಲಸಿಕೆ ಮಹಾ ಅಭಿಯಾನ ಇದು ರಾಜ್ಯ ಸರ್ಕಾರದ ನಿರ್ಣಯ. ಈ ಹಿನ್ನೆಲೆ ಸರ್ಕಾರದ ನಿರ್ದೇಶನದ ಮೇರೆಗೆ ಈ ವಿಶೇಷ ಲಸಿಕಾ ಅಭಿಯಾನ ನಡೆಯಲಿದೆ. ಇದೇ ವೇಗದಲ್ಲಿ ಲಸಿಕೆ ಹಂಚಿಕೆಯಾದರೆ ಇಡೀ ಬೆಂಗಳೂರು ಲಸಿಕೆ ಪಡೆದುಕೊಳ್ಳಲಿದೆ. ಈಗಾಗಲೇ ಶೇ. 80 ಲಸಿಕೆ ಹಂಚಿಕೆಯಾಗಿದೆ. ಕೂಲಿ ಕಾರ್ಮಿಕರು, ವಲಸಿಗರು, ಆದ್ಯತೆ ಮೇರೆಗೆ ಬಂದು ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

    ನಾಳೆ ರಾಜ್ಯದಲ್ಲಿ ಬೃಹತ್ ಲಸಿಕಾ ಅಭಿಯಾನ ವಿಚಾರವಾಗಿ ಮಾತನಾಡಿದ ಗೌರವ್ ಗುಪ್ತಾ, ಈವರೆಗೆ ರಾಜ್ಯದಲ್ಲಿ ಒಟ್ಟು 4.8 ಕೋಟಿ‌ ಡೋಸ್ ಹಂಚಿಕೆಯಾಗಿದೆ. ರಾಜ್ಯದಲ್ಲಿ ಶೇ. 73 ರಷ್ಟು ಮೊದಲ ಡೋಸ್ ಹಾಗೂ ಶೇ. 27 ರಷ್ಟು ಎರಡನೇ ಡೋಸ್ ನೀಡಲಾಗಿದೆ. ನಾಳೆಯ ಲಸಿಕೆ ಅಭಿಯಾನಕ್ಕೆ‌ 34 ಲಕ್ಷ ಡೋಸ್ ಮೀಸಲಿಡಲಾಗಿದೆ. ರಾಜ್ಯಾದ್ಯಂತ 12,700 ಸರ್ಕಾರಿ ಲಸಿಕಾ ಕೇಂದ್ರ, 300 ಖಾಸಗಿ ಕೇಂದ್ರಗಳು ಹಾಗೂ 14,666 ಲಸಿಕಾ ಕೇಂದ್ರದಲ್ಲಿ ಲಸಿಕೆ ಹಂಚಿಕೆ ಆಗಲಿದೆ ಎಂದು ಮಾಹಿತಿ ನೀಡಿದರು.

    ನಾಳೆ ಪ್ರಧಾನಿ ಮೋದಿ ಅವರ ಜನ್ಮ ದಿನದ ಪ್ರಯುಕ್ತ ರಾಜ್ಯ ಸರ್ಕಾರ ಮಹಾ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ನಾಳೆ ಪ್ರಧಾನಿ ಮೋದಿ ಅವರು 71ನೇ ವಸಂತಕ್ಕೆ ಕಾಲಿರಿಸಲಿದ್ದಾರೆ.

    ರಾಜ್ಯದಲ್ಲಿ ಇಂದು 1108 ಕೊರೋನಾ ಪ್ರಕರಣ ಪತ್ತೆ

    ರಾಜ್ಯದಲ್ಲಿ ಇಂದು 1108 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂದು 18 ಜನ ಕೊರೋನಾಗೆ ಬಲಿ ಆಗಿದ್ದಾರೆ. 809 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು 308 ಕೇಸ್ ಪತ್ತೆಯಾಗಿವೆ. ಇಂದು ರಾಜಧಾನಿಯಲ್ಲಿ 5 ಸಾವು ದಾಖಲಾಗಿವೆ. ರಾಜ್ಯದಲ್ಲಿ ಪಾಸಿಟಿವಿಟ್ ಶೇ. 0.66 ರಷ್ಟಿದ್ದು, ಸಾವಿನ ಪ್ರಮಾಣ ಶೇ. 1.62 ರಷ್ಟಿದೆ.

    ಇದನ್ನು ಓದಿ: Explained: 71 ಸಾವಿರ ದೀಪಗಳು, 14 ಕೋಟಿ ಪಡಿತರ ಕಿಟ್ ವಿತರಣೆ.. ಹೇಗಿರಲಿದೆ ನಾಳೆ ಪ್ರಧಾನಿ ಮೋದಿ ಜನ್ಮ ದಿನ ಸಂಭ್ರಮಾಚರಣೆ?

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
    Published by:HR Ramesh
    First published: